ETV Bharat / city

ಮಾಸ್ಕ್ ಹಾಕಿಲ್ಲ ಎಂದು ಅಪರಾಧಿಯಂತೆ ಕೊಂಡೊಯ್ದ ಪೊಲೀಸರು.. ವಿಡಿಯೋ ವೈರಲ್ - ಮಾಸ್ಕ್​ ಧರಿಸದ ವ್ಯಕ್ತಿಯನ್ನ ಕರೆದುಕೊಂಡು ಹೋದ ಪೊಲೀಸರು

ಮಾಸ್ಕ್ ಧರಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸರಿ. ಆದರೆ, ಈ ರೀತಿ ಅಪರಾಧಿಯಂತೆ ಕೊಂಡೊಯ್ಯುವುದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ..

police-were-taken-as-accused-who-were-not-wearing-mask-video-viral
ವಿಡಿಯೋ ವೈರಲ್
author img

By

Published : Mar 23, 2021, 8:04 PM IST

ಮಂಗಳೂರು : ಕೊರೊನಾ 2ನೇ ಅಲೆ ಹಿನ್ನೆಲೆ ನಿನ್ನೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದಿಢೀರ್ ದಾಳಿ ನಡೆಸಿದರು. ಈ ವೇಳೆ ಮಾಸ್ಕ್​​ ಧರಿಸದ ವ್ಯಕ್ತಿಯೊಬ್ಬನನ್ನು ಅಪರಾಧಿಯಂತೆ ಪೊಲೀಸರು ಕರೆದುಕೊಂಡು ಹೋದ ಘಟನೆ ನಡೆದಿದೆ. ಈ ದೃಶ್ಯ ವೈರಲ್ ಆಗಿರೋ ವಿಡಿಯೋವೊಂದರಲ್ಲಿ ಸೆರೆಯಾಗಿದೆ.

ಮಾಸ್ಕ್ ಹಾಕಿಲ್ಲ ಎಂದು ಅಪರಾಧಿಯಂತೆ ಕೊಂಡೊಯ್ದ ಪೊಲೀಸರು

ಜನರಲ್ಲಿ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದ.ಕ ಜಿಲ್ಲಾಧಿಕಾರಿ ದಿಢೀರ್ ದಾಳಿ ನಡೆಸಿದ್ದರು. ಬಸ್, ಪೆಟ್ರೋಲ್ ಪಂಪ್, ಮಾಲ್​ಗಳಿಗೆ ತೆರಳಿ ಮಾಸ್ಕ್ ಧರಿಸದ ಜನರನ್ನು ತರಾಟೆಗೆ ತೆಗೆದುಕೊಂಡು ಕ್ರಮಕ್ಕೆ ಸೂಚಿಸಿದರು.

ಈ ವೇಳೆ ಪೆಟ್ರೋಲ್ ಬಂಕ್​ವೊಂದರ ಸಿಬ್ಬಂದಿ ಮಾಸ್ಕ್ ಧರಿಸದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಆ ಬಳಿಕ ಕಾರ್ಯಾಚರಣೆ ವೇಳೆ ಜೊತೆಗಿದ್ದ ಪೊಲೀಸರು ಆ ವ್ಯಕ್ತಿಯ ಶರ್ಟ್​​ ಹಿಡಿದುಕೊಂಡು ಅಪರಾಧಿಯಂತೆ ಕರೆದುಕೊಂಡು ಹೋಗಿದ್ದಾರೆ.

ಸದ್ಯ ಮಾಸ್ಕ್ ಧರಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸರಿ. ಆದರೆ, ಈ ರೀತಿ ಅಪರಾಧಿಯಂತೆ ಕೊಂಡೊಯ್ಯುವುದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.