ETV Bharat / city

ಸುರತ್ಕಲ್ ಭಾಗದಲ್ಲಿ ಜನತಾ ಕರ್ಫ್ಯೂಗೆ ವ್ಯಾಪಕ ಬೆಂಬಲ..

ಬಸ್​​ ನಿಲ್ದಾಣ ಸಂಪೂರ್ಣ ಖಾಲಿಯಾಗಿತ್ತು‌. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

janata-curfew-effect-city-bandh
ಸುರತ್ಕಲ್ ಭಾಗದಲ್ಲಿ ಜನತಾ ಕರ್ಫ್ಯೂಗೆ ವ್ಯಾಪಕ ಬೆಂಬಲ
author img

By

Published : Mar 22, 2020, 5:59 PM IST

ಮಂಗಳೂರು : ಸುರತ್ಕಲ್ ನಗರ ಭಾಗದಲ್ಲಿ ಅಂಗಡಿ-ಮುಂಗಟ್ಟು ಬಾಗಿಲು ಮುಚ್ಚಿವೆ. ಸಾರಿಗೆ ಸಂಚಾರ ಇಲ್ಲದೇ ರಸ್ತೆಗಳ ಬಿಕೋ ಎನ್ನುತ್ತಿವೆ. ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್​​​​ನ ಹಾವಳಿ ತಡೆಗೆ ನಡೆಸಿರುವ ಜನತಾ ಕರ್ಫ್ಯೂಗೆ ಬಸ್, ರಿಕ್ಷಾ ಚಾಲಕರು ಸೇರಿದಂತೆ ಪ್ರತಿಯೊಬ್ಬರೂ ಸಾಥ್ ನೀಡಿದ್ದಾರೆ.

ಜನತಾ ಕರ್ಫ್ಯೂ.. ರಸ್ತೆಗಿಳಿಯದ ಜನ..

ಮೆಡಿಕಲ್ ಶಾಪ್, ಮಿಲ್ಕ್ ಪಾರ್ಲರ್ ಹಾಗೂ ಪ್ರಮುಖ ಕ್ಲಿನಿಕ್ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಿವೆ. ಅಲ್ಲಲ್ಲಿ ವಾಹನ ಸವಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ತೆರಳುತ್ತಿದ್ದ ದೃಶ್ಯ ಕಂಡು ಬಂತು. ಆ್ಯಂಟನಿವೆಸ್ಟ್ ಸ೦ಸ್ಥೆಯ ಸಿಬ್ಬಂದಿ ಮುಖಕ್ಕೆ ಮಾಸ್ಕ್ ಧರಿಸಿ ತಮ್ಮ ಕೆಲಸದಲ್ಲಿ ತಲ್ಲೀನರಾಗಿರೋದು ಕಂಡು ಬಂತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.