ದಕ್ಷಿಣಕನ್ನಡ : ಜಿಲ್ಲೆಯ ಕಡಬ ಪಟ್ಟಣದ ಪ್ರಶಾಂತ್ ವೈನ್ ಶಾಪ್ನಲ್ಲಿ ಅಧಿಕ ದರ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳಿದ್ದವು. ಈಗ ಮದ್ಯದಂಗಡಿಯ ಹಗಲು ದರೋಡೆ ಬಯಲಾಗಿದೆ.
ಈ ವೈನ್ ಶಾಪ್ನಲ್ಲಿ ಬಿಯರ್ ಸೇರಿ ಹಲವು ಮದ್ಯ ಬ್ರಾಂಡ್ಗಳಿಗೆ ₹10ರಿಂದ 30 ರೂಪಾಯಿವರೆಗೂ ಹೆಚ್ಚುವರಿ ದರ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಧಿಕ ದರ ವಸೂಲಿ ಮಾಡುತ್ತಿರುವ ಬಗ್ಗೆ ಗ್ರಾಹಕರಿಗೆ ಗೊತ್ತಿದ್ರೂ ಭಯದಿಂದ ಇಷ್ಟು ದಿನ ಮಾಹಿತಿ ನೀಡಲು ಹಿಂಜರಿಯುತ್ತಿದ್ದರು ಎನ್ನಲಾಗಿದೆ.
ಸದ್ಯ, ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಮಾಧ್ಯಮದವರೇ ಈ ಹಗಲು ದರೋಡೆಯನ್ನ ಬಯಲು ಮಾಡಿದ್ದಾರೆ. ಮದ್ಯದ ಬಾಟಲಿಯಲ್ಲಿ ಸರ್ಕಾರ ನಿಗದಿ ಮಾಡಿರುವ ಎಂಆರ್ಪಿ ದರಕ್ಕಿಂತ ಅಧಿಕ ದರ ವಸೂಲಿ ಮಾಡುತ್ತಿರುವ ಬಾರ್ ಮಾಲೀಕರ ವಿರುದ್ಧ ಅಬಕಾರಿ ಅಧಿಕಾರಿಗಳು ಕ್ರಮ ಜರುಗಿಸುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.