ಮಂಗಳೂರು: ಯುದ್ಧಪೀಡಿತ ಉಕ್ರೇನ್ನಿಂದ ಇಂದು ನಾಲ್ವರು ವಿದ್ಯಾರ್ಥಿಗಳು ಮಂಗಳೂರು ತಲುಪಿದ್ದು, ಮಕ್ಕಳನ್ನು ಕಂಡು ಹೆತ್ತವರು ನಿರಾಳರಾದರು.
ಮೂಡಬಿದ್ರೆಯ ಶಾಲ್ವಿನ್ ಪ್ರೀತಿ ಸಾರಂಗ್, ಮೊರ್ಗನ್ ಗೇಟ್ನ ಸಾದ್ ಅರ್ಷದ್ ಅಹ್ಮದ್, ಪಡೀಲ್ನ ಕ್ಲಾಟನ್ ಡಿಸೋಜ, ದೇರೆಬೈಲ್ನ ಅನೈನ್ ಅನಾ ಮಂಗಳೂರು ತಲುಪಿದವರು. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಹೆತ್ತವರು ಅವರನ್ನು ಆಲಿಂಗಿಸಿಕೊಂಡು ಆನಂದಭಾಷ್ಪದಿಂದ ಸ್ವಾಗತಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ 18 ಮಂದಿ ಉಕ್ರೇನ್ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಇದರಲ್ಲಿ ಹೀನಾ ಫಾತಿಮಾ, ಜೆ. ಅನುಷಾ ಭಟ್, ಎಸ್. ಪ್ರಣವ್ ಕುಮಾರ್, ಅನೈನ್ ಅನಾ, ಶಾಲ್ವಿನ್ ಪ್ರೀತಿ ಸಾರಂಗ್, ಸಾದ್ ಅರ್ಷದ್ ಅಹ್ಮದ್, ಕ್ಲಾಟನ್ ಡಿಸೋಜ, ಮಂಗಳೂರಿಗೆ ಬಂದಿಳಿದಿದ್ದರೆ, ಪೂಜಾ ಮಲ್ಲಪ್ಪ ಬೆಂಗಳೂರು ಮನೆಗೆ ತಲುಪಿದ್ದಾರೆ.
ಈವರೆಗೆ ಒಟ್ಟು 8 ಮಂದಿ ಹುಟ್ಟೂರು ತಲುಪಿದ್ದು ಇನ್ನೂ 10 ಮಂದಿ ಉಕ್ರೇನ್ನಲ್ಲಿಯೇ ಸಿಲುಕಿದ್ದಾರೆ.
ಇದನ್ನೂ ಓದಿ: ನಾವು ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ: ಹೆಚ್ಡಿಕೆ