ಮಂಗಳೂರು: ಆನ್ಲೈನ್ ಮೂಲಕ ಹಣ ಸಂಪಾದನೆ ಮಾಡಬಹುದು ಎಂಬ ಆಮಿಷವನ್ನು ನಂಬಿ ಮಂಗಳೂರಿನ ವ್ಯಕ್ತಿಯೊಬ್ಬರು 1.31 ಲಕ್ಷ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ವಂಚನೆಗೊಳಗಾದ ವ್ಯಕ್ತಿಗೆ ಏಪ್ರಿಲ್ 2021ರಲ್ಲಿ ಅಪರಿಚಿತ ನಂಬರ್ನಿಂದ ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಬಂದಿದ್ದು, amazer2.com ಎಂಬ ಜಾಲತಾಣದಲ್ಲಿ ನೋಂದಣಿ ಮಾಡಿ ಹಣ ಗಳಿಸಬಹುದು ಎಂಬ ಆಮಿಷವೊಡ್ಡಲಾಗಿತ್ತು. ಅದರಂತೆ ಈ ವ್ಯಕ್ತಿ 200 ರೂ. ಪಾವತಿಸಿ ಆ ವೆಬ್ ಸೈಟ್ನಲ್ಲಿ ಖಾತೆ ತೆರೆದಿದ್ದರು. ಬಳಿಕ ಹೆಚ್ಚಿನ ಬೋನಸ್ ನೀಡುವುದಾಗಿ ತಿಳಿಸಿದ್ದಾರೆ. ಇದನ್ನು ನಂಬಿದ ಮಂಗಳೂರಿನ ವ್ಯಕ್ತಿ, ಅವರ ವಿವಿಧ ಖಾತೆಗಳಿಗೆ 1, 31, 481 ರೂ. ಪಾವತಿಸಿದ್ದಾರೆ.
ಇದನ್ನೂ ಓದಿ: coal mine fire: ಕಲ್ಲಿದ್ದಲು ಗಣಿಯಲ್ಲಿ 52 ಜನ ಸಜೀವ ದಹನ!
ಆದರೆ, ವಂಚಕರು ಹೇಳಿದಂತೆ ಬೋನಸ್ ನೀಡದಿರುವುದರಿಂದ ಮತ್ತು ಪಾವತಿಸಿದ ಹಣವನ್ನು ಸಹ ವಾಪಸ್ ನೀಡದಿರುವುದರಿಂದ ವಂಚನೆಗೊಳಗಾದ ವ್ಯಕ್ತಿ ಮಂಗಳೂರಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಮತಾಂತರ ಮಾಡುವವರಿಗೆ ಪ್ರಮೋದ್ ಮುತಾಲಿಕ್ ಎಚ್ಚರಿಕೆ!