ETV Bharat / city

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಕಚೇರಿ ಉದ್ಘಾಟಿಸಿದ ಸಚಿವ..! - Minister Kota Srinivasa Poojary

ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿಯಿರುವ ಹ್ಯಾಮಿಲ್ಟನ್ ಕಾಂಪ್ಲೆಕ್ಸ್​ನಲ್ಲಿದ್ದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಮಂಗಳೂರು ತಾಲೂಕು ಪಂಚಾಯತ್ ಕಚೇರಿ ಬಳಿಗೆ ಸ್ಥಳಾಂತರಗೊಂಡಿದ್ದು, ನೂತನ ಕಚೇರಿಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.

Minister Kota Srinivasa Poojary Inaugurate  new office of Bari Sahitya Akademi
ಸ್ಥಳಾಂತರಗೊಂಡ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಕಚೇರಿ ಉದ್ಘಾಟಿಸಿದ ಸಚಿವ..!
author img

By

Published : Jun 16, 2020, 4:27 AM IST

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಕಚೇರಿಯನ್ನ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಕಚೇರಿ ಉದ್ಘಾಟಿಸಿದ ಸಚಿವ..!

ನಗರದ ಸ್ಟೇಟ್ ಬ್ಯಾಂಕ್ ಬಳಿಯಿರುವ ಹ್ಯಾಮಿಲ್ಟನ್ ಕಾಂಪ್ಲೆಕ್ಸ್​ನಲ್ಲಿದ್ದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ನಿನ್ನೆ ಮಂಗಳೂರು ತಾಲೂಕು ಪಂಚಾಯತ್ ಕಚೇರಿ ಬಳಿಗೆ ಸ್ಥಳಾಂತರಗೊಂಡಿತು. ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾರಿ ಸಾಹಿತ್ಯ ಅಕಾಡೆಮಿಗೆ ವೇಗ ಕೊಡಲು, ಜನಪರ ಕಾರ್ಯಕ್ರಮಗಳನ್ನ ಕೈಗೆತ್ತಿಕೊಳ್ಳಲು, ಕಲೆ, ಸಾಹಿತ್ಯ, ಅಭಿರುಚಿಗೆ ತಕ್ಕಂತೆ ಉತ್ತಮ ಕೆಲಸ ನಿರ್ವಹಿಸಲು ನೂತನ ಕಟ್ಟಡದ ಅವಶ್ಯಕತೆಯಿದೆ ಎಂದು ಮನಗೊಂಡು ನಾವು ಸ್ವಂತ ನಿವೇಶನ ನೀಡಲು ಚಿಂತನೆ ನಡೆಸಿದ್ದೇವೆ‌ ಎಂದರು.

ಇಲ್ಲಿಯವರೆಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಚೇರಿಯಿದ್ದ ಕಟ್ಟಡ ಅಷ್ಟೊಂದು ಸರಿಯಾದ ಪರಿಸರದಲ್ಲಿ ಇಲ್ಲದ ಕಾರಣ ಈ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ‌. ಸರಿಯಾದ ನಿವೇಶನ ದೊರಕಿದ ಕೂಡಲೇ ಸ್ವಂತ ಕಟ್ಟಡಕ್ಕೆ ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಳಾಂತರಗೊಳ್ಳಲಿದೆ. ಇದಕ್ಕೆ ಬೇಕಾದ ಆರ್ಥಿಕ ಸಹಕಾರ ಹಾಗೂ ಪೂರ್ಣ ಶಕ್ತಿಯನ್ನು ಕರ್ನಾಟಕ ಸರ್ಕಾರ ನೀಡಲಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.