ETV Bharat / city

ಮಂಗಳೂರು ವಿವಿ ಪದವಿ ಪರೀಕ್ಷೆ ಮುಂದೂಡಿಕೆ - ಮಂಗಳೂರು ವಿಶ್ವವಿದ್ಯಾಲಯ

ಕೋವಿಡ್‌ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪರೀಕ್ಷಗಳ ಮೇಲೂ ಪರಿಣಾಮ ಬೀರುತ್ತಿದೆ. ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೊಳಿಸಿರುವ ಪರಿಣಾಮ ಮಂಗಳೂರು ವಿವಿಯ ಪದವಿ ಪರೀಕ್ಷೆಗಳು ಮತ್ತೆ ಮುಂದೂಡಿಕೆಯಾಗಿವೆ.

Mangalore university degree exam postponed: PL Dharma
ಮಂಗಳೂರು ವಿವಿ ಪದವಿ ಪರೀಕ್ಷೆ ಮುಂದೂಡಿಕೆ
author img

By

Published : Apr 21, 2021, 2:04 AM IST

ಮಂಗಳೂರು(ದಕ್ಷಿಣ ಕನ್ನಡ): ರಾಜ್ಯ ಸರ್ಕಾರ ಹೊಸದಾಗಿ ಕೊರೊನಾ ನಿಯಮಾವಳಿ ಜಾರಿಗೆ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಎಪ್ರಿಲ್ 21 ರಿಂದ ನಡೆಯಬೇಕಿದ್ದ ಪದವಿ ಪರೀಕ್ಷೆಗಳನ್ನು ಮುಂದೂಡಿದೆ. ಎಪ್ರಿಲ್ 1ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆ ಆರಂಭವಾಗಿತ್ತು. ಇದರ ಮಧ್ಯೆ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಎ.7 ರಿಂದ ಎ.12 ವರೆಗಿನ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಮುಂದೂಡಲಾಗಿದ್ದ ಪರೀಕ್ಷೆಗಳಿಗೆ ವೇಳಾಪಟ್ಟಿ ನಿಗದಿಪಡಿಸಿ ಮೇ 8ರ ತನಕ ಪರೀಕ್ಷೆ ನಡೆಸಲು ಮಂಗಳೂರು ವಿವಿ ನಿರ್ಧರಿಸಿತ್ತು‌‌.

ಇದೀಗ ರಾಜ್ಯ ಸರ್ಕಾರ ಹೊಸದಾಗಿ ಕೊರೊನಾ ನಿಯಮಾವಳಿ ರೂಪಿಸಿದ ಹಿನ್ನೆಲೆಯಲ್ಲಿ ಎ.21 ರಿಂದ ನಡೆಯುವ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಮಂಗಳೂರಿನ ವಿವಿ ಪರೀಕ್ಷಾಂಗ ರಿಜಿಸ್ಟ್ರಾರ್ ಪ್ರೊ. ಪಿ ಎಲ್ ಧರ್ಮ ತಿಳಿಸಿದ್ದಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.