ETV Bharat / city

ಮಂಗಳೂರಿನಲ್ಲಿ ಬಿಜೆಪಿಯಿಂದ 'ಹಮ್ ಬೀ ಚೌಕಿದಾರ್' ಅಭಿಯಾನ - ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್​

ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಚೌಕೀದಾರ್ ಪೇಟಾ ಧರಿಸಿ ವಿಶೇಷ ಪ್ರಚಾರ ಅಭಿಯಾನ ನಡೆಸಿದರು.

'ಹಮ್ ಬೀ ಚೌಕಿದಾರ್' ಅಭಿಯಾನ
author img

By

Published : Mar 24, 2019, 3:52 PM IST

ಮಂಗಳೂರು: ನಗರದ ಹೊರವಲಯದ ಅಡು ಮರೋಳಿಯ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಚೌಕೀದಾರ್ ಪೇಟಾ ಧರಿಸಿ 'ಹಮ್ ಬೀ ಚೌಕಿದಾರ್' ಎಂಬ ಘೋಷವಾಕ್ಯದೊಂದಿಗೆ ವಿಶೇಷ ಪ್ರಚಾರವನ್ನು ಕೈಗೊಂಡರು.

ಈ ಸಂದರ್ಭ ದ.ಕ. ಜಿಲ್ಲಾ ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್​ ಹಾಗೂ ಮಂಗಳೂರು ಉತ್ತರ ಶಾಸಕ ವೇದವ್ಯಾಸ ಕಾಮತ್ ಅವರೂ ಚೌಕೀದಾರ್ ಪೇಟ ಧರಿಸಿ ಮನೆಮನೆಗೆ ತೆರಳಿ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡರು.

ಮಂಗಳೂರಿನಲ್ಲಿ ಬಿಜೆಪಿಯಿಂದ ನಡೆದ 'ಹಮ್ ಬೀ ಚೌಕಿದಾರ್' ಅಭಿಯಾನದ ದೃಶ್ಯ

ಅಡು ಮರೋಳಿಯ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಈ ಪ್ರಚಾರ ಆರಂಭವಾಗಿ ಬಳಿಕ ಮರೋಳಿ ಶ್ರೀ ಸೂರ್ಯನಾರಾಯಣ ದೇವಳದಲ್ಲಿ‌ ಕೊನೆಗೊಂಡಿತು. ಈ ವೇಳೆ ಪುರುಷ ಕಾರ್ಯಕರ್ತರು ಬಿಳಿ ಅಂಗಿ ಹಾಗೂ ಮಹಿಳಾ ಕಾರ್ಯಕರ್ತರು ಬಿಳಿ ಕುರ್ತಾ ಧರಿಸಿ, ಕೇಸರಿ ಪೇಟಾ ಹಾಗೂ ಕೇಸರಿ ತಿಲಕ ಇಟ್ಟುಕೊಂಡು ವಿಶೇಷ ಪೋಷಾಕಿನಲ್ಲಿ‌ ಕಾಣಿಸಿಕೊಂಡರು. ಈ ಪ್ರಚಾರ ಅಭಿಯಾನದಲ್ಲಿ ಪಕ್ಷದ ಪರ, ಅಭ್ಯರ್ಥಿಯ, ದೇಶದ ಅಥವಾ ಪ್ರಧಾನಿಯ ಪರ ಯಾವುದೇ ಘೋಷಣೆಗಳನ್ನು ಕೂಗದೆ ಕೇವಲ ಮನೆಮನೆಗೆ ತೆರಳಿ ದ.ಕ. ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಪರ ಮತ ಯಾಚಿಸಲಾಯಿತು.

ಈ ವೇಳೆ ಮಾತನಾಡಿದ ದ.ಕ.ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್​, ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ನಾನು ಈ ದೇಶದ ಪ್ರಧಾನ ಸೇವಕ ಎಂದು ಹೇಳಿದ್ದರು. ಅಲ್ಲದೆ ಈ ದೇಶದ ರಕ್ಷಣೆಗಾರ, ಕಾವಲುಗಾರ 'ಮೈ ಭಿ ಚೌಕೀದಾರ್' ಎಂದು ಘೋಷಿಸಿದ್ದರು. ಅದಕ್ಕೆ ಬೆಂಬಲವಾಗಿ ದೇಶದ ಮೂಲೆಮೂಲೆಗಳಲ್ಲಿ 'ಮೈ ಭಿ ಚೌಕೀದಾರ್ ಹೂಂ' ಅಭಿಯಾನ ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಅಡು ಮರೋಳಿಯ ಬಿಜೆಪಿ ಕಾರ್ಯಕರ್ತರು ಈ ರೀತಿಯ ವಿಶೇಷ ಪ್ರಚಾರ ಹಾಗೂ ಮತಯಾಚನ ಅಭಿಯಾನವನ್ನು ಕೈಗೊಂಡಿದ್ದಾರೆ. ನೂರಾರು ಕಾರ್ಯಕರ್ತರು ಈ ಆಂದೋಲನದಲ್ಲಿ ಭಾಗವಹಿಸಿದ್ದು, ಅದಕ್ಕೆ ಬೆಂಲವಾಗಿ ನಾವು ಇಲ್ಲಿಗೆ ಆಗಮಿಸಿದ್ದೇವೆ ಎಂದರು.

ಈ ಹಮ್ ಬಿ ಚೌಕೀದಾರ್ ಪ್ರಚಾರ ಅಭಿಯಾನದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Intro:ಮಂಗಳೂರು: ನಗರದ ಹೊರವಲಯದ ಅಡು ಮರೋಳಿಯ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಚೌಕೀದಾರ್ ಪೇಟಾ ಧರಿಸಿ 'ಹಮ್ ಬೀ ಚೌಕಿದಾರ್' ಎಂಬ ಘೋಷವಾಕ್ಯದೊಂದಿಗೆ ವಿಶೇಷ ಪ್ರಚಾರವನ್ನು ಕೈಗೊಂಡರು.

ಈ ಸಂದರ್ಭ ದ.ಕ.ಜಿಲ್ಲಾ ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಹಾಗೂ ಮಂಗಳೂರು ಉತ್ತರ ಶಾಸಕ ವೇದವ್ಯಾಸ ಕಾಮತ್ ಅವರೂ ಚೌಕೀದಾರ್ ಪೇಟ ಧರಿಸಿ ಮನೆಮನೆಗೆ ತೆರಳಿ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡರು.

Body:ಅಡು ಮರೋಳಿಯ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಈ ಪ್ರಚಾರ ಆರಂಭವಾಗಿ ಬಳಿಕ ಮರೋಳಿ ಶ್ರೀ ಸೂರ್ಯನಾರಾಯಣ ದೇವಳದಲ್ಲಿ‌ ಕೊನೆಗೊಂಡಿತು.

ಈ ಸಂದರ್ಭ ಪುರುಷ ಕಾರ್ಯಕರ್ತರು ಬಿಳಿ ಅಂಗಿ ಹಾಗೂ ಮಹಿಳಾ ಕಾರ್ಯಕರ್ತರು ಬಿಳಿ ಕುರ್ತಾ ಧರಿಸಿ ಕೇಸರಿ ಪೇಟಾ ಹಾಗೂ ಕೇಸರಿ ತಿಲಕ ಇಟ್ಟುಕೊಂಡು ವಿಶೇಷ ಪೋಷಾಕಿನಲ್ಲಿ‌ ಕಾಣಿಸಿಕೊಂಡರು. ಈ ಪ್ರಚಾರ ಅಭಿಯಾನದಲ್ಲಿ ಪಕ್ಷದ, ಅಭ್ಯರ್ಥಿಯ, ದೇಶದ, ಪ್ರಧಾನಿಯ ಪರ ಯಾವುದೇ ಘೋಷಣೆಗಳನ್ನು ಕೂಗದೆ ಕೇವಲ ಮನೆಮನೆಗೆ ತೆರಳಿ ದ.ಕ. ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಪರ ಮತ ಯಾಚಿಸಲಾಯಿತು.

ಈ ಹಮ್ ಬಿ ಚೌಕೀದಾರ್ ಪ್ರಚಾರ ಅಭಿಯಾನದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Conclusion:ಈ ಸಂದರ್ಭ ಮಾತನಾಡಿದ ದ.ಕ.ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ನಾನು ಈ ದೇಶದ ಪ್ರಧಾನ ಸೇವಕ ಎಂದು ಹೇಳಿದ್ದರು. ಅಲ್ಲದೆ ಈ ದೇಶದ ರಕ್ಷಣೆಗಾರ, ಕಾವಲುಗಾರ 'ಮೈ ಭಿ ಚೌಕೀದಾರ್' ಎಂದು ಘೋಷಿಸಿದ್ದರು. ಅದಕ್ಕೆ ಬೆಂಬಲವಾಗಿ ದೇಶದ ಮೂಲೆಮೂಲೆಗಳಲ್ಲಿ 'ಮೈ ಭಿ ಚೌಕೀದಾರ್ ಹೂಂ' ಅಭಿಯಾನ ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಅಡು ಮರೋಳಿಯ ಬಿಜೆಪಿ ಕಾರ್ಯಕರ್ತರು ಈ ರೀತಿಯ ವಿಶೇಷ ಪ್ರಚಾರ ಹಾಗೂ ಮತಯಾಚನ ಅಭಿಯಾನವನ್ನು ಕೈಗೊಂಡಿದ್ದಾರೆ. ನೂರಾರು ಕಾರ್ಯಕರ್ತರು ಈ ಆಂದೋಲನದಲ್ಲಿ ಭಾಗವಹಿಸಿದ್ದು, ಅದಕ್ಕೆ ಬೆಂಲವಾಗಿ ನಾವು ಇಲ್ಲಿಗೆ ಆಗಮಿಸಿದ್ದೇವೆ ಎಂದು ಹೇಳಿದರು.

Reporter_Vishwanath Panjmogaru
ETV Bharat Logo

Copyright © 2025 Ushodaya Enterprises Pvt. Ltd., All Rights Reserved.