ETV Bharat / city

ಕೊರೊನಾ ವೇಳೆ ವಿದ್ಯುತ್,ತೈಲಬೆಲೆ ಏರಿಸಿ ಗಾಯದ ಮೇಲೆ ಬರೆ : ರಮಾನಾಥ ರೈ - ಮಾಜಿ ಸಚಿವ ರಮಾನಾಥ ರೈ

ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಇಂಧನ ಬೆಲೆ ಕಡಿಮೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಆದರೆ, ಲಾಕ್​ಡೌನ್ ಸಂಕಷ್ಟದಲ್ಲಿ ಉದ್ಯೋಗ ಕಳೆದುಕೊಂಡಿರುವ ಸಮಯದಲ್ಲಿ ಒಂದು ಲೀಟರ್ ಪೆಟ್ರೋಲ್​ಗೆ 30 ರೂ. ಹೆಚ್ಚಳ ಮಾಡಲಾಗಿದೆ..

ramanatha-rai-outrage-against-central-and-state-government
ಕೇಂದ್ರ,ರಾಜ್ಯ ಸರ್ಕಾರದ ವಿರುದ್ಧ ರಮಾನಾಥ ರೈ ಆಕ್ರೋಶ
author img

By

Published : Jun 16, 2021, 7:29 PM IST

ಮಂಗಳೂರು : ಆಡಳಿತ ನಡೆಸುವ ಸರ್ಕಾರಗಳು ಲಾಕ್​ಡೌನ್ ನಡುವೆ ಜನರ ಮೇಲೆ ವಿದ್ಯುತ್,ತೈಲ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿವೆ ಎಂದು ಮಾಜಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ,ರಾಜ್ಯ ಸರ್ಕಾರದ ವಿರುದ್ಧ ರಮಾನಾಥ ರೈ ಆಕ್ರೋಶ

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದೆ ನಮ್ಮ ದೇಶದ ಜನರು ಬಹಳಷ್ಟು ಕಷ್ಟಪಡುತ್ತಿದ್ದಾರೆ. ಸರ್ಕಾರದ ವೈಫಲ್ಯವೂ ಇದಕ್ಕೆ ಕಾರಣ. ಇದರ ನಡುವೆ ಈ ಬೆಲೆ ಏರಿಕೆ ಜನರಿಗೆ ದುಸ್ತರವಾಗಿ ಪರಿಣಮಿಸಿದೆ ಎಂದರು. 17-18 ಸಲ ತೈಲ ಬೆಲೆಯೇರಿಕೆ ಮಾಡಲಾಗಿದೆ.

ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಇಂಧನ ಬೆಲೆ ಕಡಿಮೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಆದರೆ, ಲಾಕ್​ಡೌನ್ ಸಂಕಷ್ಟದಲ್ಲಿ ಉದ್ಯೋಗ ಕಳೆದುಕೊಂಡಿರುವ ಸಮಯದಲ್ಲಿ ಒಂದು ಲೀಟರ್ ಪೆಟ್ರೋಲ್​ಗೆ 30 ರೂ. ಹೆಚ್ಚಳ ಮಾಡಲಾಗಿದೆ.

ಅಲ್ಲದೆ ವಿದ್ಯುತ್ ದರವೂ ಒಂದು ಯುನಿಟ್​ಗೆ 30 ಪೈಸೆಯಂತೆ ಹೆಚ್ಚಳ ಮಾಡಲಾಗಿದೆ. ಏಳು ತಿಂಗಳ ಹಿಂದೆಯೂ ಒಂದು ಯುನಿಟ್​ಗೆ 40 ಪೈಸೆ ಹೆಚ್ಚಳ ಮಾಡಲಾಗಿತ್ತು ಎಂದು ಟೀಕಿಸಿದ್ದಾರೆ.

ಓದಿ:ಪಕ್ಷದಲ್ಲಿ ಏನೇ ಆದರೂ ನಮ್ಮ ಕುರ್ಚಿ ಭದ್ರವಾಗಿರಲಿ : ವಲಸೆ ನಾಯಕರು ಅರುಣ್ ಸಿಂಗ್​ಗೆ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.