ETV Bharat / city

ಹಿಜಾಬ್ ವಿವಾದದ ಹಿಂದೆ ಹಿಡನ್ ಅಜೆಂಡಾ ಅಡಗಿದೆ: ಸಚಿವ ಸುನೀಲ್ ಕುಮಾರ್ - ಹಿಜಾಬ್ ವಿವಾದದ ಬಗ್ಗೆ ಸಚಿವ ಸುನೀಲ್ ಕುಮಾರ್

ಶಾಲೆಗೆ ಶುಲ್ಕ ಕಟ್ಟಲು ದುಡ್ಡಿಲ್ಲದ ಸಮುದಾಯದವರಿಗೆ ಕೋರ್ಟ್​ಗೆ ಹೋಗಲು ಎಲ್ಲಿಂದ ದುಡ್ಡು ಬರುತ್ತದೆ. ಇದಕ್ಕೆ 50 ರಿಂದ 60 ಸಾವಿರ ಮಂದಿ ಟ್ವೀಟ್ ಮಾಡುತ್ತಾರೆಂದರೆ ಇದರ ಹಿಂದೆ ಯಾರಿದ್ದಾರೆಂಬುದು ಸ್ಪಷ್ಟವಾಗಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.

ಸಚಿವ ಸುನೀಲ್ ಕುಮಾರ್
ಸಚಿವ ಸುನೀಲ್ ಕುಮಾರ್
author img

By

Published : Feb 6, 2022, 5:56 AM IST

ಮಂಗಳೂರು: ಹಿಜಾಬ್ ವಿವಾದದ ಹಿಂದೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡಬೇಕೆಂಬ ಟೂಲ್ ಕಿಟ್​​ನ ಸಂಚು ಇದೆ‌. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಫ್ತಿ ಮಹಮ್ಮದ್ ಟ್ವೀಟ್ ಮಾಡುತ್ತಾರೆಂದರೆ ಈ ವಿವಾದದ ಹಿಂದೆ ಹಿಡನ್ ಅಜೆಂಡಾ ಅಡಗಿದೆ ಎಂದು ಇಂಧನ‌ ಹಾಗೂ ಜನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಸಂಶಯ ವ್ಯಕ್ತಪಡಿಸಿದರು.

ನಗರದ ಪ್ರೆಸ್ ಕ್ಲಬ್​ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಶಾಲೆಗೆ ಶುಲ್ಕ ಕಟ್ಟಲು ದುಡ್ಡಿಲ್ಲದ ಸಮುದಾಯದವರಿಗೆ ಕೋರ್ಟ್​ಗೆ ಹೋಗಲು ಎಲ್ಲಿಂದ ದುಡ್ಡು ಬರುತ್ತದೆ. ಇದಕ್ಕೆ 50 ರಿಂದ 60 ಸಾವಿರ ಮಂದಿ ಟ್ವೀಟ್ ಮಾಡುತ್ತಾರೆಂದರೆ ಇದರ ಹಿಂದೆ ಯಾರಿದ್ದಾರೆಂಬುದು ಸ್ಪಷ್ಟವಾಗಿದೆ ಎಂದರು.

ದ.ಕ.ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕಡತ ವಿಲೇವಾರಿಯಾಗದೆ ಅಧಿಕಾರಿಗಳ ಟೇಬಲ್​​ನಲ್ಲಿಯೇ ಬಾಕಿ ಉಳಿದಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಫೆ.19 ರಿಂದ 28 ರವರೆಗೆ ಕಡತ ವಿಲೇವಾರಿ ಆಗದೆ ಅಭಿಯಾನವನ್ನು ನಡೆಸಲಾಗುತ್ತದೆ. ಈ ಅಭಿಯಾನ ಗ್ರಾಪಂನಿಂದ ಹಿಡಿದು ಜಿಲ್ಲಾಮಟ್ಟದ ಕಚೇರಿವರೆಗೆ ನಡೆಯಲಿದೆ. ಆದ್ದರಿಂದ ಮುಂದೆ ಕಡತ ವಿಲೇಯಾಗದೆ ಯಾವ ಅಧಿಕಾರಿಯೂ ತನ್ನಲ್ಲಿ ಕಡತ ಇರಿಸಿಕೊಳ್ಳದಂತೆ ಕ್ರಮ ವಹಿಸಲಾಗುತ್ತದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ಮರಳು ಅಕ್ರಮ ಸಾಗಾಟ, ದುಪ್ಪಟ್ಟು ಬೆಲೆಗೆ ಮಾರಾಟ, ಇಲಾಖೆಗಳ ನಡುವೆ ಸಮನ್ವಯದ ಕೊರತೆ ಸಂಬಂಧ ಉತ್ತರಿಸಿ ನನಗೆ ಸ್ವಲ್ಪ ಸಮಯ ಕೊಡಿ ಎಲ್ಲವನ್ನೂ ಸರಿಪಡಿಸುತ್ತೇನೆ. ದ.ಕ.ಜಿಲ್ಲೆಯಲ್ಲಿ ಮರಳು ಪೂರೈಕೆ ಸಂಬಂಧಿಸಿದಂತೆ ಸಮಸ್ಯೆಯಿದ್ದು, ಇದಕ್ಕೆ ಗ್ರೀನ್ ಬೆಲ್ಟ್, ನ್ಯಾಯಾಲಯದ ಸಮಸ್ಯೆ ಇದೆ. ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

ತುಳು ಭಾಷೆಯನ್ನು ಅಧಿಕೃತ ರಾಜ್ಯ ಭಾಷೆಯನ್ನಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಸಿದ್ಧತೆ ಮಾಡಲಾಗಿದೆ. ಈ ಬಗ್ಗೆ ಪ್ರಸ್ತಾವನೆ ಕಾನೂನು ಇಲಾಖೆಯಲ್ಲಿದ್ದು, ಸಿಎಂ ಹಾಗೂ ಕಾನೂನು ಸಚಿವರೊಂದಿಗೆ ಮಾತನಾಡಿ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

(ಇದನ್ನೂ ಓದಿ:ಸಮವಸ್ತ್ರ ವಿಚಾರದಲ್ಲಿ ಶಾಲಾ-ಕಾಲೇಜುಗಳ ಸಮಿತಿಯ ನಿರ್ಣಯವೇ ಅಂತಿಮ : ಆರಗ ಜ್ಞಾನೇಂದ್ರ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.