ಮಂಗಳೂರು: ಪೌರತ್ವ ಕಾಯ್ದೆ ವಿರುದ್ಧದ ಹಿಂಸಾಚಾರ ಹಿನ್ನೆಲೆಯಲ್ಲಿ ಕಡಿತಗೊಳಿಸಲಾಗಿದ್ದ ಇಂಟರ್ ನೆಟ್ ಸೇವೆಯನ್ನು ಜಿಲ್ಲೆಯಲ್ಲಿ ಪುನಃ ಪ್ರಾರಂಭಿಸಲಾಗಿದೆ.
ಡಿ.19 ರಂದು ಮಂಗಳೂರಿನಲ್ಲಿ ಹಿಂಸಾಚಾರ ನಡೆದು ಗೋಲಿಬಾರ್ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುವುದನ್ನು ಮತ್ತು ಅಪಪ್ರಚಾರ ನಡೆಯುವುದನ್ನು ತಪ್ಪಿಸಲು ಮಂಗಳೂರು ಪೊಲೀಸ್ ಆಯುಕ್ತರ ವಿನಂತಿ ಮೇರೆಗೆ ಇಂಟರ್ ನೆಟ್ ಸೇವೆಯನ್ನು ಜಿಲ್ಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು.
19 ರ ರಾತ್ರಿ ಸ್ಥಗಿತಗೊಂಡಿದ್ದ ಇಂಟರ್ ನೆಟ್ ಸೇವೆ ಡಿಸೆಂಬರ್ 21 ರ ರಾತ್ರಿ 10 ಗಂಟೆ ಸುಮಾರಿಗೆ ಪುನಾರಂಭವಾಗಿದೆ. ಎರಡು ದಿನಗಳಿಂದ ಇಂಟರ್ ನೆಟ್ ಸೇವೆಯಿಲ್ಲದೆ ಪರದಾಡುತ್ತಿದ್ದ ಬಳಕೆದಾರರು ಖುಷಿಗೊಂಡಿದ್ದಾರೆ.