ETV Bharat / city

ಜೆಬಿಎಫ್ ಕಂಪೆನಿ ಬಂದ್.. ಕೆಲಸ ಕಳೆದುಕೊಂಡ ಭೂಸಂತ್ರಸ್ತರಿಗೆ ಉದ್ಯೋಗದ ಭರವಸೆ - land to JBF company

ಮಂಗಳೂರಿನ ಜೆಬಿಎಫ್ ಕಂಪೆನಿ ಬಂದ್ ಆಗಿದ್ದು, ಭೂಮಿಯನ್ನು ಕಳೆದುಕೊಂಡ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಎಂಆರ್​ಪಿಎಲ್ ನಲ್ಲಿ ಉದ್ಯೋಗ ನೀಡುವ ಭರವಸೆ ಸಿಕ್ಕಿದೆ.

Employment guarantee for landowners who lost job in JBF
ಕೆಲಸ ಕಳೆದುಕೊಂಡ ಭೂಸಂತ್ರಸ್ತರಿಗೆ ಉದ್ಯೋಗದ ಭರವಸೆ
author img

By

Published : May 12, 2022, 7:31 PM IST

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ಜೆಬಿಎಫ್ ಕಂಪೆನಿ ಬಂದ್ ಆಗಿದ್ದು, ಈ ಸಂಸ್ಥೆಗಾಗಿ ಭೂಮಿಯನ್ನು ಕಳೆದುಕೊಂಡ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಎಂಆರ್​ಪಿಎಲ್ ನಲ್ಲಿ ಉದ್ಯೋಗ ನೀಡುವ ಭರವಸೆಯನ್ನು ಕೈಗಾರಿಕಾ‌ ಸಚಿವ ಮುರುಗೇಶ್ ನಿರಾಣಿ ನೀಡಿದ್ದಾರೆ.

ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಂಗಳೂರಿಗೆ ಬಂದಿದ್ದ ಸಚಿವ ನಿರಾಣಿಯವರನ್ನು ಸಂತ್ರಸ್ತರು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರು ‌ಉದ್ಯೋಗದ ಭರವಸೆ ನೀಡಿದರು. ವಿಶೇಷ ಆರ್ಥಿಕ ವಲಯಕ್ಕಾಗಿ ಭೂಮಿ ನೀಡಿದ ಸಂತ್ರಸ್ತರಿಗೆ ಒಪ್ಪಂದದಂತೆ ಜೆಬಿಎಫ್ ಕಂಪೆನಿಯಲ್ಲಿ ಉದ್ಯೋಗ ನೀಡಲಾಗಿತ್ತು. ಆದರೆ ಕಾಮಗಾರಿ ಪೂರ್ತಿಗೊಳಿಸದೇ ಈ ಕಂಪೆನಿ ಆರ್ಥಿಕ ಮುಗ್ಗಟ್ಟಿನಿಂದ ಬಂದ್ ಆಯಿತು.

ಇದನ್ನೂ ಓದಿ: ರಮ್ಯಾ ಟ್ವೀಟ್​​ ಬಗ್ಗೆ ಬಹಿರಂಗ ಚರ್ಚೆ ಮಾಡಲ್ಲ: ಡಿಕೆಶಿ

ಈ ಕಂಪೆನಿಯಲ್ಲಿ ಭೂಮಿಯನ್ನು ಕೊಟ್ಟಿದ್ದ 26 ಮಂದಿ ಕೆಲಸದಲ್ಲಿದ್ದರು. ಇದೀಗ ಕೆಲಸ ಕಳೆದುಕೊಂಡಿರುವ 26 ಮಂದಿಯ ಕುಟುಂಬಸ್ಥರು ಸಚಿವ ಮುರುಗೇಶ್ ನಿರಾಣಿಯವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಂತ್ರಸ್ತರಿಗೆ ಜೆಬಿಎಫ್ ಕಂಪೆನಿ ಪುನಾರಾರಂಭವಾಗುವವರೆಗೆ ಎಂಆರ್​ಪಿಎಲ್ ನಲ್ಲಿ ತಾತ್ಕಾಲಿಕ ಉದ್ಯೋಗ ಕೊಡಿಸುವ ಬಗ್ಗೆ ಅಭಯ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.