ಮಂಗಳೂರು: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಪೊಲೀಸರಿಗೆ ಶರಣಾಗಿರುವ ಆದಿತ್ಯರಾವ್, ತಿಂಗಳಿಂದ ಮಂಗಳೂರಿನಲ್ಲಿಯೇ ವಾಸವಾಗಿದ್ದ ಎನ್ನಲಾಗಿದೆ.
ತನ್ನ ತಂದೆಯೊಂದಿಗೆ ಉಡುಪಿಯಿಂದ ಮಂಗಳೂರಿಗೆ ಬಂದು ಚಿಲಿಂಬಿಯ ಕೆನರಾ ಬ್ಯಾಂಕ್ನ ಹಿಲ್ಸೈಡ್ ಅಪಾರ್ಟ್ಮೆಂರ್ಟ್ನಲ್ಲಿ ತಂಗಿದ್ದ. ಇಲ್ಲಿನ ಕುಡ್ಲ ರೆಸ್ಟೋರೆಂಟ್ನಲ್ಲಿ ತಿಂಗಳಿಂದ ಕೆಲಸ ಮಾಡುತ್ತಿದ್ದು, ಬಿಲ್ಲಿಂಗ್ ಕಾರ್ಯದ ತರಬೇತಿ ಪಡೆಯುತ್ತಿದ್ದ ಎಂಬುದು ತಿಳಿದುಬಂದಿದೆ.
ತಿಂಗಳ ಸಂಬಳ ಪಡೆದ ಬಳಿಕ ಆತ ಕೆಲಸಕ್ಕೆ ಹೋಗಿರಲಿಲ್ಲ. ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆತನ ವರ್ತನೆ ಸಹಜವಾಗಿರಲಿಲ್ಲ ಎಂದು ತಿಳಿದು ಬಂದಿದೆ.