ETV Bharat / city

ಅವ್ಯವಹಾರವಾದಲ್ಲಿ ಐವನ್ ಡಿಸೋಜ ಬಯಲಿಗೆಳೆಯುವ ಕೆಲಸ ಮಾಡಲಿ: ಸುಧೀರ್ ಶೆಟ್ಟಿ ಸವಾಲು - ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಹೇಳಿದ್ದು, ಅವ್ಯವಹಾರವನ್ನು ಬಯಲಿಗೆಳೆಯುವ ಕಾರ್ಯವನ್ನೂ ಅವರೆ ಮಾಡಲಿ ಎಂದು ದ.ಕ.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.

ivon-dsouza-have-to-prove-corruption-of-smart-city-project
ಸುಧೀರ್ ಶೆಟ್ಟಿ
author img

By

Published : Oct 10, 2020, 8:24 PM IST

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯ ದರಪಟ್ಟಿಯಲ್ಲಿ‌ ಅವ್ಯವಹಾರವಾದಲ್ಲಿ ಅದನ್ನು ಬಯಲಿಗೆಳೆಯುವ ಕೆಲಸವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರೇ ಮಾಡಿಸಲಿ ಎಂದು ದ.ಕ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು ಸವಾಲೆಸೆದರು.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಿದ್ಧವಾಗಿರುವ ದರಪಟ್ಟಿಗಿಂತ ಮೂರು ಪಟ್ಟು ಹೆಚ್ಚಿನ ದರಪಟ್ಟಿ ಸಿದ್ಧ ಮಾಡಲಾಗಿದೆ. ಇದರಲ್ಲಿ ಸಾಕಷ್ಟು ಅವ್ಯವಹಾರವಾಗಿದೆ ಎಂಬ ಐವನ್ ಡಿಸೋಜ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸ್ಮಾರ್ಟ್ ಸಿಟಿ ಯೋಜನೆ ಆರಂಭವಾಗಿ ಎರಡೂವರೆ ವರ್ಷಗಳು ಕಳೆದಿದೆ. ಇದರಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ‌ ಶೇ.60ರಷ್ಟು ದರಪಟ್ಟಿ ನಿಗದಿಯಾಗಿದೆ. ಇದು ಅವರದೇ ಮಂತ್ರಿಗಳು, ಶಾಸಕರ ಅವಧಿಯಲ್ಲಿ ಆಗಿರುವ ದರಪಟ್ಟಿ. ಎಡಿಬಿ ಪ್ರದೇಶವನ್ನು ಕೂಡಾ ಕಾಂಗ್ರೆಸ್ ಅವಧಿಯಲ್ಲಿಯೇ ಗುರುತಿಸಲಾಗಿದೆ. ಆದ್ದರಿಂದ ಐವನ್ ಡಿಸೋಜ ಅವರು ಕಾಂಗ್ರೆಸ್​ನ ಮಾಜಿ ಶಾಸಕರು, ಮಂತ್ರಿಗಳ ಬಗ್ಗೆ ಅನುಮಾನ ಹೊಂದಿರಬೇಕು ಎಂದು ಸುಧೀರ್ ಶೆಟ್ಟಿಯವರು ಹೇಳಿದರು.

ಸ್ಮಾರ್ಟ್ ಸಿಟಿ ದರಪಟ್ಟಿ ನಿಗದಿ ಮಾಡಲು ಅದರದೇ ಆದ ಬೋರ್ಡ್ ಇದ್ದು, ಐದು ಕೋಟಿ ರೂ.ವರೆಗೆ ಸ್ಮಾರ್ಟ್ ಸಿಟಿ ಎಂಡಿಯವರಿಗೆ ದರಪಟ್ಟಿ ನಿಗದಿ ಮಾಡಲು ಅವಕಾಶವಿದೆ. ಅದಕ್ಕಿಂತ ಹೆಚ್ಚಿನ ಸುಮಾರು 50 ಕೋಟಿ ರೂ.ಗಿಂತವರೆಗಿನ ಕಾಮಗಾರಿಗೆ ಹೈಪವರ್ ಕಮಿಟಿ ದರಪಟ್ಟಿ ನಿಗದಿ ಮಾಡುತ್ತದೆ. ಅಲ್ಲಿಂದ 200 ಕೋಟಿ ರೂ.ವರೆಗಿನ ಕಾಮಗಾರಿ ಕ್ಯಾಬಿನೆಟ್ ಮೂಲಕ ದರಪಟ್ಟಿ ನಿಗದಿ ಮಾಡಲಾಗುತ್ತದೆ. ಇದಕ್ಕೆ ಪಿಡಬ್ಲ್ಯೂಡಿ ಎಸ್ಆರ್ ರೇಟ್ ಇದೆ. ಇದರ ಮೂಲಕವೇ ದರಪಟ್ಟಿ ನಿಗದಿಯಾಗುತ್ತದೆ. ಕಾಂಗ್ರೆಸ್ ಅವಧಿಯಲ್ಲಿ ಶೇ.60ಕ್ಕಿಂತಲೂ ಹೆಚ್ಚಿನ ಕಾಮಗಾರಿಗೆ ದರಪಟ್ಟಿ ನಿಗದಿಯಾಗಿದೆ. ತಕ್ಷಣ ಎಸಿಬಿ ಅಥವಾ ಲೋಕಾಯುಕ್ತ ತನಿಖೆಯಾಗಲಿ ಎಂದರು.

ನಿವೇಶನ ಪ್ರಮಾಣಪತ್ರ ಹಂಚಿಕೆ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ನಡೆಸಿದ ತಂತ್ರ

ನಗರದ ಹೊರವಲಯದಲ್ಲಿರುವ ಶಕ್ತಿನಗರದಲ್ಲಿ ಬಡಜನರಿಗೆ ನಡೆಯುತ್ತಿರುವ ವಸತಿ ಕಾಮಗಾರಿಯಲ್ಲಿ ಬಿಜೆಪಿ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಅರಣ್ಯ ಇಲಾಖೆಯ ತೊಡಕನ್ನು ತೋರಿಸಿ, ಕಾಮಗಾರಿಗೆ ವೇಗ ಕೊಡಲಾಗುತ್ತಿಲ್ಲ.‌ ಬಡಜನರಿಗೆ ನಿವೇಶನ ಕೊಡುವ ವಿಚಾರದಲ್ಲಿ ಬಿಜೆಪಿ ಹಿಂದೇಟು ಹಾಕುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದರು.

ಆದರೆ ಶಕ್ತಿನಗರದಲ್ಲಿ ಬಡವರಿಗೆ ನಿರ್ಮಾಣವಾಗುತ್ತಿರುವ 930 ನಿವೇಶನ ಕಾಮಗಾರಿಯನ್ನು ಚುನಾವಣೆ ಸಂದರ್ಭ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ನಡೆಸಿದ ತಂತ್ರವಾಗಿದೆ. ಇದು ಕಾಂಗ್ರೆಸ್ ಜನರಿಗೆ ನೀಡಿರುವ ಸುಳ್ಳು ಭರವಸೆಯಾಗಿದ್ದು, ಅಲ್ಲದೆ ಒಟ್ಟು ಯೋಜನೆಯನ್ನು ಕ್ಲಿಷ್ಟಕರವಾಗಿಸಿದೆ ಎಂದು ಪ್ರೇಮಾನಂದ ಶೆಟ್ಟಿ ಹೇಳಿದರು.

ಕಾಂಗ್ರೆಸ್ ಚುನಾವಣೆ ಸಂದರ್ಭ 930 ಮನೆಗಳಿಗೂ ಹಂಚಿಕೆ ಪ್ರಮಾಣಪತ್ರ ನೀಡಿದೆ. ಅಂದು ಮನೆಯನ್ನೇ ಹಂಚಿಕೆ ಮಾಡಲಾಗಿದೆ ಎಂದು ಹೇಳುವ ರೀತಿಯಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ಈಗ ಅದೇ ಕಾಂಗ್ರೆಸಿಗರು, ಬಿಜೆಪಿಗರು ಮನೆ ನಿರ್ಮಾಣ ಮಾಡುವಲ್ಲಿ ಯಾವುದೇ ಪ್ರಯತ್ನ ನಡೆಸುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.

ಆದರೆ ಶಾಸಕ ವೇದವ್ಯಾಸ ಕಾಮತ್ ಅವರು, ಈ ಬಗ್ಗೆ ಸಾಕಷ್ಟು ಸಭೆಗಳನ್ನು ಕರೆದಿದ್ದಾರೆ. ನಿವೇಶನಕ್ಕೆ ಆಯ್ಕೆ ಮಾಡಿರುವ ಸ್ಥಳ ಡೀಮ್ಡ್ ಫಾರೆಸ್ಟ್ ಆಗಿರುವ ಕಾರಣ ದೊಡ್ಡ ತೊಡಕು ಉಂಟಾಗಿದೆ. ಆದ್ದರಿಂದ ಮರಗಳನ್ನು ತೆರವು ಮಾಡಲು ಶಾಸಕರು ಸಾಕಷ್ಟು ಸಭೆಗಳನ್ನು ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಅರಣ್ಯ ಇಲಾಖೆಗಳಿಗೂ ಪತ್ರ ವ್ಯವಹಾರ ನಡೆಸುತ್ತಿದ್ದಾರೆ. ‌ಇದಕ್ಕೆ ಬೇಕಾದ ಕಾರ್ಯಸೂಚಿಯೂ ಮಂಡನೆಯಾಗಿದೆ ಎಂದು ಹೇಳಿದರು.

ಮರಗಳನ್ನು ತೆರವು ಮಾಡಲು ಅರಣ್ಯ ಇಲಾಖೆಗೆ ಸುಮಾರು 60 ಲಕ್ಷ ರೂ. ಡೆಪಾಸಿಟ್ ಕೂಡಾ ಇಡಲು ಮಂಜೂರಾತಿ ನೀಡಿದ್ದೇವೆ. ಜೊತೆಗೆ ಡೀಮ್ಡ್ ಫಾರೆಸ್ಟ್ ನ್ನು ಇತರೆ ಯಾವುದೇ ಕಾರ್ಯಕ್ಕೆ ಬಳಕೆ ಮಾಡಿದರೆ, ಅದಕ್ಕಿಂತ ಎರಡುಪಟ್ಟು ಜಾಗವನ್ನು ಅರಣ್ಯಕ್ಕೆ ಮೀಸಲಿಡಬೇಕು. ಅದನ್ನು ಕೂಡಾ ತೆಂಕ ಎಡಪದವಿನಲ್ಲಿ 20 ಎಕರೆ ಜಾಗವನ್ನು ಮೀಸಲಿಟ್ಟಿದೆ ಎಂದು ಹೇಳಿದರು. ಅರಣ್ಯ ಇಲಾಖೆಯ ಒಪ್ಪಿಗೆ ದೊರೆತ ತಕ್ಷಣ ಮೊದಲ ಹಂತದ ಮನೆ ನಿರ್ಮಾಣ ಕಾರ್ಯವನ್ನು ಮಾಡಲಾಗುತ್ತದೆ ಎಂದು ಪ್ರೇಮಾನಂದ ಶೆಟ್ಟಿ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.