ETV Bharat / city

ಮಂಗಳೂರು : ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ 5,31,200 ರೂ. ವಂಚನೆ! - ಪಾರ್ಟ್ ಟೈಮ್ ಜಾಬ್ ವಂಚನೆ

ಆ ವ್ಯಕ್ತಿ ವಂಚಕರು ಹೇಳಿದಂತೆ ಲಿಂಕ್ ಕ್ಲಿಕ್‌ ಮಾಡಿ ವೆಬ್​​ಸೈಟ್ ಓಪನ್​ ಮಾಡಿ ಅದರಲ್ಲಿ ಡಿ.5ರಂದು 200 ರೂ. ಹೂಡಿಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ವಂಚಕರು ಲಾಭಾಂಶ ಎಂದು ಡಿ. 6ರಂದು 380 ರೂ. ಕಳುಹಿಸಿದ್ದರು. ಇದನ್ನು ನಂಬಿದ ವ್ಯಕ್ತಿ ತಮ್ಮ ಖಾತೆಯಿಂದ ಅಪರಿಚಿತರು ಕಳುಹಿಸಿದ ಕ್ಯೂ ಆರ್ ಕೋಡ್​​ಗೆ ಹಂತ ಹಂತವಾಗಿ ₹5 ಲಕ್ಷಕ್ಕೂ ಅಧಿಕ ಹಣ ಹಾಕಿದ್ದಾರೆ..

Mangalore fraud case
ಮಂಗಳೂರು ವಂಚನೆ ಪ್ರಕರಣ
author img

By

Published : Dec 10, 2021, 11:57 AM IST

ಮಂಗಳೂರು : ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಪಾರ್ಟ್ ಟೈಮ್ ಜಾಬ್​​​ಗೆ ಆಯ್ಕೆಯಾಗಿದ್ದೀರಿ ಎಂಬ ಸಂದೇಶ ಕಳುಹಿಸಿ ನಂತರ ಹಂತ ಹಂತವಾಗಿ 5,31,200 ರೂ. ವಂಚಿಸಿದ ಘಟನೆ ನಡೆದಿದೆ.

ನವೆಂಬರ್ 26ರಂದು ಮಂಗಳೂರಿನ ವ್ಯಕ್ತಿಯೊಬ್ಬರ ಮೊಬೈಲ್​​ಗೆ ಪಾರ್ಟ್ ಟೈಮ್ ಜಾಬ್​​ಗೆ ಆಯ್ಕೆಯಾಗಿದ್ದೀರಿ ಎಂಬ ಸಂದೇಶ ಬಂದಿತ್ತು. ಈ ವ್ಯಕ್ತಿ ಆ ನಂಬರ್​​ಗೆ ಚಾಟ್ ಮಾಡಿದಾಗ ಟೆಲಿಗ್ರಾಂ ಆ್ಯಪ್​​ನಲ್ಲಿ ವಂಚಕರು ಲಿಂಕ್ ಒಂದನ್ನು ಕಳುಹಿಸಿದ್ದರು.

ಆ ವ್ಯಕ್ತಿ ವಂಚಕರು ಹೇಳಿದಂತೆ ಲಿಂಕ್ ಕ್ಲಿಕ್‌ ಮಾಡಿ ವೆಬ್​​ಸೈಟ್ ಓಪನ್​ ಮಾಡಿ ಅದರಲ್ಲಿ ಡಿ.5ರಂದು 200 ರೂ. ಹೂಡಿಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ವಂಚಕರು ಲಾಭಾಂಶ ಎಂದು ಡಿ. 6ರಂದು 380 ರೂ. ಕಳುಹಿಸಿದ್ದರು. ಇದನ್ನು ನಂಬಿದ ವ್ಯಕ್ತಿ ತಮ್ಮ ಖಾತೆಯಿಂದ ಅಪರಿಚಿತರು ಕಳುಹಿಸಿದ ಕ್ಯೂ ಆರ್ ಕೋಡ್​​ಗೆ ಹಂತ ಹಂತವಾಗಿ 5,31,200ರೂ. ಹಾಕಿದ್ದಾರೆ.

ಇದನ್ನೂ ಓದಿ: ಪರೇಶ್ ಮೇಸ್ತಾ ಸಾವಿನ ರಹಸ್ಯ ಇನ್ನೂ ನಿಗೂಢ

ಆದರೆ, ಹಾಕಿದ ಹಣಕ್ಕೆ ಯಾವುದೇ ಲಾಭಾಂಶ ಬಾರದೇ ಇದ್ದಾಗ ವಂಚನೆಯ ಅರಿವಾಗಿ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.