ಉಡುಪಿ: ಉಡುಪಿಯ ಬಿಜೆಪಿ ಹಿರಿಯ ನಾಯಕ ಸೋಮಶೇಖರ ಭಟ್ ಜೊತೆ ಪ್ರಧಾನಿ ಮೋದಿ ಇಂದು ಮಾತುಕತೆ ನಡೆಸಿದರು. , ಸೋಮಶೇಖರ್ ಭಟ್ಗೆ ಕರೆ ಮಾಡಿದ ಮೋದಿ ಹಿರಿಯ ನಾಯಕನ ಆರೋಗ್ಯ ವಿಚಾರಿಸಿದ್ದಾರೆ.
ಬಳಿಕ ಮಾಧ್ಯಮದೊಂದಿಗೆ ಮಾತಾಡಿದ ಸೋಮಶೇಖರ್ ಭಟ್, ಪ್ರಧಾನಿಯವರು ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿರುವುದು ತುಂಬಾ ಖುಷಿಯಾಗಿದೆ. 1968ರಲ್ಲಿ ದಿಲ್ಲಿಯಲ್ಲಿ ಮತ್ತು ಉಡುಪಿ ಪುರಸಭೆಗಳಲ್ಲಿ ಮಾತ್ರ ಜನಸಂಘ ಅಧಿಕಾರ ಪಡೆದಿತ್ತು. ಆಗ ನಾನು ಕೌನ್ಸಿಲರ್ ಆಗಿದ್ದೆ, ಡಾ. ವಿ.ಎಸ್. ಆಚಾರ್ಯ ಪುರಸಭೆಯ ಅಧ್ಯಕ್ಷರಾಗಿದ್ದರು. ಜೈಪುರ ಅಧಿವೇಶನದಲ್ಲಿ ತಮ್ಮನ್ನು ಭೇಟಿಯಾಗಿದ್ದೆ ಎಂದು ಅನುಭವ ಹಂಚಿಕೊಂಡೆ.
ಆಗ ಮೋದಿ ಅವರು ಜೈಪುರದಲ್ಲಿ ಪುರಸಭೆ ವಿಚಾರದಲ್ಲಿ ಸೇರಿದ್ರಿ ಎಂದು ಸ್ಮರಿಸಿಕೊಂಡರು. ಇದೇ ವೇಳೆ ತುರ್ತು ಪರಿಸ್ಥಿತಿಯ ದಿನಗಳ ಮೆಲುಕು ಹಾಕಿದೆ.
ಹಿರಿಯರು ಆರೋಗ್ಯ ಜೋಪಾನವಾಗಿ ನೋಡಿಕೊಳ್ಳಲು ಹೇಳಿ ಕಾಳಜಿ ವ್ಯಕ್ತಪಡಿಸಿದರು. ಒಂದನೇ ತರಗತಿಯಲ್ಲಿ ಕಲಿಯುವಾಗಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದ್ದೆ. 1953ರಲ್ಲಿ ಉಡುಪಿಯಲ್ಲಿ ಜನಸಂಘ ಶುರುವಾದಾಗ ಅದರ ಸದಸ್ಯರಾಗಿಯೂ ಕೆಲಸ ಮಾಡಿದ್ದೆ. ಇದು ನನಗೆ ಸಿಕ್ಕ ಅಪೂರ್ವ ಗೌರವ. ಕೊರೊನಾ ವಿರುದ್ಧ ಯುದ್ಧ ಗೆಲ್ಲೋಣ. ನಮ್ಮ ದೇಶಕ್ಕೆ ದೊಡ್ಡ ಮಹಾಮಾರಿ ಬಂದಿದೆ. ಅದನ್ನು ಓಡಿಸುವಲ್ಲಿ ನಮ್ಮ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು ಅಂತ ಸೋಮಶೇಖರ್ ಸಂತಸ ಹಂಚಿಕೊಂಡರು.
ಜನರು ಲಾಕ್‌ಡೌನ್ ಸಹಿತ ಎಲ್ಲ ರೀತಿಯಲ್ಲಿಯೂ ಸಹಕಾರ ಮಾಡುತ್ತಿದ್ದಾರೆ. ಈ ಕೊರೊನಾ ಸೋಂಕಿನ ವಿರುದ್ಧದ ಯುದ್ಧದಲ್ಲಿ ವಿಜಯಿಯಾಗುವ ಹಾಗೆ ಮಾಡೋಣ ಅದಕ್ಕೆ ನಿಮ್ಮಂಥ ಹಿರಿಯರ ಆಶೀರ್ವಾದ ಬೇಕೆಂದು ಮೋದಿ ಹೇಳಿದರು ಎಂದು ಸೋಮಶೇಖರ್ ಭಟ್ ತಿಳಿಸಿದರು.