ಮಂಗಳೂರು: ಎಂಆರ್ಪಿಎಲ್ನ (ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್) 57 ಮಂದಿ ಕಾರ್ಮಿಕರನ್ನು ವಜಾ ಮಾಡಿರುವುದನ್ನು ವಿರೋಧಿಸಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಎಂಆರ್ಪಿಎಲ್ ಎಲೆಕ್ಟ್ರಿಕ್ ವಿಭಾಗದ 57 ಮಂದಿ ಕಾರ್ಮಿಕರನ್ನು ಸಂಸ್ಥೆ ವಜಾ ಮಾಡಿತ್ತು. ಇದನ್ನು ವಿರೋಧಿಸಿ ವಜಾಗೊಂಡ ಕಾರ್ಮಿಕರು ಎಂಆರ್ಪಿಎಲ್ನ ಕಾರ್ಗೋ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸ್ಥಳಕ್ಕಾಗಮಿಸಿದ ಶಾಸಕ ಉಮಾನಾಥ ಕೋಟ್ಯಾನ್, ವಜಾಗೊಂಡ ಕಾರ್ಮಿಕರ ಅಹವಾಲುಗಳನ್ನು ಸ್ವೀಕರಿಸಿದರು.
ಬಳಿಕ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಯಿಸಿದ ಶಾಸಕರು, 57 ಮಂದಿ ಕಾರ್ಮಿಕರನ್ನು ವಜಾ ಮಾಡಿರುವ ಸಂಸ್ಥೆ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ವಜಾಗೊಂಡ ಕಾರ್ಮಿಕರಿಗೆ ಮತ್ತೆ ಕೆಲಸ ನೀಡಬೇಕು ಎಂದು ತಾಕೀತು ಮಾಡಿದರು.