ETV Bharat / city

ಬಡ ವಿದ್ಯಾರ್ಥಿಗಳಿಗೆ 8 ಲಕ್ಷ ರೂ. ಶಿಕ್ಷಣ ವೇತನ ನೀಡಿದ ಮೇರಿ ಕ್ಯಾಥೋಲಿಕ್ ಸೆಂಟರ್

author img

By

Published : Nov 7, 2020, 6:49 PM IST

ಸೊಡಾಲಿಟಿ ಆಫ್ ಇಮ್ಯಾಕುಲೇಟ್ ಅಫ್ ಬ್ಲೆಸ್ಡ್ ವರ್ಜಿನ್ ಮೇರಿ ಕ್ಯಾಥೋಲಿಕ್ ಸೆಂಟರ್ ಬಡ ವಿದ್ಯಾರ್ಥಿಗಳಿಗೆ 8 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಲಾಯಿತು.

mary-catholic-center-gave-8-lakhs-Scholarship-for-poor-students
ಬಡ ವಿದ್ಯಾರ್ಥಿಗಳಿಗೆ 8 ಲಕ್ಷ ರೂ. ಶಿಕ್ಷಣ ವೇತನ ನೀಡಿದ ಮೇರಿ ಕ್ಯಾಥೋಲಿಕ್ ಸೆಂಟರ್

ಮಂಗಳೂರು: ಸೊಡಾಲಿಟಿ ಆಫ್ ಇಮ್ಯಾಕುಲೇಟ್ ಅಫ್ ಬ್ಲೆಸ್ಡ್ ವರ್ಜಿನ್ ಮೇರಿ ಕ್ಯಾಥೋಲಿಕ್ ಸೆಂಟರ್ ವತಿಯಿಂದ ನಗರದ ಕೊಡಿಯಾಲ್ ಬೈಲ್​ನಲ್ಲಿರುವ ಬಿಷಪ್ ಹೌಸ್ ಸಭಾಂಗಣದಲ್ಲಿ ಬಡ ವಿದ್ಯಾರ್ಥಿಗಳಿಗೆ 8 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ.ಡಾ.ಪೀಟರ್ ಪಾವ್ಲ್ ಸಲ್ಡಾನ, ಸೊಡಾಲಿಟಿ ಆಫ್ ಇಮ್ಯಾಕುಲೇಟ್ ಅಫ್ ಬ್ಲೆಸ್ಡ್ ವರ್ಜಿನ್ ಮೇರಿ ಕ್ಯಾಥೋಲಿಕ್ ಸೆಂಟರ್ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ಸಂಸ್ಥೆ ಜಿಲ್ಲೆಯ ಅದೆಷ್ಟೋ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ 8 ಲಕ್ಷ ರೂ. ಅಧಿಕ ಮೊತ್ತದ ಶಿಕ್ಷಣ ವೇತನವನ್ನು ನೀಡುತ್ತಿದೆ. ಇದರಿಂದ ಬಡ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ‌ ಎಂದರು.

ಇನ್ನು, ಇಲ್ಲಿ ಕೃತಜ್ಞತಾ ಮನೋಭಾವದಿಂದ ವೇತನ ಪಡೆದ ವಿದ್ಯಾರ್ಥಿಗಳು ಇತರರಿಗೆ ನೆರವಾಗುವಂತಾಗಲಿ ಎಂದು ಅ.ವಂ.ಡಾ.ಪೀಟರ್ ಪಾವ್ಲ್ ಸಲ್ಡಾನ ಎಂದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.