ETV Bharat / city

ಮಂಗಳೂರಿನ ಖಾಸಗಿ ಶಾಲೆಯಲ್ಲಿ ಉದ್ಭವಿಸಿದ್ದ ಟರ್ಬನ್​ ಸಮಸ್ಯೆ ಮಾತುಕತೆ ಮೂಲಕ ಪರಿಹಾರ

ಮಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಟರ್ಬನ್ ವಿಚಾರವಾಗಿ ಉದ್ಭವಿಸಿದ್ದ ಸಮಸ್ಯೆ ಮಾತುಕತೆ ಬಳಿಕ ಪರಿಹಾರಗೊಂಡಿದೆ.

manglore turban issue
ಮಂಗಳೂರಿನ ಟರ್ಬನ್​ ವಿವಾದ
author img

By

Published : Feb 26, 2022, 10:36 AM IST

ಮಂಗಳೂರು(ದಕ್ಷಿಣ ಕನ್ನಡ): ಹಿಜಾಬ್, ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಖಾಸಗಿ ಶಾಲೆಯೊಂದು ಒಂದನೇ ತರಗತಿಗೆ ಸಿಖ್ ಬಾಲಕನನ್ನು ಸೇರಿಸಲು ಟರ್ಬನ್​​ ಹಾಕದಂತೆ ಸೂಚಿಸಿದ್ದು, ಈ ವಿಚಾರ ಮಾತುಕತೆ ಬಳಿಕ ಪರಿಹಾರವಾಗಿದೆ.

ಮಂಗಳೂರಿನಲ್ಲಿ ವಾಸವಾಗಿರುವ ರಾಷ್ಟ್ರೀಯ ಸಿಖ್ ಸಂಘಟನೆಯ ಕಾರ್ಯದರ್ಶಿ ಬಲ್ವಿಂದರ್ ಸಿಂಗ್ ಅವರು ತಮ್ಮ 6 ವರ್ಷದ ಮಗನನ್ನು ಒಂದನೇ ತರಗತಿಗೆ ಸೇರಿಸಲು ಖಾಸಗಿ ಶಾಲೆಗೆ ಹೋಗಿದ್ದರು. ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಟರ್ಬನ್ ತೆಗೆಯದೇ ಶಾಲೆಗೆ ಪ್ರವೇಶ ನೀಡಲು ನಿರಾಕರಿಸಿದೆ.

ಇದನ್ನೂ ಓದಿ: ಕೇಸರಿ ಶಾಲು-ಹಿಜಾಬ್ ತೆಗೆಸಿದಂತೆ ಟರ್ಬನ್ ತೆಗೆಯಲು ಸಾಧ್ಯವೇ? ಬೆಂಗಳೂರು ಕಾಲೇಜು ಆಡಳಿತ ಮಂಡಳಿ ಮನವಿ ಒಪ್ಪದ ವಿದ್ಯಾರ್ಥಿನಿ

ಒಂದೋ ಟರ್ಬನ್​​ ತೆಗೆಯಬೇಕು, ಇಲ್ಲಾ ಬೇರೆ ಶಾಲೆಯಲ್ಲಿ ಶಾಲೆಗೆ ಸೇರಿಸಿ ಎಂದು ಸೂಚಿಸಲಾಗಿತ್ತು. ಇದರಿಂದಾಗಿ ಸಿಖ್ ಬಾಲಕನ ಶಾಲಾ ಪ್ರವೇಶಕ್ಕೆ ಅಡ್ಡಿ ಎದುರಾಗಿತ್ತು. ಆದರೆ ಆ ಬಳಿಕ ಶಾಲಾ ಆಡಳಿತ ಮಂಡಳಿ ಜೊತೆಗೆ ವಿವಿಧ ಹಂತದ ಮಾತುಕತೆ ನಡೆಸಿದ ಬಳಿಕ ಸಿಖ್ ಬಾಲಕನಿಗೆ ಟರ್ಬನ್​​ ಧರಿಸಲು ಅವಕಾಶ ನೀಡಲಾಗಿದೆ. ಈ ಬಗ್ಗೆ 'ಈಟಿವಿ ಭಾರತ' ಜೊತೆಗೆ ಮಾತನಾಡಿರುವ ಬಲ್ವಿಂದರ್ ಸಿಂಗ್ ಅವರು ಸಮಸ್ಯೆ ಬಗೆಹರಿದಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.