ಬೆಳ್ತಂಗಡಿ: ಸಂಸದೆ ಶೋಭಾ ಕರಂದ್ಲಾಜೆ ಇತ್ತೀಚೆಗೆ ತುಳು ರಾಜ್ಯದ ಬೇಡಿಕೆಯು ಕುಚೋದ್ಯದ ಬೇಡಿಕೆ ಎಂದಿದ್ದು ಖಂಡನೀಯ. ಕನ್ನಡ ಏಕೀಕರಣ ಚಳವಳಿಯನ್ನು ಸಮರ್ಥಿಸಿರುವ ಇವರು ಅದೇ ತುಳು ಏಕೀಕರಣ ಚಳವಳಿಯನ್ನು ಕುಚೋದ್ಯದ ಬೇಡಿಕೆ ಎಂದಿದ್ದು ಇವರ ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದು ತುಳುವೆರೆ ಪಕ್ಷದ ಅಧ್ಯಕ್ಷ ಶೈಲೇಶ್ ಆರ್.ಜೆ. ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಶೈಲೇಶ್, ತುಳುವರ ನಾಡು ನುಡಿಯ ಹೋರಾಟವನ್ನು ಅವಮಾನಿಸುವ ಮೂಲಕ ಸಮಸ್ತ ತುಳುವರ ಭಾವನೆಗಳಿಗೆ ಶೋಭಾ ಕರಂದ್ಲಾಜೆ ಅವರು ನೋವು ತಂದಿದ್ದಾರೆ. ತುಳು ಅಸ್ಮಿತೆಯ ವಿಚಾರಗಳನ್ನು ಯಾರೇ ಕುಚೋದ್ಯ ಮಾಡಿದರೂ ಅದನ್ನು ತುಳುವೆರೆ ಪಕ್ಷ ಖಂಡಿಸುತ್ತದೆ ಎಂದಿದ್ದಾರೆ.