ETV Bharat / city

ಸಿಲಿಂಡರ್ ಸಾಗಾಟದ ಲಾರಿಯಲ್ಲಿ ಗ್ಯಾಸ್ ಲೀಕೇಜ್, ಅಗ್ನಿಶಾಮಕ ದಳ ತುರ್ತು ಕಾರ್ಯಾಚರಣೆ - ಸಿಲಿಂಡರ್ ಸಾಗಾಟದ ಲಾರಿಯಲ್ಲಿ ಗ್ಯಾಸ್ ಲೀಕೇಜ್

ಲಾರಿಯನ್ನು ಹೆದ್ದಾರಿ ಬಳಿ ನಿಲ್ಲಿಸಿ ಪೊಲೀಸ್ ಇಲಾಖೆ ಹಾಗೂ ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ವಾಹನ ಸಂಚಾರವನ್ನು ಕೆಲ ಗಂಟೆಯ ಕಾಲ ತಡೆದರು..

fire brigade
ಗ್ಯಾಸ್ ಲೀಕೇಜ್
author img

By

Published : Dec 10, 2020, 6:44 PM IST

ಉಳ್ಳಾಲ(ಮಂಗಳೂರು): ಬೈಕಂಪಾಡಿಯಿಂದ ಕೇರಳ ಕಡೆಗೆ ಅಡುಗೆ ಅನಿಲ ಸಿಲಿಂಡರ್ ಸಾಗಾಟ ನಡೆಸುತ್ತಿದ್ದ ಸಂದರ್ಭ ಒಂದು ಸಿಲಿಂಡರ್​ನಲ್ಲಿ ಅನಿಲ ಸೋರಿಕೆ ಉಂಟಾದ ಘಟನೆ ರಾಷ್ಟ್ರೀಯ ಹೆದ್ದಾರಿ-66ರ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ. ಆದರೆ, ಚಾಲಕನ ಮುಂಜಾಗ್ರತೆಯಿಂದಾಗಿ ಸಂಭಾವ್ಯ ಅನಾಹುತ ತಪ್ಪಿದೆ.

ಸಿಲಿಂಡರ್‌ ಲೋಡಿಂಗ್​ ಮಾಡುವಾಗ ಒಂದು ಸಿಲಿಂಡರ್​ನಲ್ಲಿ ಸೋರಿಕೆಯಾಗಿತ್ತು. ಇದು ಚಾಲಕನ ಗಮನಕ್ಕೆ ಬಂದಿತ್ತು. ಕೂಡಲೇ ಲಾರಿಯನ್ನು ಹೆದ್ದಾರಿ ಬಳಿ ನಿಲ್ಲಿಸಿ ಪೊಲೀಸ್ ಇಲಾಖೆ ಹಾಗೂ ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ವಾಹನ ಸಂಚಾರವನ್ನು ಕೆಲ ಗಂಟೆಯ ಕಾಲ ತಡೆದರು.

ಇದರಿಂದ ತೊಕ್ಕೊಟ್ಟು ಜಂಕ್ಷನ್ ಕೆಲ ಕ್ಷಣ ಸ್ತಬ್ಧವಾಗಿತ್ತು. ಬಳಿಕ ಸ್ಥಳಕ್ಕೆ ಅಗ್ನಿ ಶಾಮಕದಳ ಆಗಮಿಸಿ ಸಿಲಿಂಡರ್​ನ ದೂರದಲ್ಲಿ ಇಟ್ಟು ಅನಿಲ ಸೋರಿಕೆ ತಡೆದರು. ಚಾಲಕ ಹಾಗೂ ಅಗ್ನಿಶಾಮಕ ದಳದ ತುರ್ತು ಕಾರ್ಯಾಚರಣೆಯಿಂದ ಸಂಭಾವ್ಯ ಅನಾಹುತ ತಪ್ಪಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.