ಮಂಗಳೂರು: ಹೊಸ ಕೂಲಿ ದರ ಪರಿಷ್ಕರಣೆ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು, ಗುರುವಾರ ಶ್ರಮಿಕರ ಸಂಘದ ನೇತೃತ್ವದಲ್ಲಿ ಹಕ್ಕೊತ್ತಾಯ ಮೆರವಣಿಗೆ ಮಾಡಿ ಪ್ರತಿಭಟಿಸಿದರು.
ಮಾರುಕಟ್ಟೆಯ ವ್ಯವಹಾರಗಳು ಆರಂಭಗೊಳ್ಳುತ್ತಿದ್ದಂತೆ ಕಾರ್ಮಿಕರು ಮಾರುಕಟ್ಟೆಯ ಬಳಿ ಜಮಾಯಿಸಿ ಘೋಷಣೆ ಕೂಗುತ್ತಾ ಪೋರ್ಟ್ ರಸ್ತೆ, ಕೆನರಾ ಚೇಂಬರ್ ರಸ್ತೆ, ಜೆಎಂ ರಸ್ತೆ, ವರ್ತಕ ವಿಳಾಸ ರಸ್ತೆಗಳಲ್ಲಿ ಹಕ್ಕೊತ್ತಾಯ ಮೆರವಣಿಗೆ ನಡೆಸಿದರು.
ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್ ಜೊತೆ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.