ETV Bharat / city

ಮಂಗಳೂರು: 2 ಗಾಂಜಾ ಸಾಗಾಟ ಪ್ರಕರಣದಲ್ಲಿ 5 ಮಂದಿ ಬಂಧನ - ಮಂಗಳೂರು ಗಾಂಜಾ ಪ್ರಕರಣ

ಮಂಗಳೂರಿನಲ್ಲಿ ಎರಡು ಗಾಂಜಾ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

mangalore Marijuana case
ಮಂಗಳೂರು ಗಾಂಜಾ ಪ್ರಕರಣದ ಆರೋಪಿಗಳು
author img

By

Published : Feb 17, 2022, 1:11 PM IST

ಮಂಗಳೂರು (ದಕ್ಷಿಣ ಕನ್ನಡ): ಎರಡು ಗಾಂಜಾ ಸಾಗಾಟ ಪ್ರಕರಣಗಳನ್ನು ಮಂಗಳೂರು ನಗರ ಪೊಲೀಸರು ಪತ್ತೆ ಹಚ್ಚಿದ್ದು, ಐವರನ್ನು ಬಂಧಿಸಿದ್ದಾರೆ.

ಪ್ರಕರಣ-1: ಕೇರಳದಿಂದ ಮಂಗಳೂರಿಗೆ ಗಾಂಜಾ ಸಾಗಿಸುತ್ತಿದ್ದವರನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೇರಳ ರಾಜ್ಯದ ಮಂಜೇಶ್ವರದ ಪ್ರಫುಲ್ ರಾಜ್ (23) ಮತ್ತು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪದ ಅವಿನಾಶ್ (24) ಬಂಧಿತರು.

ಇದನ್ನೂ ಓದಿ: ಕಸ ಹಾಕುವ ವಿಚಾರಕ್ಕೆ ಕುಟುಂಬಸ್ಥರ ನಡುವೆ ಮಾರಾಮಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಆರೋಪಿಗಳು ಕೇರಳದ ಗಡಿ ಭಾಗವಾದ ಕುಂಜತ್ತೂರಿನಿಂದ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದರು. ಮಂಗಳೂರಿನ ತಲಪಾಡಿಯ ನಾರ್ಲ ಪಡೀಲ್ ರಾಮನಗರ ಎಂಬಲ್ಲಿ ಇವರನ್ನು ಪೊಲೀಸರು ಬಂಧಿಸಿದ್ದಾರೆ. 2 ಕೆಜಿ‌ ಗಾಂಜಾ ಜೊತೆಗೆ ಕಾರು, ಮೊಬೈಲ್ ಫೋನ್ ಹಾಗು 1,200 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ-2: ಮಂಗಳೂರಿನ ಮಂಜನಾಡಿ ಗ್ರಾಮದಲ್ಲಿ ಗಾಂಜಾ ಸಾಗಿಸುತ್ತಿದ್ದವರನ್ನು ಕೋಣಾಜೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಗಾಂಜಾ ಸಾಗಾಟ ಮಾಡುತ್ತಿದ್ದ ಕೇರಳದ ವರ್ಕಾಡಿಯ ಮುಹಮ್ಮದ್ ‌ಹನೀಫ್, ಮೀಯಪದವಿನ ಮಾಮದ್ ನಸೀಬು ಮತ್ತು ‌ಮಂಗಳೂರು‌ ಕೆ.ಸಿ.ರೋಡ್​ನ ಹಬೀಬ್ ಎಂಬುವರನ್ನು ಬಂಧಿಸಲಾಗಿದೆ. ಇವರಿಂದ 1 ಕೆಜಿ 340 ಗ್ರಾಂ ಗಾಂಜಾ, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.