ETV Bharat / city

ಕೆಳಗೆ ಬಿದ್ದರೂ ಛಲಬಿಡದ ಕಂಬಳ ಓಟಗಾರ.. ಗುರಿಮುಟ್ಟಿದ ಕೋಣಗಳು - ವಿಡಿಯೋ ವೈರಲ್​ - hokkadigoli veer vikrama jodukare kambala

ವೀರ ವಿಕ್ರಮ ಜೋಡುಕರೆ ಕಂಬಳ ಕರೆಯಲ್ಲಿ ಕೋಣಗಳನ್ನು ಓಡಿಸುವ ಸಂದರ್ಭ ಓಟಗಾರ ಆಯತಪ್ಪಿ ಕೆಳಗೆ ಬೀಳುತ್ತಾನೆ. ಆದ್ರೆ ಛಲ ಬಿಡದ ಓಟಗಾರ ಕೆಳಗೆ ಬಿದ್ದಿದ್ದರೂ ಹಿಡಿದ ಹಗ್ಗ ಬಿಟ್ಟಿರಲಿಲ್ಲ. ಇತ್ತ ಕೋಣಗಳು ಸಹ ಹಿಂದೇಟು ಹಾಕದೆ ಗುರಿ ತಲುಪಿದವು. ಸುಮಾರು 20 ಮೀಟರ್ ನಷ್ಟು ದೂರ ಕವುಚಿ ಬಿದ್ದರೂ ಹಗ್ಗ ಹಿಡಿದು ಗುರಿ ಮುಟ್ಟಿದ ಓಟಗಾರ ಆಕಾಶ್ ತಮ್ಮ ಸಾಹಸದಿಂದ ಕಂಬಳಪ್ರಿಯರ ಮನ ಗೆದ್ದಿದ್ದಾರೆ.

hokkadigoli-veera-vikrama-jodukere-kambala-video
ಜೋಡುಕರೆ ಕಂಬಳ
author img

By

Published : Dec 6, 2021, 5:51 PM IST

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಕಂಬಳ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿಯಲ್ಲಿ ನಡೆದ ವೀರ ವಿಕ್ರಮ ಜೋಡುಕರೆ ಕಂಬಳ ರೋಮಾಂಚನಕಾರಿ ಘಟನೆಗೆ ಸಾಕ್ಷಿಯಾಯಿತು.

ವೀರ-ವಿಕ್ರಮ ಜೋಡುಕರೆ ಕಂಬಳ ವಿಡಿಯೋ ವೈರಲ್

ಹೌದು.. ಕಂಬಳ ಕರೆ (ಓಟದ ಜಾಗ)ಯಲ್ಲಿ ಕೋಣಗಳನ್ನು ಓಡಿಸುವ ಸಂದರ್ಭ ಓಟಗಾರ ಆಯತಪ್ಪಿ ಕೆಳಗೆ ಬೀಳುತ್ತಾರೆ. ಆದ್ರೆ ಛಲ ಬಿಡದ ಅವರು ಕೆಳಗೆ ಬಿದ್ದಿದ್ದರೂ ಸಹ ಹಿಡಿದ ಹಗ್ಗ ಬಿಟ್ಟಿರಲಿಲ್ಲ. ಇತ್ತ ಕೋಣಗಳು ಸಹ ಹಿಂದೇಟು ಹಾಕದೆ ಮುನ್ನುಗ್ಗಿದವು. ಸುಮಾರು 20 ಮೀಟರ್ ನಷ್ಟು ದೂರ ಕವುಚಿ ಬಿದ್ದರೂ ಹಗ್ಗ ಹಿಡಿದು ಗುರಿ ಮುಟ್ಟಿದ ಓಟಗಾರ ಆಕಾಶ್ ತಮ್ಮ ಸಾಹಸದಿಂದ ಕಂಬಳಪ್ರಿಯರ ಮನ ಗೆದ್ದರು. ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳದಲ್ಲಿ ನಡೆದ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.

ಹಗ್ಗದ ಕಿರಿಯ ವಿಭಾಗದಲ್ಲಿ, ಪ್ರಿ ಕ್ವಾರ್ಟರ್ ಫೈನಲ್ ಸಂದರ್ಭದಲ್ಲಿ ಬಿಳಿಯೂರು, ಪೆರ್ನೆ ವಿಷ್ಣುಮೂರ್ತಿ ದೇವತಾ ಗಣಪ ಭಂಡಾರಿ ಅವರ ಕೋಣಗಳನ್ನು ಉಡುಪಿ ಹಿರೇಬೆಟ್ಟು ಆಕಾಶ್ ಭಂಡಾರಿ ಅವರು ಓಡಿಸುತ್ತಿದ್ದರು. ಕರೆಯನ್ನು ಮುಕ್ಕಾಲು ಭಾಗ ಕ್ರಮಿಸುವಾಗ ಬಿದ್ದರು. ಆದರೆ ಹಗ್ಗವನ್ನು ಬಿಡದೇ ಕೋಣಗಳು ಎಳೆದೊಯ್ಯುತ್ತಿದ್ದರೂ ಛಲದಿಂದ ಗುರಿ ಮುಟ್ಟಿದರು. ಸುಮಾರು 20 ಮೀ.ನಷ್ಟು ದೂರ ಕವುಚಿ ಬಿದ್ದರೂ ಹಗ್ಗ ಹಿಡಿದು ಗುರಿ ಮುಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.