ಮಂಗಳೂರು(ದಕ್ಷಿಣ ಕನ್ನಡ): ಸಿಗ್ನಲ್ನಲ್ಲಿ ನಿಂತಿದ್ದ ಓಮ್ನಿ ಮೇಲೆ ಲಾರಿ ಮಗುಚಿ ಬಿದ್ದು ಕಾರಿನಲ್ಲಿದ್ದ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸುರತ್ಕಲ್ನಲ್ಲಿ ನಡೆದಿದೆ. ಕುಳಾಯಿಯ ಗೋಕುಲನಗರ ನಿವಾಸಿ ಲೋಕೇಶ್ ಮೃತಪಟ್ಟವರು. ಸುರತ್ಕಲ್ ಕುಳಾಯಿಯ ಹೊನ್ನಕಟ್ಟೆ ಸಿಗ್ನಲ್ ಬಳಿ ಈ ದುರ್ಘಟನೆ ನಡೆದಿದೆ.
ಮಂಗಳೂರು ಕಡೆಯಿಂದ ಬಂದ ಲೋಕೇಶ್(38) ಅವರು ರಾಷ್ಟ್ರೀಯ ಹೆದ್ದಾರಿ 66ರ ಹೊನ್ನಕಟ್ಟೆ ಸಿಗ್ನಲ್ ಬಳಿಯಿಂದ ಎಂಆರ್ಪಿಎಲ್ ಕಡೆಗೆ ಹೋಗಲು ರಸ್ತೆಯ ಪಕ್ಕದಲ್ಲಿ ಕಾರು ನಿಲ್ಲಿಸಿದ್ದರು. ಈ ವೇಳೆ, ಹಿಂಬದಿಯಿಂದ ಬಂದ ಲಾರಿ ಏಕಾಏಕಿ ಓಮ್ನಿ ಮೇಲೆ ಮಗುಚಿ ಬಿದ್ದಿದೆ. ಈ ವೇಳೆ ಕಾರಿನೊಳಗಿದ್ದ ಲೋಕೇಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
![mangaluru](https://etvbharatimages.akamaized.net/etvbharat/prod-images/15772906_thu.jpg)
ಇದೇ ವೇಳೆ, ಕಾರಿನ ಮುಂಭಾಗದಲ್ಲಿ ಇದ್ದ ದ್ವಿಚಕ್ರ ವಾಹನಕ್ಕೂ ಹಾನಿಯಾಗಿದ್ದು ದ್ವಿಚಕ್ರ ವಾಹನ ಸವಾರ ತನ್ನ ಸ್ಕೂಟರ್ ಬಿಟ್ಟು ಓಡಿದ ಪರಿಣಾಮ ಪಾರಾಗಿದ್ದಾರೆ. ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರು, ಇಬ್ಬರ ದುರ್ಮರಣ