ಬಂಟ್ವಾಳ(ದಕ್ಷಿಣ ಕನ್ನಡ): ಚಾಕೊಲೇಟ್ ತಯಾರಿಸಲು ಉಪಯೋಗಿಸುವ ಕೊಕ್ಕೊದಿಂದ ಹೋಳಿಗೆ ತಯಾರಿಸಿ ತಮ್ಮ ಮೊದಲ ಪ್ರಯೋಗದಲ್ಲೇ ಬಂಟ್ವಾಳ ತಾಲೂಕಿನ ವೆಂಕಟರಮಣ ಪುಣಚ ಮತ್ತು ಪುತ್ತೂರಿನ ಶ್ರೀಕೃಷ್ಣ ಶಾಸ್ತ್ರಿ ಯಶಸ್ವಿಯಾಗಿದ್ದಾರೆ.
ನುರಿತ ಪಾಕಶಾಸ್ತ್ರಜ್ಞರಾದ ವೆಂಕಟರಮಣ ಪುಣಚ ಮತ್ತು ಪುತ್ತೂರಿನ ಶ್ರೀಕೃಷ್ಣ ಶಾಸ್ತ್ರಿ ಅವರು ಕಳೆದ ವಾರ ಹೊಸ ಪ್ರಯೋಗವನ್ನು ಕೈಗೊಂಡು ಕೊಕ್ಕೊ ಬೀಜದಲ್ಲಿ ಹೋಳಿಗೆ ತಯಾರಿಸಿದ್ದಾರೆ. ಇದೀಗ ಕೊಕ್ಕೊ ಹೋಳಿಗೆ ಕರಾವಳಿ ಜನರಿಗೆ ಹೆಚ್ಚು ಇಷ್ಟವಾಗಿದ್ದು, ಬೇಡಿಕೆ ಸಹ ಜಾಸ್ತಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ವೆಂಕಟರಮಣ ಅವರು, ಹೋಳಿಗೆಯ ಮೇಕಿಂಗ್ ಚಾರ್ಜ್ ಜಾಸ್ತಿಯಾಗುತ್ತದೆ. ಹಾಗಾಗಿ ನಾವು ಕೊಕ್ಕೊ ಬೀಜವನ್ನು ಹುಡಿ ಮಾಡಿ ಹೋಳಿಗೆ ತಯಾರಿಸಿದೆವು. ಈ ಹೋಳಿಗೆಗಳು ಚಾಕೊಲೇಟ್ ಸ್ವಾದ ನೀಡುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಹರಿಬಿಟ್ಟ ನಂತರ ಬೇಡಿಕೆ ಹೆಚ್ಚಾಗಿದೆ. ಇದನ್ನು ವ್ಯವಸ್ಥಿತವಾಗಿ ಮಾರ್ಕೆಟ್ ಮಾಡಲು ಯೋಚಿಸಿದ್ದೇವೆ ಎಂದರು.