ETV Bharat / city

ಸುಳ್ಯದಲ್ಲಿ ಗಾಂಜಾ ಸಾಗಾಟ : ಇಬ್ಬರು ಆರೋಪಿಗಳ ಬಂಧನ - ಗಾಂಜಾ ಸಾಗಾಟ ಆರೋಪಿಗಳ ಬಂಧನ

ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2 ಲಕ್ಷ ರೂ. ಮೌಲ್ಯದ 8 ಕೆ.ಜಿ. 208 ಗ್ರಾಂ ಗಾಂಜಾ ಮತ್ತು ಕೇರಳ ನೋಂದಣಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ..

Marijuana transport accused arrested by sulya police
ಗಾಂಜಾ ಸಾಗಾಟ
author img

By

Published : Nov 6, 2020, 4:24 PM IST

ಸುಳ್ಯ : ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸುಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 8 ಕೆಜಿ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಕಾಸರಗೋಡು ಮುಂಡೋಳು ಅಟ್ಟಂಚಾಲ್​ನ ಮುರುವ ಮನೆ ಎಮ್. ಎ. ಅಬ್ಬಾಸ್ (63) ಹಾಗೂ ಕಾಸರಗೋಡು ಮೊಯಿನಾಬಾದ್ ಅಬ್ದುಲ್ ಕುಇ (50) ಬಂಧಿತ ಆರೋಪಿಗಳು.

ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ನವೀನ್‌ಚಂದ್ರ ಜೋಗಿಯವರ ಮಾರ್ಗದರ್ಶನದಲ್ಲಿ ಎಸ್.ಐ. ಹರೀಶ್ ಎಂ.ಆರ್. ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. 8 ಕೆ.ಜಿ 208 ಗ್ರಾಂ ಗಾಂಜಾದ ಮೌಲ್ಯ 2 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಸ್ವಿಫ್ಟ್ ಕಾರು(KL 14 V 7008)ನ್ನು ವಶಕ್ಕೆ ಪಡೆಯಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.