ETV Bharat / city

370 ರದ್ಧತಿ, ಆರ್​ಬಿಐನಿಂದ ಮೀಸಲು ನಿಧಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರಾ ಸಸಿಕಾಂತ್​​​ ಸೆಂಥಿಲ್​? - submitted his resign letter

ಸಸಿಕಾಂತ್ ಸೆಂಥಿಲ್ ಅವರು ಜಮ್ಮು-ಕಾಶ್ಮೀರದ 370 ವಿಧಿ ರದ್ಧತಿ ಬಳಿಕ ನಡೆದ ಬೆಳವಣಿಗೆ, ಆರ್​ಬಿಐನಿಂದ ಮೀಸಲು ನಿಧಿ ತೆಗೆದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

Karnataka IAS officer S Sasikanth Senthil has submitted his resign letter
author img

By

Published : Sep 7, 2019, 11:29 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರನ್ನು ಮೂರು ದಿನಗಳ ಹಿಂದೆ ಭೇಟಿಯಾಗಿದ್ದೆ. ಆಗ ಅವರು ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನದ 370 ವಿಧಿ ರದ್ಧತಿ ಬಳಿಕ ನಡೆದ ಬೆಳವಣಿಗೆ, ಆರ್​ಬಿಐನಿಂದ ಮೀಸಲು ನಿಧಿ ತೆಗೆದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರೊಂದಿಗೆ ಮಾತನಾಡಲು ಹೋಗಿದ್ದೆ. ಆಗ ಈ ವಿಚಾರಗಳನ್ನು ಪ್ರಸ್ತಾಪಿಸಿದ್ದರು. ಕಾಶ್ಮೀರದಲ್ಲಿ ಎಲ್ಲಾ ವ್ಯವಸ್ಥೆಯನ್ನೂ ಬಂದ್ ಮಾಡಲಾಗಿತ್ತು. ಆರ್​ಬಿಐನಿಂದ ₹ 1,76,501 ಕೋಟಿ ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡುವುದರ ಬಗ್ಗೆ ಹೇಳಿದ್ದರು ಎಂದರು.

ಮಾಜಿ ಸಚಿವ ಯು.ಟಿ.ಖಾದರ್

ಸೆಂಥಿಲ್ ಅವರು ತಮ್ಮ ರಾಜೀನಾಮೆ ವಾಪಾಸ್​ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ಖಾದರ್, ಪ್ರಸ್ತುತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಲು ಅಸಾಧ್ಯವಾದರೆ ಅವರು ಒಂದೆರಡು ವರ್ಷ ರಜೆ ತೆಗೆದುಕೊಂಡು ಮತ್ತೆ ವಾಪಸಾಗಲಿ. ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಜೊತೆಗೆ ಮಾತನಾಡಿದ್ದೇನೆ ಎಂದರು.

Intro:ಮಂಗಳೂರು: ಸಸಿಕಾಂತ್ ಸೆಂಥಿಲ್ ಅವರನ್ಯ ಮೂರು ದಿನಗಳ ಹಿಂದೆ ಭೇಟಿಯಾದಾಗ ಅವರು ಕಾಶ್ಮೀರದ 370 ವಿಧಿ ರದ್ದು ಬಳಿಕ ಆದ ಬೆಳವಣಿಗೆ , ಆರ್ ಬಿ ಐ ನಿಂದ ಮೀಸಲು ನಿಧಿ ತೆಗೆದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ

Body:ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಅಭಿವೃದ್ಧಿ ಗೆ ಸಂಬಂಧಿಸಿದಂತೆ ಅವರೊಂದಿಗೆ ಮಾತನಾಡಲು ಹೋದಾಗ ಈ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದರು. ಕಾಶ್ಮೀರದಲ್ಲಿ ಎಲ್ಲ ವ್ಯವಸ್ಥೆ ಬಂದ್ ಮಾಡಿದ್ದು ಮುಂದೆ ಅದನ್ನು ನೀಡಿದಾಗ ಪರಿಸ್ಥಿತಿಯನ್ನು , ಆರ್ ಬಿ ಐ ಹಣ ದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎಂದರು.
ಸಸಿಕಾ ಸೆಂಥಿಲ್ ಅವರು ತಮ್ಮ ರಾಜೀ ವಾಪಾಸು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ಅವರು ಅವರಿಗೆ ಈಗಿನ ವ್ಯವಸ್ಥೆ ಯಲ್ಲಿ ಕೆಲಸ ಮಾಡಲು ಅಸಾಧ್ಯವಾದರೆ ಅವರಿಗೆ ಐದು ವರ್ಷದ ವರೆಗೆ ರಜೆ ಮಾಡಲು ಅವಕಾಶ ಇರುವುದನ್ನು ಬಳಸಿ ಒಂದೆರಡು ವರ್ಷ ರಜೆ ತೆಗೆದುಕೊಂಡು ಮತ್ತೆ ವಾಪಾಸಾಗಲಿ . ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಗಳ ಜೊತೆಗೆ ಮಾತನಾಡಿದ್ದೇನೆ ಎಂದರು.

ಬೈಟ್ - ಯು ಟಿ ಖಾದರ್, ಮಾಜಿ ಸಚಿವರು

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.