ETV Bharat / city

ರೈತರ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಮಂಗಳೂರಿನಲ್ಲಿ ಹಕ್ಕೊತ್ತಾಯ ಸಭೆ - protest, Karnataka Rajya Raitha Sangh

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿತು.

Farmers protest against central and state government
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ
author img

By

Published : Dec 17, 2019, 5:34 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಕ್ಕೊತ್ತಾಯ ಸಭೆ ನಡೆಸಿದರು.

ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ಈ ಮೊದಲು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ‌ ಬಿಜೆಪಿ ಬರುತಿತ್ತು. ಒಂದು ವೇಳೆ ಬಿಜೆಪಿ ಆಡಳಿತಕ್ಕೆ ಬಂದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುತಿತ್ತು. ಹೀಗಾಗಿ ಸಮನ್ವಯದ ಕೊರತೆ ಹೆಚ್ಚಾಗಿ ರೈತರ ಬೇಡಿಕೆಗಳು ಮೂಲೆಗುಂಪಾಗುತ್ತಿದ್ದವು. ಈಗ ಎರಡೂ ಕಡೆ ಒಂದೇ ಸರ್ಕಾರವಿದ್ದರೂ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.

ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಹಕಾರಿ ಬ್ಯಾಂಕ್​​ಗಳ ಲಕ್ಷ ರೂಪಾಯಿ ಬೆಳೆ ಸಾಲಮನ್ನಾ ಮಾಡಿತ್ತು. ಈ ಜಿಲ್ಲೆಯ 67 ಸಾವಿರ ರೈತರು ಅದರಡಿಗೆ ಬರುತ್ತಾರೆ. ಒಟ್ಟು ₹ 526 ಕೋಟಿ ರೈತರ ಖಾತೆಗೆ ಹಣ ಬರಬೇಕಾಗಿತ್ತು. ಆದರೆ, ಇಲ್ಲಿಯವರೆಗೂ ₹ 265 ಕೋಟಿ ಮಾತ್ರ ಬಿಡುಗಡೆಗೊಂಡಿದೆ. ವಾಣಿಜ್ಯ ಬ್ಯಾಂಕ್​​​ಗಳಲ್ಲಿ ₹ 2 ಲಕ್ಷ ಸಾಲಮನ್ನಾ ಘೋಷಣೆ ಆಗಿತ್ತು. ಅದು ₹18 ಕೋಟಿ ಮಾತ್ರ ಬಂದಿದೆ. ಅಷ್ಟೇ ಅಲ್ಲದೆ, ಇನ್ನೂ ಬಾಕಿ ಹಣದ ಪಟ್ಟಿಯೇ ತಯಾರಾಗಿಲ್ಲ. ಈ ಕೂಡಲೇ ಬಾಳಿ ಉಳಿಸಿಕೊಂಡಿರುವ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ

ನೆರೆಯಿಂದಾಗಿ ರಾಜ್ಯದಲ್ಲಿ ₹ 4 ಲಕ್ಷ ಕೋಟಿಯಷ್ಟು ಬೆಳೆ, ಮನೆ ಹಾನಿಯಾಗಿದೆ. ಆದರೆ ರಾಜ್ಯ ಸರ್ಕಾರ ₹ 40 ಸಾವಿರ ಕೋಟಿಯಷ್ಟು ನಷ್ಟವಾಗಿದೆ ಎಂದು ಕೇಂದ್ರಕ್ಕೆ ವರದಿ ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ಕೇಂದ್ರ ಭಿಕ್ಷೆಯಾಗಿ ₹1,300 ಕೋಟಿ ಬಿಡುಗಡೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಬಂಟ್ವಾಳದಿಂದ ಬೆಂಗಳೂರಿನವರೆಗೆ ಸಾವಿರಾರು ರೈತರು ವಾಹನ ಜಾಥಾ ನಡೆಸಿದೆವು. ಆ ಬಳಿಕ ಎಚ್ಚರಗೊಂಡ ರಾಜ್ಯ ಸರ್ಕಾರ ₹ 10,000 ಪರಿಹಾರ ಘೋಷಿಸಿತು. ಇದನ್ನು ಪರಿಹಾರ ಎಂದು ಹೇಳುತ್ತಾರಾ ಎಂದವರು ಪ್ರಶ್ನಿಸಿದರು.

Intro:ಮಂಗಳೂರು: ದ.ಕ.ಜಿಲ್ಲೆಯ ರೈತರ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ದ.ಕ.ಜಿಲ್ಲಾ ಘಟಕದ ವತಿಯಿಂದ ಹಕ್ಕೊತ್ತಾಯ ಸಭೆ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ನಡೆಯಿತು.

ಈ ಸಂದರ್ಭ ಹಸಿರು ಸೇನೆಯ ದ.ಕ.ಜಿಲ್ಲಾ ಘಟಕದ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ‌ ಬಿಜೆಪಿ ಪಕ್ಷ ಆಡಳಿತದಲ್ಲಿರುತ್ತದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಇರುತ್ತಿತ್ತು. ಇದು ಪದೇಪದೇ ನಡೆಯುತ್ತಿತ್ತು. ಆದರೆ ಕೃಷಿಕರ ಪರವಾಗಿ ಮಾತನಾಡುವ ಯಾವ ಧ್ವನಿಯೂ ಇರುತ್ತಿರಲಿಲ್ಲ. ಹಿಂದಿನ ಸಮ್ಮಿಶ್ರ ಸರಕಾರ ಸಹಕಾರಿ ಬ್ಯಾಂಕುಗಳಲ್ಲಿರುವ ಒಂದು ಲಕ್ಷ ರೂ. ಬೆಳೆ ಸಾಲ ಮನ್ನಾ ಮಾಡಿದ್ದರು. ಈ ಜಿಲ್ಲೆಯಲ್ಲಿ 67 ಸಾವಿರ ರೈತರಿಗೆ ಒಂದು ಲಕ್ಷ ರೂ. ಬೆಳೆ ಸಾಲ ಮನ್ನಾ ಪರಿಹಾರ ಬರಬೇಕಾಗಿದೆ. 526 ಕೋಟಿ ರೂ. ರೈತರ ಖಾತೆಗೆ ಹಣ ಬರಬೇಕಾಗಿತ್ತು. ಆದರೆ ಇಲ್ಲವರೆಗೆ 265ಕೋಟಿ ರೂ. ಮಾತ್ರ ರೈತರ ಖಾತೆಗೆ ನಗದು ಬಂದಿದೆ. ಉಳಿದ ಹಣವನ್ನು ಕೊಡಲು ರಾಜ್ಯ ಸರಕಾರ, ಜಿಲ್ಲಾಡಳಿತ , ಇಲ್ಲಿಯ ಜನಪ್ರತಿನಿಧಿಗಳು ಕೊಡದಿರುವುದಕ್ಕೆ ಅವರನ್ನು ಎಚ್ಚರಿಸುವ ಕಾರ್ಯವನ್ನು ರಾಜ್ಯ ರೈತರ ಸಂಘ ಮಾಡುತ್ತಿದೆ ಎಂದು ಹೇಳಿದರು.

Body:ವಾಣಿಜ್ಯ ಬ್ಯಾಂಕ್ ಗಳಲ್ಲಿ ಎರಡು ಲಕ್ಷ ರೂ. ಮನ್ನಾ ಘೋಷಣೆ ಆಗಿತ್ತು. ಅದೂ ಇನ್ನೂ ಬಂದಿಲ್ಲ‌. 18 ಕೋಟಿ ರೂ. ಮಾತ್ರ ಈಗಾಗಲೇ ಬಂದಿದೆ. ಉಳಿದ ಹಣದ ಪಟ್ಟಿಯೇ ತಯಾರಾಗಿಲ್ಲ. ಕುಮಾರ ಸ್ವಾಮಿ ಸರಕಾರ ಸಾಲಮನ್ನಾ ಮಾಡಿ ಒಂದೂವರೆ ವರ್ಷವಾದರೂ ಫಲಾನುಭವಿಗಳ ಪಟ್ಟಿಯನ್ನೇ ಇನ್ನೂ ರೆಡಿ ಮಾಡಲಾಗದಿದ್ದರೆ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರದ ವಿರುದ್ಧ ಯಾವ ರೀತಿಯ ಶಬ್ದ ಪ್ರಯೋಗ ಮಾಡಬೇಕು ಎಂದು ರವಿಕಿರಣ್ ಪುಣಚ ಕಿಡಿಕಾರಿದರು.

ಒಂದು ಬಾರಿಗೆ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು. ಈ ರಾಜ್ಯದಲ್ಲಿ 4 ಲಕ್ಷ ಕೋಟಿ ರೂ.ನಷ್ಟು ಬೆಳೆನಾಶ, ಮನೆನಾಶ ವಾಗಿದೆ. ಆದರೆ ರಾಜ್ಯ ಸರಕಾರ 40,000 ರೂ.ನಷ್ಟು ನಷ್ಟವಾಗಿದೆ ಎಂದು ಕೇಂದ್ರಕ್ಕೆ ವರದಿ ಮಾಡಿದೆ. ಆದರೆ ಕೇಂದ್ರ ಸರಕಾರ ಭಿಕ್ಷೆಯಂತೆ 1,300 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಈ ಬಗ್ಗೆ ದಪ್ಪ ಚರ್ಮದ ರಾಜಕಾರಣಿಗಳಿಗೆ ಗೊತ್ತಾಗೋದಿಲ್ಲ ಎಂದು ಕಳೆದ ತಿಂಗಳು ಬಂಟ್ವಾಳದಿಂದ ಬೆಂಗಳೂರು ವರೆಗೆ ವಾಹನ ಜಾಥಾ ನಡೆಸಿದೆವು. ಅಲ್ಲಿ ಸಾವಿರಾರು ಮಂದಿ ರೈತರಿಂದ ಬೃಹತ್ ಬಹಿರಂಗ ಅಧಿವೇಶನ ನಡೆಯಿತು. ಆ ಬಳಿಕ ಎಚ್ಚರಾದ ರಾಜ್ಯ ಸರಕಾರ ಈ ಹಿಂದೆ ಎಸ್ ಡಿಆರ್ ಎಫ್ ನಾರ್ಮ್ಸ್ ನಲ್ಲಿ ಹೆಕ್ಟೇರ್ ಗೆ ಎಷ್ಟು ಪರಿಹಾರ ನೀಡಬಹುದು ಎಂದಿತ್ತು ಅದಕ್ಕೆ 10,000 ರೂ‌. ಸೇರಿಸಿಕೊಡಬಹುದು ಎಂದು ಯಡಿಯೂರಪ್ಪ ಘೋಷಿಸಿದರು. ಇದಕ್ಕೆ ಪರಿಹಾರವೆಂದು ಹೇಳುತ್ತಾರಾ ಎಂದು ಅವರು ಪ್ರಶ್ನಿಸಿದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.