ETV Bharat / city

ಎಂಆರ್​ಪಿಎಲ್ ನೇಮಕಾತಿಗೆ ತಡೆ ಎಂಬುದು ಬರೀ ನಾಟಕ, ಈಗಾಗಲೇ ನೇಮಕಾತಿ ನಡೆದಿದೆ.. ಡಿವೈಎಫ್ಐ ಆರೋಪ - ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ

2019 ರಲ್ಲಿ ಎಂಆರ್ ಪಿಎಲ್ 224 ಹುದ್ದೆಗಳ ನೇಮಕಾತಿಗೆ ಸ್ಥಳೀಯರಿಗೆ ಯಾವ ಆದ್ಯತೆಯನ್ನೂ ಒದಗಿಸದೆ ರಾಷ್ಟಮಟ್ಟದಲ್ಲಿ ಜಾಹೀರಾತು ನೀಡಿ ಅರ್ಜಿ ಆಹ್ವಾನಿಸಿತ್ತು. ಆ ಸಂದರ್ಭದಲ್ಲಿಯೇ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸ್ಥಳೀಯರಿಗೆ ಆದ್ಯತೆ ಒದಗಿಸದ ಈ ನೇಮಕಾತಿ ಪ್ರಕ್ರಿಯೆಯನ್ನು ತಡೆಯುವಂತೆ, ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಒಳಗೊಂಡು ಹೊಸತಾಗಿ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿತ್ತು.

ಡಿವೈಎಫ್ಐ
ಡಿವೈಎಫ್ಐ
author img

By

Published : May 23, 2021, 8:36 PM IST

ಮಂಗಳೂರು : ಎಂಆರ್​​ಪಿಎಲ್ ನೇಮಕಾತಿಗೆ ತಡೆ ಹಿಡಿಯಲಾಗಿದೆ ಎಂಬ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಆಕ್ರೋಶದಿಂದ ಪಾರಾಗಲು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿಯ ಶಾಸಕರುಗಳು ಆಡಿರುವ ಹೊಸ ನಾಟಕ.

ಇವರಿಗೆ ನಿಜಕ್ಕೂ ಕಾಳಜಿ ಇದ್ದರೆ ರಾಜ್ಯ ಸರಕಾರದ ನೇಮಕಾತಿಗಳಲ್ಲಿ ಸ್ಥಳೀಯರಿಗೆ ಶೇ. 80ರಷ್ಟು ಮೀಸಲಾತಿ ಕಡ್ಡಾಯಗೊಳಿಸಿ ಹೊಸ ಕಾಯ್ದೆ ತರುವಂತೆ ಕ್ರಮ ಕೈಗೊಳ್ಳಲಿ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಎಂಆರ್​ಪಿಎಲ್ ನೇಮಕಾತಿಗೆ ತಡೆ ಎಂಬುದು ಬರೀ ನಾಟಕ

2019ರಲ್ಲಿ ಎಂಆರ್‌ಪಿಎಲ್ 224 ಹುದ್ದೆಗಳ ನೇಮಕಾತಿಗೆ ಸ್ಥಳೀಯರಿಗೆ ಯಾವ ಆದ್ಯತೆಯನ್ನೂ ಒದಗಿಸದೆ ರಾಷ್ಟಮಟ್ಟದಲ್ಲಿ ಜಾಹೀರಾತು ನೀಡಿ ಅರ್ಜಿ ಆಹ್ವಾನಿಸಿತ್ತು.

ಆ ಸಂದರ್ಭದಲ್ಲಿಯೇ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸ್ಥಳೀಯರಿಗೆ ಆದ್ಯತೆ ಒದಗಿಸದ ಈ ನೇಮಕಾತಿ ಪ್ರಕ್ರಿಯೆ ತಡೆಯುವಂತೆ, ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಒಳಗೊಂಡು ಹೊಸತಾಗಿ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿತ್ತು.

ಈ ಕುರಿತು ಕಾಯ್ದೆ ರೂಪಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿತ್ತು. ಕಾರ್ಮಿಕ ಸಂಘಟನೆಗಳು ಸ್ಥಳೀಯ ಸಂಸದರು, ಶಾಸಕರು, ಉಸ್ತುವಾರಿ ಸಚಿವರಿಗೆ ಮನವಿಯನ್ನೂ ಸಲ್ಲಿಸಿದ್ದರು.

ಆಗ ಪ್ರತಿಕ್ರಿಯಿಸದೆ ಮೌನವಾಗಿದ್ದ ಜನಪ್ರತಿನಿಧಿಗಳೇ ಇಂದಿನ ಈ ಘೋರ ಅನ್ಯಾಯಕ್ಕೆ ಕಾರಣ‌. ಈಗ ಜನಾಕ್ರೋಶ ಭುಗಿಲೆದ್ದಿರುವಾಗ ಕಂಪೆನಿಯ ಎಂಡಿಯನ್ನು ಭೇಟಿ, ಮಾತುಕತೆ, ನೇಮಕಾತಿಗೆ ತಡೆ ಎಂಬ ಮಾತುಗಳಿಂದ ಯಾವ ಪ್ರಯೋಜನವೂ ಇಲ್ಲ.

ಈಗಾಗಲೇೇ ಆಯ್ಜೆಗೊಂಡಿರುವ 184 ಜನ ಹೊರ ರಾಜ್ಯದವರಿಗೆ ನೇಮಕಾತಿ ಪತ್ರವೂ ಕೈ ಸೇರಿದೆ. ಕಂಪನಿಯ ಒಳಗಡೆಯೂ ಸೇರಿಕೊಂಡಿದ್ದಾರೆ. ಹಾಗಿರುತ್ತಾ ಇಂತಹ ನಾಟಕಗಳು ಆಕ್ರೋಶಿತ ಜನರಿಗೆ ಮಾಡುವ ಅನ್ಯಾಯ ಮಾತ್ರ ಎಂದು ಆರೋಪಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸ್ಥಳೀಯ ಬಿಜೆಪಿ ಶಾಸಕರುಗಳಿಗೆ ನಿಜಕ್ಕೂ ಕಾಳಜಿ, ಪ್ರಾಮಾಣಿಕತೆ ಇದ್ದರೆ, ಮಹಿಷಿ ವರದಿಯ ಶಿಫಾರಸ್ಸುಗಳ ಆಧಾರದಲ್ಲಿ ಖಾಸಗಿ, ಸಾರ್ವಜನಿಕ ರಂಗದ ಉದ್ಯಮಗಳಲ್ಲಿ ಸ್ಥಳೀಯರಿಗೆ ನೇಮಕಾತಿಯಲ್ಲಿ ಮೀಸಲಾತಿ ಒದಗಿಸಿ ತಮ್ಮದೇ ಕರ್ನಾಟಕ ರಾಜ್ಯ ಸರಕಾರ ಹೊಸ ಕಾಯ್ದೆ ರಚಿಸುವಂತೆ ಮಾಡಲಿ.

ಈ ಬಗ್ಗೆ ತಕ್ಷಣಕ್ಕೆ ಸುಗ್ರೀವಾಜ್ಞೆ ಹೊರಡಿಸಲಿ. ಅದು ಮಾತ್ರ ಎಮ್ಆರ್ ಪಿಎಲ್ ನ 224 ಉದ್ಯೋಗಗಳ‌‌ನ್ನು ಸ್ಥಳೀಯರಿಗೆ ಒದಗಿಸಿಕೊಡಲಿದೆ. ಭವಿಷ್ಯದಲ್ಲಿಯೂ ಕರ್ನಾಟಕದ ಯುವಜನತೆಗೆ ನಾಡಿನಲ್ಲಿ ಸೃಷ್ಟಿಯಾಗುವ ಉದ್ಯೋಗದದಲ್ಲಿ ಹಕ್ಕು ಒದಗಿಸಲಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.