ETV Bharat / city

ಸ್ಯಾಕ್ಸೋಫೋನ್​​-ಕ್ಲಾರಿಯೋನೆಟ್.. 400ಕ್ಕೂ ಹೆಚ್ಚು ಜುಗಲ್‌ಬಂದಿ.. ನರಸಿಂಹ ವಡವಾಟಿ ಅನುಭವ! - Pandit Narasimhalu Vadavati is a clarinet musician

ಸ್ಯಾಕ್ಸೋಫೋನ್​ ವಾದಕ ಕದ್ರಿ ಗೋಪಾಲನಾಥ್ ಅವರನ್ನು ಕಳೆದುಕೊಂಡು ಒಂಟಿಯಾಗಿರುವ ಕ್ಲಾರಿಯೋನೆಟ್‌ ವಾದಕ ನರಸಿಂಹ ವಡವಾಟಿ ಅವರು ತಮ್ಮ ಗೆಳೆಯನೊಂದಿಗೆ ಕಳೆದ ನೆನಪುಗಳನ್ನು ಮೆಲುಕು ಹಾಕಿದರು.

narasimha-vadivati-remember-indian-saxophonist-kadri-gopalnath
author img

By

Published : Oct 14, 2019, 8:45 PM IST

Updated : Oct 14, 2019, 9:15 PM IST

ಮಂಗಳೂರು: ಸ್ಯಾಕ್ಸೋಫೋನ್​​ಗೆ ಮತ್ತೊಂದು ಹೆಸರೇ ಕದ್ರಿ ಗೋಪಾಲನಾಥ್. ಅವರು ಓರ್ವ ಮಹಾನ್ ಸಾಧಕ. ಕದ್ರಿಯವರದ್ದು ಗಾಯಕಿ ಶೈಲಿಯ ವಾದನ ಎಂದು ಖ್ಯಾತ ಕ್ಲಾರಿಯೋನೆಟ್‌ ವಾದಕ ನರಸಿಂಹ ವಡವಾಟಿ ಹೇಳಿದರು.

ಮೂವತ್ತು ವರ್ಷಗಳಿಂದ ನಾವಿಬ್ಬರು ಹಿಂದೂಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹೊಸ ಪ್ರಯೋಗವನ್ನೇ ಮಾಡಿದ್ದೆವು. ಈ ಪ್ರಯೋಗಗಳಿಗೆ ದೇಶ ವಿದೇಶಗಳಲ್ಲಿ ಪ್ರಚಾರ ದೊರಕಿತು. ಸ್ಯಾಕ್ಸೋಫೋನ್ ಹಾಗೂ ಕ್ಲ್ಯಾರೆನೆಟ್ ಎರಡೂ ವಿಭಿನ್ನ ವಿದೇಶಿ ವಾದ್ಯಗಳು. ಅಲ್ಲದೆ ಬೇರೆ ಬೇರೆ ಪ್ರಕಾರದ ಸಂಗೀತ ಎಂದು ಹೇಳಿದರು.

ಖ್ಯಾತ ಕ್ಲಾರಿಯೋನೆಟ್‌ ವಾದಕ ನರಸಿಂಹ ವಡವಾಟಿ..

ಇಬ್ಬರೂ ಸೇರಿ 400ಕ್ಕೂ ಅಧಿಕ ಕಛೇರಿಗಳಲ್ಲಿ ಜುಗುಲ್​ಬಂದಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇವೆ. ನಮ್ಮಿಬ್ಬರ ಜುಗಲ್​ಬಂದಿ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆಯಿತು. ಅಲ್ಲದೆ ಸ್ಯಾಕ್ಸೋಫೋನ್ ಹಾಗೂ ಕ್ಲ್ಯಾರೆನೆಟ್ ಕರ್ಕಶ ವಾದ್ಯಗಳು. ಈ ಎರಡೂ ವಾದ್ಯಗಳಲ್ಲಿಯೂ ಸುಸ್ವರವಾಗಿ ನಾದ ಹೊಮ್ಮಬೇಕೆಂದು ಪಳಗಿಸಿಕೊಂಡವರು ಎಂದು ತಮ್ಮ ಒಡನಾಟದ ಹಳೆಯ ನೆನಪುಗಳನ್ನು ಹೀಗೆ ಮೆಲುಕು ಹಾಕಿದರು.

ಕದ್ರಿಯವರು ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದವರು. ನಾನು ಹಿಂದೂಸ್ತಾನಿ ಗಾಯನ ಅಭ್ಯಾಸ ಮಾಡಿದವನು. ಎರಡೂ ಗಾಯಕಿ ಶೈಲಿಯನ್ನು ವಾದ್ಯಗಳ ಮೂಲಕ ನುಡಿಸಲು ಪ್ರಯತ್ನ ಪಟ್ಟಿದ್ದೇವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಎರಡೂ ವಾದ್ಯಗಳ ಮೂಲಕ ಭಾರತೀಯ ಸಂಗೀತವನ್ನು ಪ್ರಚಾರ ಮಾಡಬೇಕೆಂಬ ಮುಖ್ಯ ಉದ್ದೇಶ ಇಟ್ಟುಕೊಂಡಿದ್ದೆವು. ಆದರೆ, ಇಂದು ನಾವು ಸ್ಯಾಕ್ಸೋಫೋನ್ ನಿಧಿಯನ್ನೇ ಕಳೆದುಕೊಂಡಿದ್ದೇವೆ ಎಂದು ದುಃಖತಪ್ತರಾದರು.

Intro:ಮಂಗಳೂರು: ಸ್ಯಾಕ್ಸೋಫೋನ್ ಗೆ ಮತ್ತೊಂದು ಹೆಸರೇ ಕದ್ರಿ ಗೋಪಾಲನಾಥ್. ಅವರು ಓರ್ವ ಮಹಾನ್ ಸಾಧಕ. ಕದ್ರಿಯವರದ್ದು ಗಾಯಕಿ ಶೈಲಿಯ ವಾದನ ಎಂದು ಖ್ಯಾತ ಕ್ಲ್ಯಾರೆನೆಟ್ ವಾದಕ ಪಂಡಿತ್ ನರಸಿಂಹ ವಡಿವಾಟಿ ಹೇಳಿದರು.

ಸುಮಾರು ಮೂವತ್ತು ವರ್ಷಗಳಿಂದ ನಾವಿಬ್ಬರೂ ಹಿಂದೂಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹೊಸ ಪ್ರಯೋಗ ವನ್ನೇ ಮಾಡಿದ್ದೆವು. ಈ ಪ್ರಯೋಗಗಳಿಗೆ ದೇಶ ವಿದೇಶಗಳಲ್ಲಿ ಪ್ರಚಾರ ದೊರಕಿತು. ಸ್ಯಾಕ್ಸೋಫೋನ್ ಹಾಗೂ ಕ್ಲ್ಯಾರೆನೆಟ್ ಎರಡೂ ವಿಭಿನ್ನ ವಿದೇಶಿ ವಾದ್ಯಗಳು. ಅಲ್ಲದೆ ಎರಡೂ ಬೇರೆ ಬೇರೆ ಪ್ರಕಾರದ ಸಂಗೀತ. ನಾವಿಬ್ಬರೂ ಸೇರಿ ಜುಗುಲ್ ಬಂದಿ ಪ್ರಾರಂಭ ಮಾಡಿದೆವು. ಇದು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆಯಿತು ಎಂದು ಹೇಳಿದರು.

Body:ನಾವಿಬ್ಬರೂ ಸೇರಿ ಸುಮಾರು 400ಕ್ಕೂ ಅಧಿಕ ಕಚೇರಿಗಳಲ್ಲಿ ಜುಗುಲ್ ಬಂದಿ ಕಾರ್ಯಕ್ರಮಗಳನ್ನು ನೀಡಿದ್ದೆವು. ಅಲ್ಲದೆ ಸ್ಯಾಕ್ಸೋಫೋನ್ ಹಾಗೂ ಕ್ಲ್ಯಾರೆನೆಟ್ ಎರಡೂ ಕರ್ಕಶ ವಾದ್ಯಗಳು. ನಾವಿಬ್ಬರೂ ಈ ಎರಡೂ ವಾದ್ಯಗಳಲ್ಲಿಯೂ ಸುಸ್ವರವಾಗಿ ನಾದ ಹೊಮ್ಮಬೇಕೆಂದು ವಾದ್ಯವನ್ನು ಪಳಗಿಸಿ ಕೊಂಡವರು. ಕದ್ರಿಯವರು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಅಭ್ಯಾಸ ಮಾಡಿದವರು. ನಾನು ಹಿಂದೂಸ್ತಾನಿ ಗಾಯನ ಅಭ್ಯಾಸ ಮಾಡಿದವನು. ಎರಡೂ ಗಾಯಕಿ ಶೈಲಿಯನ್ನು ನಾವು ವಾದ್ಯಗಳ ಮೂಲಕ ನುಡಿಸಲು ಪ್ರಯತ್ನ ಪಟ್ಟಿದ್ದೇವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಎರಡೂ ವಾದ್ಯಗಳ ಮೂಲಕ ಭಾರತೀಯ ಸಂಗೀತವನ್ನು ಪ್ರಚಾರ ಮಾಡಬೇಕು ಮುಖ್ಯ ಉದ್ದೇಶ ಇಟ್ಟುಕೊಂಡಿದ್ದೇವೆ. ಇಂದು ನಮಗೆ ಸ್ಯಾಕ್ಸೋಫೋನ್ ನಿಧಿಯನ್ನೇ ಕಳೆದುಕೊಂಡಿದ್ದೇವೆ ಎಂದು ಬಹಳ ದುಃಖವಾಗುತ್ತದೆ ಪಂಡಿತ್ ನರಸಿಂಹ ವಡಿವಾಟಿ ಹೇಳಿದರು.

Reporter_Vishwanath Panjimogaru

Conclusion:
Last Updated : Oct 14, 2019, 9:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.