ETV Bharat / city

ಮಾಜಿ‌ ಶಾಸಕ ವಸಂತ ಬಂಗೇರ ವಿರುದ್ಧ ಪ್ರತಾಪ್ ಸಿಂಹ‌ ನಾಯಕ್ ವಾಗ್ದಾಳಿ - Pratap Sinha Nayak

ಮಾಜಿ ಶಾಸಕ ವಸಂತ ಬಂಗೇರ ಅವರು ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಏಕವಚನದಿಂದ ಮಾತನಾಡುವ ಮೂಲಕ ಕೀಳು‌ಮಟ್ಟಕ್ಕೆ ಇಳಿದಿದ್ದಾರೆ.‌ ಇದು ಅವರಿಗೆ ಶೋಭೆ ತರುವುದಿಲ್ಲ. ಜನ ಇದನ್ನು ಗಮನಿಸುತ್ತಿದ್ದು, ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದ್ದಾರೆ.

ಪ್ರತಾಪ್ ಸಿಂಹ‌ ನಾಯಕ್
ಪ್ರತಾಪ್ ಸಿಂಹ‌ ನಾಯಕ್
author img

By

Published : Jan 20, 2021, 8:07 PM IST

ಬೆಳ್ತಂಗಡಿ: ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರು‌ ತಮ್ಮ ಕೀಳು ಮಟ್ಟದ ಹೇಳಿಕೆಗಳ ಮೂಲಕ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.

ಪ್ರತಾಪ್ ಸಿಂಹ‌ ನಾಯಕ್ ಸುದ್ದಿಗೋಷ್ಠಿ

ಬೆಳ್ತಂಗಡಿ ಪ್ರವಾಸಿ ಬಂಗಲೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ವಸಂತ ಬಂಗೇರ ಅವರು ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಏಕವಚನದಿಂದ ಮಾತನಾಡುವ ಮೂಲಕ ಕೀಳು‌ಮಟ್ಟಕ್ಕೆ ಇಳಿದಿದ್ದಾರೆ.‌ ಇದು ಅವರಿಗೆ ಶೋಭೆ ತರುವುದಿಲ್ಲ. ಜನ ಇದನ್ನು ಗಮನಿಸುತ್ತಿದ್ದು, ಮುಂಬರುವ ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಇವಿಎಂ ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿ ಮತ ಪತ್ರ ಬಳಸುವಂತೆ ಈ ಹಿಂದೆ ಕಾಂಗ್ರೆಸ್ ಪಕ್ಷದವರು ಒತ್ತಾಯಿಸಿದ್ದರು. ಇದೀಗ ಗ್ರಾ.ಪಂ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿಲ್ಲ ಎಂಬ ಕಾರಣಕ್ಕಾಗಿ ಮತ ಪತ್ರದ ಬಗ್ಗೆಯೂ ಅಪಪ್ರಚಾರ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಪೂರಕವಾದ ಟೀಕೆ ಮಾಡುವುದು ಸರಿ, ಆದರೆ ವೈಯಕ್ತಿಕವಾಗಿ ಯಾವುದೇ ಆಧಾರಗಳಿಲ್ಲದೆ ಟೀಕೆ ಮಾಡುವುದು ಸರಿಯಲ್ಲ ಎಂದರು.

ಇನ್ನು ಮಾಜಿ ಶಾಸಕ ವಸಂತ ಬಂಗೇರ ಅವರು ‌ಜನರನ್ನು ಬೇರೆಡೆ ತಿರುಗಿಸಲು ಆಣೆ ಪ್ರಮಾಣದ ‌ಮಾತುಗಳನ್ನು‌ ಹಿಂದಿನಿಂದಲೂ ‌ಆಡುತ್ತಿದ್ದರು. ಅವರಿಗೆ ಅದು ಚಟವಿದ್ದಂತೆ. ಇದಕ್ಕೆ ಬಿಜೆಪಿ ಯಾವುದೇ ಉತ್ತರ ನೀಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ, ಸ್ಥಳೀಯ ಶಾಸಕ ಹರೀಶ್ ಪೂಂಜಾ ಅವರ ಅಭಿವೃದ್ಧಿ ಕಾರ್ಯಗಳಿಗೆ ಮನ್ನಣೆ ನೀಡಿ ಜನತೆ‌ ಮತ ನೀಡಿದ್ದಾರೆ. ಕಡಿಮೆ ಅವಧಿಯಲ್ಲಿ ತಾಲೂಕು ಹೆಚ್ಚು ಅಭಿವೃದ್ಧಿ ಹೊಂದುತ್ತಿದ್ದು, ಇದಕ್ಕೆ ‌ಅನುಗುಣವಾಗಿ‌ ಜನತೆ ಮತ ನೀಡುತ್ತಿದ್ದಾರೆ. ಬಿಜೆಪಿ ಯಾವುದೇ ಟೀಕೆಗಳಿಗೆ ಕಿವಿಗೊಡದೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವತ್ತಾ ಗಮನಹರಿಸಲಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.