ಮಂಗಳೂರು: ಕೋವಿಡ್ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಫೀಲ್ಡಿಗಿಳಿದ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ಅವರು ಅಗತ್ಯ ವಸ್ತುಗಳನ್ನು ಹೊರತುಪಡಿಸಿದ ಎಲ್ಲಾ ಅಂಗಡಿಗಳಿಗೆ ದಂಡ ವಿಧಿಸಿ, ಬಂದ್ ಮಾಡಿಸಿದರು.
ನಗರದ ಕ್ಲಾಕ್ ಟವರ್ನಿಂದ ಪರಿಶೀಲನೆ ಆರಂಭಿಸಿದ ಅವರು ಸೆಂಟ್ರಲ್ ಮಾರುಕಟ್ಟೆ, ಮಿಲಾಗ್ರಿಸ್, ಬಲ್ಮಠ ಮಾರ್ಗವಾಗಿ ಫಳ್ನೀರ್ನಿಂದ ಕಂಕನಾಡಿವರೆಗೆ ಸುಮಾರು ಅಂಗಡಿಗಳನ್ನು ಬಂದ್ ಮಾಡಿಸಿದರು. ಅಲ್ಲದೇ ಮಲಬಾರ್ ಗೋಲ್ಡ್, ಕೆಟಿಎಂ ಸ್ಟೋರ್, ಬ್ರ್ಯಾಂಡ್ ಫ್ಯಾಕ್ಟ್ರಿ ಮುಂತಾದ ಶೋ ರೂಂಗಳನ್ನು ದಂಡ ವಿಧಿಸಿ ಬಂದ್ ಮಾಡಿಸಿದರು. ಸುಮಾರು ಐದು ಕಿ.ಮೀ.ನಷ್ಟು ಪ್ರದೇಶದಲ್ಲಿ ಕಮಿಷನರ್ ನಡಿಗೆ ಮೂಲಕವೇ ರೈಡ್ ಮಾಡಿ ಪರಿಶೀಲನೆ ನಡೆಸಿದರು.
ರೈಡ್ ವೇಳೆ ದಾರಿಯಲ್ಲಿ ಮಾಸ್ಕ್ ಧರಿಸಿ ಕೋವಿಡ್ ನಿಯಮ ಪಾಲನೆ ಮಾಡಿರುವ ಹಿರಿಯ ನಾಗರಿಕರು, ಮಕ್ಕಳಿಗೆ ಗುಲಾಬಿ ಕೊಟ್ಟು ಅಭಿನಂದಿಸಲಾಯಿತು. ಈ ಸಂದರ್ಭ ಡಿಸಿಪಿ ಹರಿರಾಂ ಶಂಕರ್, ಎಸಿಪಿ ನಟರಾಜ್, ಇನ್ನಿತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.