ETV Bharat / city

ಕೊರೊನಾ ಎಫೆಕ್ಟ್​​: ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾದಲ್ಲಿ ಕಳೆಗುಂದಿದ ಈದ್ ಉಲ್ ಫಿತ್ರ್ ಆಚರಣೆ​​

ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾದಲ್ಲಿ ಇದೇ ಮೊದಲ ಬಾರಿಗೆ ವಿಶೇಷ ನಮಾಜ್​ ನೆರವೇರಿಲ್ಲ. ಕೊರೊನಾ ಹೆಮ್ಮಾರಿಯ ವಕ್ರದೃಷ್ಟಿ ದೇವರ ಮೇಲೆಯೂ ಬಿದ್ದಿದ್ದು, ದರ್ಗಾ ಸೇರಿದಂತೆ ಇಡೀ ದೇಶದಲ್ಲಿ ಗುಡಿ ಗೋಪುರಗಳನ್ನು ಮುಚ್ಚಲಾಗಿದೆ.

no-eid-festival-celebration-in-ullala-darga
ಈದ್ ವುಲ್ ಫಿತ್ರ್ ಆಚರಣೆ​​
author img

By

Published : May 25, 2020, 11:15 AM IST

ಉಳ್ಳಾಲ: ಮಹಾಮಾರಿ ಕೋವಿಡ್​​ ವಕ್ರದೃಷ್ಟಿಗೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐತಿಹಾಸಿಕ ಪ್ರಸಿದ್ಧ ಉಳ್ಳಾಲ ಸೈಯ್ಯದ್​ ಮದನಿ ದರ್ಗಾದಲ್ಲಿ ಈದ್​ ಉಲ್​ ಫಿತ್ರ್​ ಆಚರಣೆಯ ವಿಶೇಷ ನಮಾಜ್ ನೆರವೇರಿಲ್ಲ.​

ರಾಜ್ಯದಲ್ಲಿ 4.0 ಲಾಕ್​ಡೌನ್​ ಮುಂದುವರೆದ ಹಿನ್ನೆಲೆ ಉಳ್ಳಾಲ, ತಲಪಾಡಿ, ದೇರಳಕಟ್ಟೆ, ತೊಕ್ಕೊಟ್ಟು, ಕೋಟೆಕಾರು, ಕುತ್ತಾರು ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ಬೆಳಗ್ಗಿನಿಂದಲೇ ಮುಚ್ಚಲಾಗಿತ್ತು. ಜನಸಂಚಾರವೂ ವಿರಳವಾಗಿತ್ತು. ಈದ್ ಹಬ್ಬದ ದಿನವಾದರೂ ಜನ ಮನೆಗಳಲ್ಲಿ ನಮಾಜ್​ ನೆರವೇರಿಸುವ ಮೂಲಕ ಕೊರೊನಾ ತಡೆಗೆ ಕೈಜೋಡಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವ ಸಾಧ್ಯತೆಗಳಿರುವುದರಿಂದ ಉಳ್ಳಾಲ ವ್ಯಾಪ್ತಿಯ ಎಲ್ಲಾ ರಸ್ತೆಗಳಲ್ಲಿಯೂ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಹಬ್ಬದ ಸಂದರ್ಭ ವಾಹನ, ಜನ ಸಂಚಾರದಿಂದ ಸದಾ ಗಿಜಿಗುಡುತ್ತಿದ್ದ ನೇತ್ರಾವತಿ ಸೇತುವೆ, ತೊಕ್ಕೊಟ್ಟು ಜಂಕ್ಷನ್, ಉಳ್ಳಾಲ ಜಂಕ್ಷನ್, ದೇರಳಕಟ್ಟೆ ಜಂಕ್ಷನ್ ಬಿಕೋ ಅನ್ನುತ್ತಿದ್ದವು.

ಹಬ್ಬ ಹಾಗೂ ಭಾನುವಾರದ ದಿನವಾಗಿದ್ದರಿಂದ ಉಳ್ಳಾಲ ಬೀಚ್ ತೀರದಲ್ಲಿ ಜನ ಸೇರುತ್ತಿದ್ದರು. ಆದರೆ ಪೊಲೀಸರು ಸಮುದ್ರ ತೀರಕ್ಕೆ ಆಗಮಿಸುತ್ತಿದ್ದ ಹಲವರನ್ನು ತರಾಟೆಗೆ ತೆಗೆದುಕೊಂಡು ವಾಪಸ್​ ಕಳುಹಿಸಿದ ಘಟನೆ ಕೂಡಾ ನಡೆಯಿತು.

ಬಿಕೋ ಎನ್ನುತ್ತಿದೆ ಕರ್ನಾಟಕ-ಕೇರಳ ಗಡಿಭಾಗ

ಕರ್ನಾಟಕ-ಕೇರಳ ಗಡಿಭಾಗದಲ್ಲಿಯೂ ಜನ ಸಂಚಾರವಿಲ್ಲದೆ ಪೊಲೀಸರು ಮಾತ್ರವಿದ್ದರು. ಎರಡೂ ರಾಜ್ಯಗಳಲ್ಲಿ ಭಾನುವಾರ ಕರ್ಫ್ಯೂ ಜಾರಿಯಲ್ಲಿದ್ದ ಹಿನ್ನೆಲೆ ಪಾಸ್ ಹಿಡಿದು ಬರುವವರ ಸಂಖ್ಯೆಯೂ ಕೂಡ ಕಂಡು ಬರಲಿಲ್ಲ.

ಉಸಿರಿಗೆಲ್ಲಿಯ ಧರ್ಮ?

ಟ್ವೀಟ್​ ಮೂಲಕ ನಾಡಿನ ಜನರಿಗೆ ಈದ್​ ಉಲ್​ ಫಿತ್ರ್​ ಹಬ್ಬದ ಶುಭಾಷಯ ಕೋರಿರುವ ಮಾಜಿ ಸಚಿವ ಯು.ಟಿ.ಖಾದರ್​, ಹಬ್ಬದ ನಡುವೆ ವಿಷಾದ ನಡೆದು ಹೋಗಿದೆ. ನಿಶಾಂತ್ ಎಂಬ ಯುವಕ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಗೂಡಿನಂಗಡಿಯ ಶಮೀರ್ ಮುಹಮದ್, ತೌಸೀಫ್ ಝಾಹಿದ್, ಮುಕ್ತಾರ್ ಆರೀಫ್ ರಕ್ಷಣೆ ಮಾಡಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸಲಾಗದೆ ನಿಶಾಂತ್ ಕೊನೆಯುಸಿರು ಎಳೆದಿದ್ದಾರೆ.

  • ಕೊನೆ ಉಸಿರೆಳೆದ ನಿಶಾಂತ್ ಗೆ ಗೊತ್ತಿರದ ಶಮೀರ್, ತೌಸಫ್ ,ಮುಕ್ತಾರ್, ಉಸಿರು ತುಂಬುತ್ತಿರೋ ದೃಶ್ಯ ನೋಡಿ ಧರ್ಮದ ಹೆಸರಲ್ಲಿ ದ್ವೇಷಿಸುವವರ ನೆನೆದು ಅಸಹ್ಯ ಹುಟ್ಟಿತು. ಉಸಿರಿಗೆಲ್ಲಿಯ ಧರ್ಮ??? ಪ್ರಾಣರಕ್ಷಣೆಗೆ ಮುಂದಾದ ಗೂಡಿನಂಗಡಿಯ ಯುವಕರ ಪ್ರಯತ್ನಕ್ಕೆ ಸಲಾಂ ಹೇಳುತ್ತಾ ಸೋದರ ನಿಶಾಂತ್ ಆತ್ಮಕ್ಕೆ ಶಾಂತಿ ಕೋರುತ್ತೇನೆ.(3)#RIPNISHANT pic.twitter.com/E58A7L4Bfn

    — UT Khadér (@utkhader) May 24, 2020 " class="align-text-top noRightClick twitterSection" data=" ">

ಇಲ್ಲಿ ಜಾತಿ, ಧರ್ಮದ ಬಗ್ಗೆ ಹೇಳುವುದು ನನ್ನ ಉದ್ದೇಶವಲ್ಲ. ಕೊನೆ ಉಸಿರೆಳೆದ ನಿಶಾಂತ್​ಗೆ ಗೊತ್ತಿರದ ಯುವಕರು ಉಸಿರು ತುಂಬುತ್ತಿರೋ ದೃಶ್ಯ ನೋಡಿ ಧರ್ಮದ ಹೆಸರಲ್ಲಿ ದ್ವೇಷಿಸುವವರನ್ನು ನೆನೆದು ಅಸಹ್ಯ ಹುಟ್ಟಿದೆ. ಉಸಿರಿಗೆಲ್ಲಿಯ ಧರ್ಮ? ಪ್ರಾಣ ರಕ್ಷಣೆಗೆ ಮುಂದಾದ ಯುವಕರ ಪ್ರಯತ್ನಕ್ಕೆ ಸಲಾಂ. ಸಹೋದರ ನಿಶಾಂತ್ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಮಾಜಿ ಸಚಿವರು ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.