ETV Bharat / city

ಉಳ್ಳಾಲದಲ್ಲಿ ಯುವತಿ ವಿಚಾರಕ್ಕೆ ಗಲಾಟೆ? ಯುವಕನಿಗೆ ಚೂರಿಯಿಂದ ಇರಿದು ಕೊಲೆ ಯತ್ನ - ಉಳ್ಳಾಲ ಲೇಟೆಸ್ಟ್​​ ಕ್ರೈಂ ನ್ಯೂಸ್​​

ಯುವಕನಿಗೆ ತಂಡವೊಂದು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ. ಅಲ್ ಸದೀನ್ (24) ಎಂಬಾತನಿಗೆ ಚೂರಿಯಿಂದ ಇರಿಯಲಾಗಿದೆ.

Ullal
ಉಳ್ಳಾಲ
author img

By

Published : Apr 13, 2022, 6:57 AM IST

ಉಳ್ಳಾಲ: ನಾಲ್ಕು ಮಂದಿಯ ತಂಡವೊಂದು ಯುವಕನೋರ್ವನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಸಮೀಪದ ಮಸೀದಿ ಬಳಿ ನಡೆದಿದೆ. ಕೋಡಿ ನಿವಾಸಿ ಮೊಯ್ದೀನ್ ಎಂಬವರ ಪುತ್ರ ಅಲ್ ಸದೀನ್ ( 24) ಎಂಬಾನಿಗೆ ಚೂರಿಯಿಂದ ಇರಿಯಲಾಗಿದೆ.

ಮಸೀದಿ ಸಮೀಪ‌ ನಿಂತಿದ್ದ ವೇಳೆ ತಂಡ ಚೂರಿಯಿಂದ ಬೆನ್ನಿನ ಭಾಗಕ್ಕೆ ಇರಿದು ಕೊಲೆಗೆ ಯತ್ನಿಸಿದೆ. ಮಾಹಿತಿಗಳ ಪ್ರಕಾರ ಈ ನಾಲ್ಕು ಮಂದಿ ಸ್ನೇಹಿತರಾಗಿದ್ದು, ಒಟ್ಟಿಗೆ ಮಾತನಾಡುತ್ತಿದ್ದ ಸಂದರ್ಭ ಯುವತಿಯ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದು ಚೂರಿಯಿಂದ ಇರಿದಿದ್ದಾರೆ ಎನ್ನಲಾಗ್ತಿದೆ.

Murder attempt on youth near Ullal
ಅಲ್ ಸದೀನ್ ಕೊಲೆ ಯತ್ನಕ್ಕೆ ಒಳಗಾದವರು

ದಾಳಿಗೊಳಗಾದವನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳಿವೆ. ಕೆಲ ತಿಂಗಳುಗಳ ಹಿಂದೆ ಉಳ್ಳಾಲ ಠಾಣಾ ಪೊಲೀಸ್ ವಾಹನಕ್ಕೆ ಬಾಟಲಿಯಿಂದ ದಾಳಿ ನಡೆಸಿರುವ ಪ್ರಕರಣವೂ ಇರುವುದಾಗಿ‌ ತಿಳಿದು ಬಂದಿದೆ. ದೇರಳಕಟ್ಟೆ ಆಸ್ಪತ್ರೆಗೆ ಪೊಲೀಸ್ ಕಮೀಷನರ್ ಶಶಿ ಕುಮಾರ್, ಎಸಿಪಿ ದಿನಕರ್ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಸಂದೀಪ್ ನೇತೃತ್ವದ ತಂಡ ಭೇಟಿ ನೀಡಿ ತನಿಖೆ ಆರಂಭಿಸಿದೆ.

ಇದನ್ನೂ ಓದಿ: ತಿರುಮಲ ಅರಣ್ಯ ಪ್ರದೇಶದಲ್ಲಿ ಬೆಂಕಿ, ಕಳ್ಳಸಾಗಣೆದಾರರಿಂದ ಕೃತ್ಯ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.