ETV Bharat / city

ವೇಣೂರು ಜೋಡುಕರೆ ಕಂಬಳದಲ್ಲಿ ದಾಖಲೆ ಸೃಷ್ಟಿಸಿದ ನಿಶಾಂತ್ ಶೆಟ್ಟಿ - new record created by nishanth shetty

ಕಳೆದ ವರ್ಷ ಕಕ್ಕೆಪದವಿನ ಸತ್ಯ ಧರ್ಮ ಜೋಡುಕೆರೆ ಕಂಬಳದಲ್ಲಿ 100 ಮೀಟರ್ ಅನ್ನು ಕಂಬಳ ಓಟಗಾರ ಶ್ರೀನಿವಾಸ ಗೌಡ ಎಂಬುವರು 8.78 ಸೆಕೆಂಡ್‌ಗಳಲ್ಲಿ ತಲುಪಿ ದಾಖಲೆ ಸೃಷ್ಟಿಸಿದ್ದರು. ಇದೀಗ ಈ ದಾಖಲೆಯನ್ನು ಕಂಬಳ ಓಟಗಾರ ನಿಶಾಂತ್ ಶೆಟ್ಟಿ ಮುರಿದಿದ್ದಾರೆ..

nishant-shetty-created-a-new-record-in-kambala
ವೇಣೂರು ಜೋಡುಕರೆ ಕಂಬಳದಲ್ಲಿ ದಾಖಲೆ ಸೃಷ್ಟಿಸಿದ ನಿಶಾಂತ್ ಶೆಟ್ಟಿ
author img

By

Published : Apr 11, 2022, 11:27 AM IST

ಮಂಗಳೂರು : ಕರಾವಳಿಯ ಜಾನಪದ ಕ್ರೀಡೆ ಕಂಬಳದಲ್ಲಿ ಈ ಬಾರಿ ಹೊಸ ದಾಖಲೆ ಸೃಷ್ಟಿಯಾಗಿದೆ. ಕಂಬಳ ಓಟಗಾರ ಬಜಗೋಳಿ ಜೋಗಿಬೆಟ್ಟು ನಿವಾಸಿ ನಿಶಾಂತ್ ಶೆಟ್ಟಿ ಎಂಬುವರು ಹೊಸ ದಾಖಲೆ ಬರೆದಿದ್ದಾರೆ. ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದ ವೇಣೂರು ಪೆರ್ಮುಡ ಸೂರ್ಯಚಂದ್ರ ಜೋಡುಕೆರೆ ಕಂಬಳದಲ್ಲಿ ನಿಶಾಂತ್ ಶೆಟ್ಟಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಈ ಕಂಬಳದ ಹಿರಿಯರ ವಿಭಾಗದಲ್ಲಿ ನಡೆದ ಕಂಬಳ ಓಟದಲ್ಲಿ ಅವರು 125 ಮೀಟರ್ ಅನ್ನು ಕೇವಲ 10.44 ಸೆಕೆಂಡ್‌ನಲ್ಲಿ ಗುರಿಮುಟ್ಟಿದ್ದಾರೆ. ಇದನ್ನು 100 ಮೀಟರ್‌ಗೆ ಲೆಕ್ಕ ಹಾಕುವಾಗ 8.36 ಸೆಕೆಂಡ್ ಆಗುತ್ತದೆ. ಈ‌ ದಾಖಲೆಯನ್ನು ಈವರೆಗೂ ಯಾರೂ ಮಾಡಿಲ್ಲ.

nishant-shetty-created-a-new-record-in-kambala
ವೇಣೂರು ಜೋಡುಕರೆ ಕಂಬಳದಲ್ಲಿ ದಾಖಲೆ ಸೃಷ್ಟಿಸಿದ ನಿಶಾಂತ್ ಶೆಟ್ಟಿ

ಕಳೆದ ವರ್ಷ ಕಕ್ಕೆಪದವಿನ ಸತ್ಯ ಧರ್ಮ ಜೋಡುಕೆರೆ ಕಂಬಳದಲ್ಲಿ 100 ಮೀಟರ್ ಅನ್ನು ಕಂಬಳ ಓಟಗಾರ ಶ್ರೀನಿವಾಸ ಗೌಡ ಎಂಬುವರು 8.78 ಸೆಕೆಂಡ್‌ಗಳಲ್ಲಿ ತಲುಪಿ ದಾಖಲೆ ಸೃಷ್ಟಿಸಿದ್ದರು. ಇದೀಗ ಈ ದಾಖಲೆಯನ್ನು ಕಂಬಳ ಓಟಗಾರ ನಿಶಾಂತ್ ಶೆಟ್ಟಿ ಮುರಿದಿದ್ದಾರೆ.

ಓದಿ : ಸುಳ್ಯ, ಕಡಬ ತಾಲೂಕಿನಾದ್ಯಂತ ಪಾಮ್ ಸಂಡೇ ಸಂಭ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.