ETV Bharat / city

ಮೀನು‌ ಸಂಸ್ಕರಣಾ ಘಟಕದಲ್ಲಿ ಐವರ ಬಲಿ: ನಾಲ್ವರು ಪೊಲೀಸ್​​ ವಶಕ್ಕೆ

author img

By

Published : Apr 18, 2022, 11:50 AM IST

Updated : Apr 18, 2022, 12:09 PM IST

ಈ ಪ್ರಕರಣದಲ್ಲಿ ಮೀನು ಸಂಸ್ಕರಣಾ ಘಟಕದ ಮಾಲೀಕರು ಸೇರಿದಂತೆ ನಾಲ್ವರ ಮೇಲೆ IPC 304ರ ಅಡಿಯಲ್ಲಿ ಬಜ್ಪೆ ಪೊಲೀಸ್​ ಠಾಣೆಯಲ್ಲಿ ಕೇಸು ದಾಖಲಾಗಿದೆ. ನಾಲ್ವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಕಮಿಷನರ್​ ಶಶಿಕುಮಾರ್​ ಎನ್​. ಮಾಹಿತಿ ನೀಡಿದ್ದಾರೆ.

Mangalore Police commissioner Shashikumar N. Talked to press
ಮಂಗಳೂರು ಕಮಿಷನರ್​ ಶಶಿಕುಮಾರ್​ ಎನ್​. ಮಾಹಿತಿ ನೀಡಿದರು.

ಮಂಗಳೂರು: ನಗರದ ಬಜ್ಪೆಯಲ್ಲಿರುವ ಎಸ್ಇಝೆಡ್​ನಲ್ಲಿರುವ ಶ್ರೀ ಉಲ್ಕಾ ಎಲ್​ಎಲ್​ಪಿ ಮೀನು ಸಂಸ್ಕರಣಾ ಘಟಕದಲ್ಲಿ ಓರ್ವನ ಪ್ರಾಣ ಉಳಿಸಲು ಹೋಗಿ ಒಟ್ಟಾರೆ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ‌ ನಡೆದಿದೆ. ಪ್ರಕರಣದಲ್ಲಿ ಇನ್ನೂ ಮೂವರು ಕಾರ್ಮಿಕರು ಉಸಿರುಗಟ್ಟಿ ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ಮೀನು‌ ಸಂಸ್ಕರಣಾ ಘಟಕ ವಿಷಾನಿಲ ಸೋರಿಕೆ ದುರಂತ

ಪಶ್ಚಿಮ ಬಂಗಾಳ ಮೂಲದ ಮಹಮ್ಮದ್ ಸಮರುಲ್ಲಾ ಇಸ್ಲಾಂ, ಉಮರುಲ್ಲಾ ಫಾರೂಕ್, ನಿಜಾಮುದ್ದೀನ್, ನಿಜಾಮುದ್ದೀನ್ ಇಸ್ಲಾಂ, ಶರಕತ್ ಅಲಿ ಮೃತ ಕಾರ್ಮಿಕರು ಎಂದು ತಿಳಿದುಬಂದಿದೆ. ಈ ಕುರಿತು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಭಾನುವಾರ ಸಂಜೆ 6-7 ಗಂಟೆ ಸುಮಾರಿಗೆ ಒಬ್ಬ ವ್ಯಕ್ತಿ ಮೀನು ತ್ಯಾಜ್ಯಾ ಸಂಗ್ರಹಣಾ ಟ್ಯಾಂಕ್​ನಲ್ಲಿ ಬಿದ್ದು, ಪ್ರಜ್ಞಾಹೀನನಾಗಿದ್ದಾನೆ. ಆತನನ್ನು ಕಾಪಾಡಲು ಹೋದ ಹೆಚ್ಚುವರಿಯಾಗಿ ಏಳು ಜನವೂ ಸಂಗ್ರಹಣಾ ಟ್ಯಾಂಕ್​ನೊಳಗೆ ಬಿದ್ದಿದ್ದಾರೆ. ಪ್ರಜ್ಞಾಹೀನರಾದ ಅವರನ್ನು ತಕ್ಷಣವೇ ನಗರದ ಎ.ಜೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅದರಲ್ಲಿ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತಿಬ್ಬರು ನಿನ್ನೆ ರಾತ್ರಿಯೇ ಆಸ್ಪತ್ರೆಗೆ ದಾಖಲಾದ ಬಳಿಕ ಸಾವನ್ನಪ್ಪಿದ್ದಾರೆ. ಮಹಮ್ಮದ್ ಸಮರುಲ್ಲಾ ಇಸ್ಲಾಂ, ಉಮರುಲ್ಲಾ ಫಾರೂಕ್, ನಿಜಾಮುದ್ದೀನ್ ನಿನ್ನೆ ಸಾವನ್ನಪ್ಪಿದವರು. ಉಳಿದ ಐದು ಜನರಿಗೆ ಐಸೋಲೇಷನ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅದರಲ್ಲಿ ಇಬ್ಬರು ನಿಜಾಮುದ್ದೀನ್ ಇಸ್ಲಾಂ, ಶರಕತ್ ಅಲಿ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಅದರ ಜೊತೆ ಹಸನ್​ ಅಲಿ, ಮೊಹಮ್ಮದ್​ ಅಲೀಬುಲ್ಲಾ ಮತ್ತು ಅಫೀಸುಲ್ಲಾ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ನಿಜಾಮುದ್ದೀನ್​ ಮೊದಲು ಮೀನು ತ್ಯಾಜ್ಯ ಸಂಗ್ರಹಣಾ ಟ್ಯಾಂಕ್​ನೊಳಗೆ ಬಿದ್ದವನು. ಆತನನ್ನು ಕಾಪಾಡಲು ಉಳಿದವರು ಟ್ಯಾಂಕ್​ನೊಳಗೆ ಇಳಿದಿದ್ದರು. ಇವರೆಲ್ಲ ಪಶ್ಚಿಮ ಬಂಗಾಳ ಮೂಲದವರು. ಸುಮಾರು 20 ರಿಂದ 23ರ ಚಿಕ್ಕ ವಯಸ್ಸಿನ ಹುಡುಗರು. ಮಂಗಳೂರಿನ ಎಸ್ಇಝಡ್ ವ್ಯಾಪ್ತಿಯಲ್ಲಿರುವ ಶ್ರೀ ಉಲ್ಕಾ ಎಲ್ಎಲ್​ಪಿ ಮೀನು‌ಸಂಸ್ಕರಣಾ ಘಟಕದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮುಂಬೈ ಮೂಲದ ವ್ಯಕ್ತಿಗೆ ಸೇರಿರುವ ಈ‌ ಸಂಸ್ಥೆಯಲ್ಲಿ ಒಟ್ಟು 68 ಮಂದಿ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಈ ಪ್ರಕರಣದಲ್ಲಿ ಮೀನು ಸಂಸ್ಕರಣಾ ಘಟಕದ ಮಾಲೀಕರು ಸೇರಿದಂತೆ ನಾಲ್ವರ ಮೇಲೆ IPC 304ರ ಅಡಿಯಲ್ಲಿ, ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳದೇ ಕೆಲಸ ಮಾಡಿಸಿರುವ ಹಿನ್ನೆಲೆಯಲ್ಲಿ ಬಜ್ಪೆ ಪೊಲೀಸ್​ ಠಾಣೆಯಲ್ಲಿ ಕೇಸು ದಾಖಲಾಗಿದೆ. ಸದ್ಯಕ್ಕೆ ನಾಲ್ಕು ಜನರನ್ನು ವಶಕ್ಕೆ ಪಡೆಯಲಾಗಿದೆ. ಕಂಪನಿಯ ಪ್ರೊಡಕ್ಷನ್​ ಮ್ಯಾನೇಜರ್​ ರೂಬಿ ಜೋಸೆಫ್​, ಏರಿಯಾ ಮ್ಯಾನೇಜರ್​ ಕುಬೇರ್​, ಸೂಪರ್​ವೈಸರ್​ ಮಹಮ್ಮದ್​ ಅನ್ವರ್​, ಫಾರೂಕ್​ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆಯವರನ್ನು ಬರಲು ಹೇಳಿದ್ದೇವೆ. ಗಂಭೀರ ಪ್ರಕರಣವಾಗಿರುವುದರಿಂದ ಎಲ್ಲಾ ರೀತಿಯಲ್ಲೂ ತನಿಖೆ ಮಾಡಲಾಗುವುದು ಎಂದು ತಿಳಿಸಿದರು.

ಖಚಿತ ಮಾಹಿತಿ ಇಲ್ಲ: ವಿಷಾನಿಲ ಯಾವುದು ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ. ಪ್ರಥಮ ಚಿಕಿತ್ಸೆ ಸಂದರ್ಭ ವೈದ್ಯರು ಹೇಳಿದಂತೆ ಅವರ ಬಾಯಿ ಮೂಗಿನಲ್ಲಿ ಮೀನಿನ ತ್ಯಾಜ್ಯಗಳು ಸಿಕ್ಕಿಹಾಕಿಕೊಂಡಿತ್ತು ಎಂಬುದಾಗಿ ತಿಳಿಸಿದ್ದಾರೆ. ಇನ್ನೂ ಕೆಲವರು ಹೇಳುವಂತೆ ಅವರ ರೋಜಾ ತಿಂಗಳು ನಡೆಯುತ್ತಿದೆ. ಉಪವಾಸ ಇದ್ದ ಕಾರಣ ಪ್ರಜ್ಞಾಹೀನರಾಗಿ ಬಿದ್ದಿರಬಹುದು. ಆ ಸಂದರ್ಭ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂಬುದಾಗಿಯೂ ಹೇಳುತ್ತಿದ್ದಾರೆ.

ಯಾವುದನ್ನೂ ಈಗಲೇ ಹೇಳಲಾಗುವುದಿಲ್ಲ. ಪೋಸ್ಟ್​ ಮಾರ್ಟಮ್​ ಆದ ಮೇಲೆ ಸಾವಿಗೆ ಸರಿಯಾದ ಕಾರಣ ತಿಳಿದು ಬರಲಿದೆ. ಬೇರೆ ಬೇರೆ ಇಲಾಖೆಗಳಿಂದ ಕಾರ್ಖಾನೆ ಬಳಿ ಹೋಗಿ ತನಿಖೆ ನಡೆಯಬೇಕು. ಅವರು ನೀಡಿದ ವರದಿಗಳನ್ನೂ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪೊಲೀಸ್​ ಕಮಿಷನರ್​ ಶಶಿಕುಮಾರ್​ ವಿವರಿಸಿದರು.

ಇದನ್ನೂ ಓದಿ: ಮಂಗಳೂರು ಮೀನಿನ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ.. ಐವರು ಕಾರ್ಮಿಕರ ಸಾವು

Last Updated : Apr 18, 2022, 12:09 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.