ಸುಳ್ಯ(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನ್ಯಾಯಾಲಯದಿಂದ ಮಾಜಿ ಇಂಧನ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಾರಂಟ್ ಜಾರಿಯಾಗಿದ್ದು, ಇಂದು ಡಿಕೆ ಶಿವಕುಮಾರ್ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ನುಡಿದಿದ್ದಾರೆ.
ಸೆಪ್ಟೆಂಬರ್ 29ರಂದು ಡಿಕೆ ಶಿವಕುಮಾರ್ ತನಿಖೆಗಾಗಿ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಈ ಬಗ್ಗೆ ನೋಟಿಸ್ ನೀಡಿದ್ದರೂ ಡಿಕೆಶಿ ಹಾಜರಾಗದ ಹಿನ್ನೆಲೆಯಲ್ಲಿ ನವೆಂಬರ್ ಮೊದಲ ವಾರದಲ್ಲಿ ಕೋಟ್‌ಗೆ ಹಾಜರಾಗಲು ವಾರಂಟ್ ಹೊರಡಿಸಲಾಗಿತ್ತು.
ಹೀಗಾಗಿ ಇಂದು ಮುಂಜಾನೆ ಮಂಗಳೂರು ತಲುಪಿದ ಶಿವಕುಮಾರ್ ರಸ್ತೆ ಮಾರ್ಗವಾಗಿ ಸುಳ್ಯ ನ್ಯಾಯಾಲಯಕ್ಕೆ ಬಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ನುಡಿದಿದ್ದಾರೆ. ಸುಳ್ಯ ನ್ಯಾಯಾಲಯದಲ್ಲಿ ಇದಕ್ಕೆ ಸಂಬಂಧಿಸಿದಂತೆ ಡಿಕೆಶಿ ಅವರು ಸಾಕ್ಷಿ ನುಡಿಯುವ ಸಮಯದಲ್ಲೇ ವಿದ್ಯುತ್ ಕಡಿತಗೊಂಡ ಸ್ವಾರಸ್ಯಕರ ಘಟನೆಯೂ ನಡೆಯಿತು.
ಈ ವೇಳೆ, ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಅವಾಚ್ಯ ಶಬ್ದಗಳ ಬಳಕೆ ಕೂಡ ಆಗಿತ್ತು ಎಂದು ಆರೋಪಿಸಲಾಗಿದ್ದು, ಇದು ಡಿ.ಕೆ ಶಿವಕುಮಾರ್ ಅವರ ಕೋಪಕ್ಕೂ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ಮೆಸ್ಕಾಂ ಎಂಡಿ ಮೂಲಕ ಅಂದು ಸುಳ್ಯದ ಪ್ರಭಾರ ಎಇಇ ಆಗಿದ್ದ ಹರೀಶ್ ನಾಯಕ್ ಅವರ ಮೂಲಕ ಸಾಯಿ ಗಿರಿಧರ್ ರೈ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಈ ಪ್ರಕರಣದ ಹಿನ್ನೆಲೆಯಲ್ಲಿ ಬೆಳ್ಳಾರೆ ಪೊಲೀಸರು ಗಿರಿಧರ್ ರೈ ಅವರನ್ನು ಬಂಧಿಸುವ ಸಲುವಾಗಿ ಅವರ ಮನೆಗೆ ಹೋದಾಗ ಮನೆಯಲ್ಲಿ ಮಹಿಳೆಯರು ಇದ್ದ ಕಾರಣದಿಂದಾಗಿ ಗಿರಿಧರ್ ಅವರು ಬಾಗಿಲು ತೆರೆಯಲಿಲ್ಲ ಎನ್ನಲಾಗಿದೆ. ಈ ಕಾರಣದಿಂದ ಮನೆಯ ಛಾವಣಿ ಹತ್ತಿ ಮನೆಯೊಳಗೆ ಇಳಿದ ಪೊಲೀಸರು ಸಾಯಿ ಗಿರಿಧರ್ ರೈ ಅವರನ್ನು ಬಂಧಿಸಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯೂ ಆಗಿತ್ತು.
ಇಂದು ಈ ಘಟನೆಗೆ ಸಂಬಂಧಿಸಿದಂತೆ ಡಿಕೆಶಿ ಅವರು ಸಾಕ್ಷಿ ಹೇಳಿ ಮಾಧ್ಯಮದ ಜೊತೆಗೆ ಮಾತನಾಡಿದರು. ಇದೇ ಸಮಯದಲ್ಲಿ ಆರೋಪಿ ಸ್ಥಾನದಲ್ಲಿರುವ ಗಿರಿಧರ್ ರೈ ಅವರೂ ಮಾಧ್ಯಮ ಹೇಳಿಕೆ ನೀಡಿದ್ದು, ವಿದ್ಯುತ್ ಸಮಸ್ಯೆ ಬಗ್ಗೆ ಮಾತನಾಡಿದಾಗ ಡಿಕೆಶಿ ಅವರೇ ನನಗೆ ಬೈದಿರೋದು. ಈಗ ನ್ಯಾಯಾಲಯದ ಮುಂದೆ ಬರುವಂತಾಯಿತು. ಹೋರಾಟ ಮುಂದುವರೆಸುತ್ತೇನೆ ಎಂದಿದ್ದಾರೆ.