ETV Bharat / city

ಮಂಗಳೂರಲ್ಲಿ ಇಂದಿನಿಂದ ಮತ್ತಷ್ಟು ಬಿಗಿ: ಮೇ 15ರ ಬಳಿಕ ಮದುವೆ, ಸಭೆ ರದ್ದು... ಏನುಂಟು, ಏನಿಲ್ಲ?

author img

By

Published : May 7, 2021, 1:59 AM IST

Updated : May 7, 2021, 8:15 AM IST

ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದರೂ ಕರ್ಫ್ಯೂ ಉಲ್ಲಂಘನೆ ಮಾಡಿ ಜನರು ಓಡಾಡುತ್ತಿದ್ದಾರೆ. ಈ ಹಿನ್ನೆಲೆ ಕರ್ಫ್ಯೂ ಬಿಗಿಯಾಗಿ ಮಾಡಲು ಜಿಲ್ಲಾಡಳಿತ ನಿರ್ಧರಿಸಿತ್ತು.‌ ಅದರಂತೆ ಇಂದಿನಿಂದಲೇ ಬಿಗಿಯಾದ ಕರ್ಫ್ಯೂ ಜಾರಿಯಾಗಲಿದೆ.

ಮಂಗಳೂರಲ್ಲಿ ಮತ್ತಷ್ಟು ಬಿಗಿ
ಮಂಗಳೂರಲ್ಲಿ ಮತ್ತಷ್ಟು ಬಿಗಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದಲೇ (ಶುಕ್ರವಾರ) ಕೊರೊನಾ ಕರ್ಫ್ಯೂ ಕಟ್ಟುನಿಟ್ಟಿನಿಂದ ಜಾರಿಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದರೂ ಕರ್ಫ್ಯೂ ಉಲ್ಲಂಘನೆ ಮಾಡಿ ಜನರು ಓಡಾಡುತ್ತಿದ್ದಾರೆ. ಈ ಹಿನ್ನೆಲೆ ಕರ್ಫ್ಯೂ ಬಿಗಿಯಾಗಿ ಮಾಡಲು ಜಿಲ್ಲಾಡಳಿತ ನಿರ್ಧರಿಸಿತ್ತು.‌ ಅದರಂತೆ ಇಂದಿನಿಂದಲೇ ಬಿಗಿಯಾದ ಕರ್ಫ್ಯೂ ಜಾರಿಯಾಗಲಿದೆ.

ಹೊಸ ಆದೇಶದ ಪ್ರಕಾರ ಎಪಿಎಂಸಿ, ದಿನಸಿ ಅಂಗಡಿ ಮತ್ತು ಅವಶ್ಯಕ ಸೇವೆ ಒದಗಿಸುವ ಎಲ್ಲಾ ಅಂಗಡಿಗಳು ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿಸಲಾಗಿದೆ. 10 ಗಂಟೆಗೆ ಎಲ್ಲಾ ಅಂಗಡಿಗಳ ಮುಚ್ಚಬೇಕು ಮತ್ತು ನಿಗದಿಪಡಿಸಿದ ಸಮಯದ ನಂತರ ಯಾವುದೇ ಮಾರಾಟಗಾರರು ಮತ್ತು ಖರೀದಿದಾರರ ಓಡಾಟ ನಿಷೇಧಿಸಲಾಗಿದೆ. ಆನ್ ಲೈನ್ ಸೇವಾ ಪೂರೈಕೆದಾರರಿಗೆ ರಾತ್ರಿ 11 ಗಂಟೆಯವರೆಗೆ ಮಾತ್ರ ಅವಕಾಶವಿದೆ. ಮೇ 15ರ ನಂತರ ಅನುಮತಿ ಪಡೆದ ಸಮಾರಂಭ ಸೇರಿದಂತೆ ಮದುವೆ ಮತ್ತು ಇತರೆಲ್ಲ ಸಮಾರಂಭ ನಿಷೇಧಿಸಲಾಗಿದೆ. ಅನಗತ್ಯ ಸಂಚರಿಸುವ ವಾಹನಗಳನ್ನು ಮುಟ್ಟುಗೋಲು ಹಾಕಲು ಆದೇಶಿಸಲಾಗಿದೆ.

ಇಂದು ರಾತ್ರಿಯಿಂದಲೇ ವೀಕೆಂಡ್ ಕರ್ಫ್ಯೂ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ರಾತ್ರಿಯಿಂದಲೇ ವೀಕೆಂಡ್ ಕರ್ಫ್ಯೂ ಆದೇಶಿಸಲಾಗಿದೆ. ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಇರಲಿದೆ. ಈ ಅವಧಿಯಲ್ಲಿ ಮೆಡಿಕಲ್, ಆಸ್ಪತ್ರೆ ಹೊರತುಪಡಿಸಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ತುರ್ತು ಮತ್ತು ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಮತ್ತು 24x7 ಕಾರ್ಯಾಚರಣೆ ಅಗತ್ಯವಿರುವ ಕೈಗಾರಿಕೆ, ಕಂಪೆನಿ, ಸಂಸ್ಥೆಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಈ ಸಂದರ್ಭದಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಆದರೆ ಹೊರಗಿನ ಪ್ರದೇಶದಿಂದ ಕಾರ್ಮಿಕರನ್ನು ‌ಕರೆತರದೆ ನಡೆಯುವ ನಿರ್ಮಾಣ ಕಾಮಗಾರಿ ಮಾಡಬಹುದಾಗಿದೆ. ರೋಗಿಗಳು, ಅವರ ಪರಿಚಾರಕರು, ವೈದ್ಯಕೀಯ ತುರ್ತು ಸಂದರ್ಭದಲ್ಲಿ ಕನಿಷ್ಠ ಪುರಾವೆಗಳೊಂದಿಗೆ ಸಂಚರಿಸಲು ಅವಕಾಶವಿದೆ.

ಇದನ್ನೂ ಓದಿ: ಮಂಗಳೂರಲ್ಲಿ ಪೊಲೀಸ್ ಆಯುಕ್ತರಿಂದ ದಿಢೀರ್ ದಾಳಿ: ಅನಗತ್ಯ ತಿರುಗುತ್ತಿದ್ದವರ ವಾಹನ ವಶ

Last Updated : May 7, 2021, 8:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.