ETV Bharat / city

ಉಳ್ಳಾಲ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ..ಸ್ಥಳೀಯರಲ್ಲಿ ಆತಂಕ - dakshinakannada news

ದಕ್ಷಿಣಕನ್ನಡ ಜಿಲ್ಲೆಯ ಕೈಕೋ, ಕಿಲಿರಿಯಾನಗರ, ಮೊಗವೀರಪಟ್ನ, ಕೋಡಿ, ಕೋಟೆಪುರ, ಉಚ್ಚಿಲ, ಸೋಮೇಶ್ವರ ಸಮುದ್ರ ದಂಡೆಗೆ ಬೃಹತ್​ ಅಲೆಗಳು ಅಪ್ಪಳಿಸುತ್ತಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

Huge waves crashing into the ullal sea
ಉಳ್ಳಾಲ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ..ಸ್ಥಳೀಯರಲ್ಲಿ ಆತಂಕ
author img

By

Published : Jun 14, 2020, 11:20 PM IST

ಉಳ್ಳಾಲ(ದಕ್ಷಿಣಕನ್ನಡ): ಉಳ್ಳಾಲ ಸಮುದ್ರ ತೀರಕ್ಕೆ ಬೃಹತ್ ಅಲೆಗಳು ಅಪ್ಪಳಿಸುತ್ತಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಉಳ್ಳಾಲ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ..ಸ್ಥಳೀಯರಲ್ಲಿ ಆತಂಕ

ಕೈಕೋ, ಕಿಲಿರಿಯಾನಗರ, ಮೊಗವೀರಪಟ್ನ, ಕೋಡಿ, ಕೋಟೆಪುರ, ಉಚ್ಚಿಲ, ಸೋಮೇಶ್ವರ ಸಮುದ್ರ ದಂಡೆಗೆ ಬೃಹತ್​ ಅಲೆಗಳು ಅಪ್ಪಳಿಸುತ್ತಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಉಳ್ಳಾಲ ಭಾಗದಲ್ಲಿ ಬ್ರಮ್ಸ್ ಹಾಗೂ ತಾತ್ಕಾಲಿಕ ಕಲ್ಲುಗಳನ್ನ ಹಾಕಿರುವುದರಿಂದ ಪ್ರತಿವರ್ಷ ಹಾನಿಗೊಳಗಾಗುತ್ತಿರುವ ಮನೆಗಳು ಈ ಬಾರಿ ಸುರಕ್ಷಿತವಾಗಿವೆ. ಸೋಮೇಶ್ವರ ಮತ್ತು ಉಚ್ಚಿಲ ತೀರದಲ್ಲಿ ಹಲವು ಮನೆಗಳು ಅಪಾಯದಂಚಿಗೆ ತಲುಪಿದ್ದು, ತಾತ್ಕಾಲಿಕವಾಗಿ ಕಲ್ಲುಗಳನ್ನು ಹಾಕುವಂತೆ ಸ್ಥಳೀಯರ ಉತ್ತಾಯಿಸಿದ್ದಾರೆ. ಇನ್ನು, ನಾಡದೋಣಿ ಮೀನುಗಾರರು ಮೀನುಗಾರಿಕೆಗೆ ತೆರಳದೆ ದೋಣಿಗಳನ್ನು ಮೇಲಕ್ಕೆತ್ತಿ ನಿಲ್ಲಿಸಿದ್ದಾರೆ.

ಇನ್ನು, ಇಂದು ಸುರಿದ ಭಾರೀ ಮಳೆಗೆ ಮಂಗಳೂರಿನ ತೊಕ್ಕೊಟ್ಟು ಜಂಕ್ಷನ್ ಸಂಪೂರ್ಣ ಜಲಾವೃತಗೊಂಡು, ವಾಹನ ಸವಾರರು ಪರದಾಡಿದರು. ತೊಕ್ಕೊಟ್ಟು ಜಂಕ್ಷನ್‍ನ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯಲ್ಲಿ ಮೊಣಕಾಲುದ್ದ ನೀರು ಜಮಾವಣೆಗೊಂಡು ರಸ್ತೆಯಲ್ಲಿ ಸಣ್ಣ ವಾಹನಗಳು ಚಲಿಸಲು ಅಡಚಣೆಯುಂಟಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.