ETV Bharat / city

ಅಳದಂಗಡಿ ಸಮೀಪದ ಮನೆಯೊಂದರಲ್ಲಿ ಅವಿತಿದ್ದ ಕಾಳಿಂಗ ಸೆರೆ - Navara village of Belthangady taluk

ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪದ ನಾವರ ಗ್ರಾಮದ ಮನೆಯೊಂದರಲ್ಲಿ ಮೂರು ದಿನಗಳಿಂದ ಅವಿತುಕೊಂಡಿದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ.

belthangady
ಕಾಳಿಂಗ ಸರ್ಪ ಸೆರೆ
author img

By

Published : Jun 1, 2021, 7:07 AM IST

ಬೆಳ್ತಂಗಡಿ (ದಕ್ಷಿಣ ಕನ್ನಡ): ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪದ ನಾವರ ಗ್ರಾಮದ ಕೋಡೆಲ್​ ಎಂಬಲ್ಲಿ ಹಳೆಯ ಮನೆಯೊಂದರಲ್ಲಿ ಕಳೆದ ಮೂರು ದಿನಗಳಿಂದ ಅವಿತುಕೊಂಡಿದ್ದ ಕಾಳಿಂಗ ಸರ್ಪವನ್ನು ಸ್ನೇಕ್ ಅಶೋಕ್ ಲಾಯಿಲ ಸೆರೆ ಹಿಡಿದರು.

ಮೂರು ದಿನಗಳಿಂದ ಅವಿತಿದ್ದ ಕಾಳಿಂಗ ಸರ್ಪ ಸೆರೆ

ನಾವರ ಗ್ರಾಮದ ಕೋಡೆಲ್​ ಧರ್ಣಪ್ಪ ಮಲೆಕುಡಿ ಎಂಬುವವರ ಹಳೆಯ ಮನೆಯಲ್ಲಿ ಮಳೆಗಾಲಕ್ಕೆ ಕಟ್ಟಿಗೆ ಸಂಗ್ರಹಿಸಿಡಲಾಗಿತ್ತು. ಈ ಕಟ್ಟಿಗೆ ರಾಶಿಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೇರಿಕೊಂಡಿತ್ತು. ಮನೆಯವರು ಸ್ವಲ್ಪಹೊತ್ತಿನ ಬಳಿಕ ಹೋಗಬಹುದು ಎಂದು ತಿಳಿದಿದ್ದರು.

ಆದರೆ, ಕಾಳಿಂಗ ಸರ್ಪ ಮೂರು ದಿನವಾದರೂ ಹೋಗದ ಕಾರಣ ಸ್ನೇಕ್ ಅಶೋಕ್ ಲಾಯಿಲ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಅಶೋಕ್​, ಕಾಳಿಂಗ ಸರ್ಪವನ್ನು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಇದನ್ನೂ ಓದಿ: ಅನ್ಯಜಾತಿ ಪ್ರೇಮಿಗಳನ್ನ ತಲೆ ಬೋಳಿಸಿ ದಂಡಿಸಿದ ಕುಟುಂಬಸ್ಥರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.