ETV Bharat / city

ನಾಳೆ‌ ಮಂಗಳೂರಿನಲ್ಲಿ ರೋಹಿತ್ ಚಕ್ರತೀರ್ಥಗೆ ನಾಗರಿಕ ಸನ್ಮಾನ : ಡಿವೈಎಫ್ಐನಿಂದ ಪ್ರತಿಭಟನೆಯ ಎಚ್ಚರಿಕೆ

ಮಂಗಳೂರಿನಲ್ಲಿ ನಡೆಯಲಿರುವ ಚಿಂತನ ಗಂಗಾ ಕಾರ್ಯಕ್ರಮದಲ್ಲಿ ರೋಹಿತ್ ಚಕ್ರತೀರ್ಥಗೆ ನಾಗರಿಕ ಸನ್ಮಾನ ಮಾಡುತ್ತಿರುವುದನ್ನು ಡಿವೈಎಫ್ಐ ಸಂಘಟನೆ ವಿರೋಧಿಸಿದೆ..

author img

By

Published : Jun 24, 2022, 5:16 PM IST

Rohit Chakrathirth to be civic felicitation tomorrow in Mangalore DYFI Organization protest
ನಾಳೆ‌ ಮಂಗಳೂರಿನಲ್ಲಿ ರೋಹಿತ್ ಚಕ್ರತೀರ್ಥಗೆ ನಾಗರಿಕ ಸನ್ಮಾನ

ಮಂಗಳೂರು : ಪಠ್ಯಪುಸ್ತಕ ಪರಿಷ್ಕರಣೆ ಮಾಡಿ ವಿವಾದಕ್ಕೀಡಾಗಿರುವ ರೋಹಿತ್ ಚಕ್ರತೀರ್ಥ ಅವರಿಗೆ ನಾಳೆ ಮಂಗಳೂರಿನಲ್ಲಿ ನಾಗರಿಕ ಸನ್ಮಾನ ಆಯೋಜಿಸಿರುವುದು ಪ್ರಗತಿಪರರ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳೂರಿನ ಡೊಂಗರಕೇರಿಯ ಭುವನೇಂದ್ರ ಸಭಾಭವನದಲ್ಲಿ ನಾಳೆ ಸಂಜೆ 5 ಗಂಟೆಗೆ ರೋಹಿತ್ ಚಕ್ರತೀರ್ಥ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಭರತಖಂಡದ ಗತವೈಭವ ಮತ್ತು ಅಳಿಸಿಹೋದ ಇತಿಹಾಸ ಎಂಬ ವಿಷಯದ ವಿಚಾರ ಮಂಡನೆಯನ್ನು ರೋಹಿತ್ ಚಕ್ರತೀರ್ಥ ಮಾಡಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಪತಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ವಹಿಸಲಿದ್ದಾರೆ.

ರೋಹಿತ್ ಚಕ್ರತೀರ್ಥಗೆ ನಾಗರಿಕ ಸನ್ಮಾನಕ್ಕೆ ಡಿವೈಎಫ್ಐ ಸಂಘಟನೆಯಿಂದ ವಿರೋಧ..

ಪಠ್ಯಪುಸ್ತಕ ವಿವಾದದ ಬಳಿಕ ರೋಹಿತ್ ಚಕ್ರತೀರ್ಥ ಅವರಿಗೆ ನಾಗರಿಕ ಸನ್ಮಾನ ಏರ್ಪಡಿಸಿರುವುದು ಮತ್ತು ಆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಪತಿ ಸುಬ್ರಹ್ಮಣ್ಯ ಯಡಪಡಿತ್ತಾಯ ವಹಿಸಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು, ನಾಗರಿಕರ ಹೆಸರಿನಲ್ಲಿ ಸನ್ಮಾನ ಆಯೋಜಿಸಿರುವುದನ್ನು ವಿರೋಧಿಸುತ್ತೇವೆ. ಅವರದೆ ಸಂಘಟನೆಯ ಹೆಸರಿನಲ್ಲಿ ಸನ್ಮಾನ ಮಾಡಲಿ. ಆದರೆ, ನಾಗರಿಕರ ಹೆಸರಿನಲ್ಲಿ ಸನ್ಮಾನ ಮಾಡುವುದನ್ನು ವಿರೋಧಿಸುತ್ತೇವೆ. ಈ ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕುಲಪತಿ ಭಾಗಿಯಾಗುತ್ತಿರುವುದು ಬೇಸರ ತಂದಿದೆ ಎಂದರು.

ಕುಲಪತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ನ ರೋಹಿತ್ ಚಕ್ರತೀರ್ಥ ಮಾಡಿರುವ ಎಡವಟ್ಟುಗಳಿಗೆ ಸಹಮತ ಇದೆಯೇ ಎಂಬುದನ್ನು ಸ್ಪಷ್ಟಪಡಿಸಲಿ. ನಾಗರಿಕರ ಹೆಸರಿನಲ್ಲಿ ಸನ್ಮಾನ ಮಾಡುವುದು, ಮಂಗಳೂರು ವಿವಿ ಕುಲಪತಿ, ಶಾಸಕರು ಭಾಗಿಯಾಗುವ ಈ ಕಾರ್ಯಕ್ರಮ ಕೈಬಿಡದಿದ್ದರೆ ಕಾರ್ಯಕ್ರಮ ವಿರೋಧಿಸಿ ಪ್ರತಿಭಟಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಅಗ್ನಿಪಥ್ ವಿರುದ್ಧ ದುರುದ್ದೇಶ, ರಾಜಕೀಯ ಪ್ರೇರಿತ ಹೋರಾಟ: ಬಿ.ವೈ.ರಾಘವೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.