ETV Bharat / city

ಕಾರಿಂಜದಲ್ಲಿ ರುದ್ರಗಿರಿಯ ರಣಕಹಳೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ - ಹಿಂದೂ ಜಾಗರಣಾ ವೇದಿಕೆ

ಬಂಟ್ವಾಳ ತಾಲೂಕಿನ ಕಾರಿಂಜದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಭಾನುವಾರ 'ರುದ್ರಗಿರಿಯ ರಣಕಹಳೆ' (Rudragiri Ranakahale) ಎಂಬ ಜನಜಾಗೃತಿ ಸಮಾವೇಶ ನಡೆಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.

Rudragiri Ranakahale function held in karinja
ಕಾರಿಂಜದಲ್ಲಿ ನಡೆದ ರುದ್ರಗಿರಿಯ ರಣಕಹಳೆ ಜನಜಾಗೃತಿ ಸಮಾವೇಶ
author img

By

Published : Nov 22, 2021, 10:28 AM IST

ಬಂಟ್ವಾಳ: ತಾಲೂಕಿನ ಕಾರಿಂಜದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಭಾನುವಾರ 'ರುದ್ರಗಿರಿಯ ರಣಕಹಳೆ' (Rudragiri Ranakahale) ಎಂಬ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ವಿವಿಧ ಬೇಡಿಕೆಗಳನ್ನು ಡಿ.21ಒಳಗೆ ಈಡೇರಿಸುವಂತೆ ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಸೂಚಿಸಿದರು.

ಕಾರಿಂಜ ದೇವಸ್ಥಾನದ ರಥಬೀದಿಯಲ್ಲಿ ನಡೆದ ಸಭೆಯಲ್ಲಿ ಭಾಷಣ ಮಾಡಿದ ಅವರು, ದೇವಸ್ಥಾನದ ಪರಿಸರವನ್ನು ಧಾರ್ಮಿಕ ವಲಯವನ್ನಾಗಿ ಘೋಷಿಸಬೇಕು. ಭಕ್ತರ ಅನುಕೂಲತೆಗಾಗಿ ಮುಂದಿನ ಶಿವರಾತ್ರಿಗೆ ಶಿವಮಾಲೆ ಧಾರಣೆ ನಡೆಸಿ ಎಲ್ಲೆಡೆಯಿಂದ ಭಕ್ತರಿಗೆ ಬರಲು ಅನುವು ಮಾಡಿಕೊಡಬೇಕು. ದೇವಸ್ಥಾನಕ್ಕೆ ಅನ್ಯ ಧರ್ಮೀಯರ ಪ್ರವೇಶ ನಿಷೇಧಿಸಬೇಕು. ಪ್ರವಾಸೋದ್ಯಮದ ಹೆಸರಿನಲ್ಲಿ ದೇವಸ್ಥಾನದ ಪಾವಿತ್ರ್ಯತೆ ಕೆಡಿಸಬಾರದು.

ದೇವಸ್ಥಾನದ ಪರಿಸರದಲ್ಲಿ ನಡೆಯುವ ಗಣಿಗಾರಿಕೆಯನ್ನು ಜಿಲ್ಲಾಡಳಿತ ತಕ್ಷಣ ನಿಲ್ಲಿಸಬೇಕು. ಗೋಮಾಳ ಪ್ರದೇಶವನ್ನು ದೇವಸ್ಥಾನದ ಸುಪರ್ದಿಗೆ ಬಿಟ್ಟು ಕೊಡಬೇಕು ಎಂದು ಒತ್ತಾಯಿಸಿದರು.

ಕಾರಿಂಜದಲ್ಲಿ ನಡೆದ ರುದ್ರಗಿರಿಯ ರಣಕಹಳೆ ಜನಜಾಗೃತಿ ಸಮಾವೇಶ

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಮಂತ್ರಿ, ಶಾಸಕರು ಬಂಟ್ವಾಳ ತಾಲೂಕಿನ ಕಾರಿಂಜ ಕ್ಷೇತ್ರದ ಪಾವಿತ್ರ್ಯತೆ ಉಳಿಸಬೇಕು, ಗಣಿಗಾರಿಕೆ ನಿಲ್ಲಿಸಬೇಕು. ಒಂದು ವೇಳೆ ಬೇಡಿಕೆ ಈಡೇರಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಬೇಕು ಎಂದರು.

ಇದನ್ನೂ ಓದಿ: ನದಿಯಲ್ಲಿ ಸ್ನಾನ ಮಾಡಲು ಹೋಗಿ ಯುವಕ ನೀರು ಪಾಲು: ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.