ಬೆಳ್ತಂಗಡಿ: ಹುಲಿ ಗಣತಿ ಯೋಜನೆ ನಿಮಿತ್ತ ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಕ್ಯಾಮೆರಾ ಟ್ರ್ಯಾಪಿಂಗ್ನಲ್ಲಿ ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ನೆಲ್ಲಿಗುಡ್ಡೆಯ ಪರ್ನಾಲೆ ಎಂಬಲ್ಲಿ ಇಡಲಾಗಿರುವ ಕ್ಯಾಮರಾದಲ್ಲಿ ಚಿರತೆಯು ಓಡಾಡಿರುವ ಚಿತ್ರ ಸೆರೆಯಾಗಿದೆ.
ಮಾ.7ರ ಮುಂಜಾನೆ 4ರ ಸುಮಾರಿಗೆ ಇಲ್ಲಿ ಚಿರತೆ ಓಡಾಟ ನಡೆಸಿದೆ. 5ದಿನಗಳಿಗೊಮ್ಮೆ ಈ ಯೋಜನೆಯ ಚಿತ್ರಗಳನ್ನು ಸಂಗ್ರಹಿಸಲಾಗುತ್ತಿದ್ದು, ಚಿರತೆ ಓಡಾಟದ ಚಿತ್ರ ಕಂಡು ಬಂದಿದೆ.
ಇದನ್ನೂ ಓದಿ: ಕುಂದಾನಗರಿಯಲ್ಲಿ ಬೆಳಂಬೆಳಗ್ಗೆ ಹರಿಯಿತು ನೆತ್ತರು; ಕಾರದ ಪುಡಿ ಎರಚಿ ಬಿಲ್ಡರ್ ಬರ್ಬರ ಹತ್ಯೆ
ಕಳೆದ ಎರಡು ವರ್ಷಗಳ ಹಿಂದೆ ಕರುವೊಂದನ್ನು ಚಿರತೆ ಹಿಡಿದು ಕೊಂದಿತ್ತು. ಅದರ ಕಳೇಬರ ಈ ಸ್ಥಳದ ಆಸುಪಾಸಿನಲ್ಲೇ ಕಂಡು ಬಂದಿತ್ತು. ಸ್ಥಳದಲ್ಲಿ ಬೋನನ್ನು ಇಲಾಖೆ ವತಿಯಿಂದ ಇಡಲಾಗಿತ್ತು. ಈ ಪ್ರದೇಶವು ರಾಷ್ಟ್ರೀಯ ಹೆದ್ದಾರಿ ಸಮೀಪವಿದ್ದು, ಹೆದ್ದಾರಿಯಲ್ಲಿ ಆಗಾಗ ಚಿರತೆ ಓಡಾಡುವ ಕುರಿತು ವಾಹನ ಸವಾರರು ತಿಳಿಸಿದ್ದರು. ಸದ್ಯ ಕ್ಯಾಮೆರಾ ಟ್ರ್ಯಾಪಿಂಗ್ನಲ್ಲಿ ಚಿರತೆ ಚಿತ್ರ ಸೆರೆಯಾಗಿದೆ.