ETV Bharat / city

ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ : ಇಬ್ಬರು ದಲ್ಲಾಳಿಗಳ ಬಂಧನ - ವೇಶ್ಯಾವಟಿಕೆ ದಂಧೆ ಮೇಲೆ ಮಂಗಳೂರು ಸಿಸಿಬಿ ದಾಳಿ

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ದಲ್ಲಾಳಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ 10,060 ರೂ. ನಗದು, 3 ಮೊಬೈಲ್ ‌ಫೋನ್ ಮತ್ತು ಒಂದು ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ..

Prostitution rocket busted in Mangaluru, ಮಂಗಳೂರಲ್ಲಿ ವೇಶ್ಯವಾಟಿಕೆ ದಂಧೆ
ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ
author img

By

Published : Nov 26, 2021, 7:09 PM IST

ಮಂಗಳೂರು : ಬಾಡಿಗೆ ಮನೆ ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಓರ್ವ ‌ಮಹಿಳೆ ಸಹಿತ ಇಬ್ಬರು ದಲ್ಲಾಳಿಗಳನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಉಳಿಯಾರಗೋಳಿಯ ಅಬ್ದುಲ್ ಹಫೀಸ್ (55) ಮತ್ತು ಸುರತ್ಕಲ್​​ನ ಕಾಟಿಪಳ್ಳ ಕೃಷ್ಣಾಪುರದ ರಮ್ಲಾತ್ (46) ಎಂಬುವರು ಬಂಧಿತರು.

ಇವರು ಕೆಲ ದಿನಗಳ ಹಿಂದೆ ಕಾವೂರು ಪರಿಸರದಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ಬೆಂಗಳೂರು, ಮಂಗಳೂರು, ಉಡುಪಿ, ಮೈಸೂರು ಸೇರಿ ಹಲವು ಕಡೆಗಳಿಂದ ಯುವತಿಯರನ್ನು ತಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಿಂದ ಓರ್ವ ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ.

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ದಲ್ಲಾಳಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ 10,060 ರೂ. ನಗದು, 3 ಮೊಬೈಲ್ ‌ಫೋನ್ ಮತ್ತು ಒಂದು ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.