ಮಂಗಳೂರು : ಸಾಮಾನ್ಯವಾಗಿ ಪ್ಲಾಸ್ಟಿಕ್, ಫೈಬರ್, ಚರ್ಮದ ಮೂಲಕ ತಯಾರಾಗುವ ವಸ್ತುಗಳ ಮಾರಾಟ ಮತ್ತು ಖರೀದಿ ಮೇಳಗಳು ಆಗಾಗ ನಡೆಯುತ್ತಿರುತ್ತದೆ. ಆದರೆ, ಮಂಗಳೂರಿನಲ್ಲಿ ಇಂದಿನಿಂದ ಸೆಣಬಿನ ಮೂಲಕ ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದ್ದು, ಜನರ ಗಮನ ಸೆಳೆಯುತ್ತಿದೆ.
ಮಂಗಳೂರಿನ ವುಡ್ಲ್ಯಾಂಡ್ ಹೋಟೆಲಿನಲ್ಲಿ ಇಂದಿನಿಂದ ಜನವರಿ 10ರವರೆಗೆ ಸೆಣಬು ಮೇಳ (ಜ್ಯೂಟ್ ಫೇರ್) ಆಯೋಜಿಸಲಾಗಿದೆ. ಜವಳಿ ಇಲಾಖೆಯ ಅಧೀನದಲ್ಲಿರುವ ಸೆಣಬು ಮಂಡಳಿ ಈ ಮೇಳ ಆಯೋಜಿಸಿದೆ.
ಈ ಮೇಳದಲ್ಲಿ ಹಲವು ಮಳಿಗೆಗಳಿವೆ. ಕೇವಲ ಸೆಣಬಿನಿಂದ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಬ್ಯಾಗ್, ಪರ್ಸ್, ಜೋಕಾಲಿ ಕುರ್ಚಿ, ಡೈನಿಂಗ್ ಟೇಬಲ್ ಟ್ರೇ, ಕೆಂಪುಕೋಟೆ ಕಲಾಕೃತಿ, ಗೊಂಬೆಗಳು, ಮಹಿಳೆಯರು ಮತ್ತು ಮಕ್ಕಳು ಬಳಸುವ ಆಭರಣಗಳು, ಹ್ಯಾಂಡಿಕ್ರಾಫ್ಟ್, ಪಾದರಕ್ಷೆಗಳು ಹೀಗೆ ವಿವಿಧ ಬಗೆಯ ಕಲಾಕೃತಿಗಳು ಗಮನ ಸೆಳೆಯುತ್ತಿವೆ.
ಈ ಮಾರಾಟ ಮತ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು, ಸ್ವಲ್ಪ ದುಬಾರಿಯಾದರೂ ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಇರುವುದರಿಂದ ಪರಿಸರಕ್ಕೆ ಸೆಣಬು ಉತ್ತಮವಾದದು. ಚೀನಾ ತಯಾರಿಸಿದ ವಸ್ತುಗಳ ಬದಲಿಗೆ ಸೆಣಬಿನಿಂದ ತಯಾರಿಸಲಾದ ವಸ್ತುಗಳ ಬಳಕೆ ಉತ್ತಮ ಎಂದಿದ್ದಾರೆ.
ಇದನ್ನೂ ಓದಿ: ಮೃತಪಟ್ಟ ಸಂಗಾತಿಯ ಬಿಡಲೊಪ್ಪದ ನವಿಲು.. ಮನಕಲಕುವಂತಿದೆ ವಿಡಿಯೋ