ETV Bharat / city

ಬಂಟ್ವಾಳ: ಅಪಾಯಕ್ಕೆ ಸಿಲುಕಿದ್ದ ಚಿರತೆ ರಕ್ಷಣೆ

author img

By

Published : Nov 20, 2021, 12:42 PM IST

ಉರುಳಿಗೆ ಸಿಲುಕಿದ್ದ ಚಿರತೆಯೊಂದನ್ನು ಬಂಟ್ವಾಳದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

rescued leopard in Bantwal
ಚಿರತೆ ರಕ್ಷಣೆ

ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಹೆಗಡೆಗುಳಿ ಎಂಬಲ್ಲಿ ಉರುಳಿಗೆ ಸಿಲುಕಿದ್ದ ಚಿರತೆಯೊಂದನ್ನು ಬಂಟ್ವಾಳದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ರಕ್ಷಿಸಿದ್ದಾರೆ.

ಶುಕ್ರವಾರ ತಡರಾತ್ರಿವರೆಗೂ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಸುತ್ತ ಮನೆಗಳು ಇರುವ ಜಾಗದಲ್ಲಿ ಚಿರತೆಯೊಂದು ಉರುಳಿಗೆ ಸಿಲುಕಿಕೊಂಡಿತ್ತು. ಸುಮಾರು ರಾತ್ರಿ 8 ಗಂಟೆ ವೇಳೆಗೆ ಚಿರತೆ ಇರುವ ಮಾಹಿತಿ ದೊರಕಿತು. ಸ್ಥಳೀಯರ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ, 4 ತಾಸುಗಳ ಪರಿಶ್ರಮದ ಬಳಿಕ ಚಿರತೆಯ ಪ್ರಜ್ಞೆ ತಪ್ಪಿಸಿ ಕೊಂಡೊಯ್ಯಲು ಸಫಲವಾಯಿತು ಎಂದು ಬಂಟ್ವಾಳ ವಲಯಾರಣ್ಯಾಧಿಕಾರಿ ರಾಜೇಶ್ ಬಳಿಗಾರ್ ತಿಳಿಸಿದ್ದಾರೆ.

ಬಂಟ್ವಾಳದಲ್ಲಿ ಚಿರತೆ ರಕ್ಷಣೆ

ಸುಮಾರು 60 ಕೆ.ಜಿ. ತೂಕದ ಈ ಚಿರತೆಗೆ ಸೂಕ್ತ ಚಿಕಿತ್ಸೆ ನೀಡಿ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು. ಮಂಗಳೂರಿನಿಂದ ಡಾ. ಯಶಸ್ವಿ ಮತ್ತು ವೈದ್ಯರ ತಂಡ ಬಂದು ಇಂಜೆಕ್ಷನ್ ಕೊಟ್ಟ ಸುಮಾರು 15 ನಿಮಿಷದ ಬಳಿಕ ಅಮಲಿನಲ್ಲಿ ಚಿರತೆ ಮಲಗಿತು. ಬೋನಿಗೆ ಹಾಕಿ ಪಿಕಪ್​ನಲ್ಲಿ ಚಿರತೆಯನ್ನು ವಲಯ ಕಚೇರಿಗೆ ತರಲಾಯಿತು ಎಂದು ವಲಯಾರಣ್ಯಾಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: AP Floods: ಪ್ರವಾಹಕ್ಕೆ ಆಂಧ್ರ ತತ್ತರ: ಇಲ್ಲಿಯವರೆಗೆ 17 ಮಂದಿ ಸಾವು

ಕಾರ್ಯಾಚರಣೆಯಲ್ಲಿ ವಲಯಾರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಉಪ ವಲಯಾರಣ್ಯಾಧಿಕಾರಿ ಪ್ರೀತಮ್​ ಎಸ್, ಯಶೋಧರ್, ಅರಣ್ಯರಕ್ಷಕ ಜಿತೇಶ್ ಸೇರಿದಂತೆ ಇನ್ನಿತರರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.