ಮಂಗಳೂರು: ಹುಬ್ಬಳ್ಳಿ-ಮಂಗಳೂರು ನಡುವೆ ಇಂಡಿಗೋ ವಿಮಾನ ಸಂಸ್ಥೆಯು ವಿಮಾನಸೇವೆಯನ್ನು ಭಾನುವಾರದಿಂದ ಆರಂಭಿಸಿದೆ. ಚೊಚ್ಚಲ ವಿಮಾನಯಾನದಲ್ಲಿ 46 ಪ್ರಯಾಣಿಕರು ಮಂಗಳೂರಿಗೆ ಆಗಮಿಸಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸಂಜೆ 5.15ಕ್ಕೆ ಟೇಕಾಫ್ ಆದ ಇಂಡಿಗೋ ವಿಮಾನ ಸಂಜೆ 6.15ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿದೆ. ಅದೇ ರೀತಿ ಮಂಗಳೂರಿನಿಂದ ಸಂಜೆ 6.35ಕ್ಕೆ ಟೇಕಾಫ್ ಆದ ವಿಮಾನ ರಾತ್ರಿ 7.40ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ವಾರದಲ್ಲಿ 4 ದಿನಗಳು (ಭಾನುವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರ) ಸೇವೆ ಪ್ರಯಾಣಿಕರಿಗೆ ಸಿಗಲಿದೆ.
ಇಂಡಿಗೋ ವಿಮಾನವು ಹುಬ್ಬಳ್ಳಿಯ ಪ್ರಯಾಣಿಕರಿಗೆ ಪ್ರತ್ಯೇಕವಾಗಿ ಚೆಕ್ ಇನ್ ಕೌಂಟರ್ ಮೀಸಲಿರಿಸಿತು. ಇದಕ್ಕೂ ಮುನ್ನ, ಏರ್‌ಲೈನ್ ಸಿಬ್ಬಂದಿ ಸಾಂಪ್ರದಾಯಿಕವಾಗಿ ದೀಪ ಬೆಳಗಿಸಿ, ಕೇಕ್ ಕತ್ತರಿಸಿ ಪ್ರಯಾಣಿಕರೊಂದಿಗೆ ಸಂಭ್ರಮಿಸಿದರು. ವಿಮಾನದಲ್ಲಿ ಆಗಮಿಸಿರುವ ಪ್ರಯಾಣಿಕರು ಕೇಕ್ ಸವಿದು ಖುಷಿಪಟ್ಟರು.
ಇದನ್ನೂ ಓದಿ: ಹಿಂದೂಗಳ ಜ್ಯುವೆಲರ್ಸ್ನಲ್ಲಿ ಚಿನ್ನಾಭರಣ ಖರೀದಿಸುವಂತೆ ಮಹಿಳೆಯರಿಗೆ ಮುತಾಲಿಕ್ ಕರೆ