ಮಂಗಳೂರು : ಕೇಂದ್ರ ಸರ್ಕಾರ ಇಂದು ಮಂಡನೆ ಮಾಡಿರುವ ಬಜೆಟ್ ಹೊಸ ರೂಪದ, ಸಮಗ್ರ ಅಭಿವೃದ್ಧಿಯ ಬಜೆಟ್ ಆಗಿದೆ. ಅಂದರೆ ಒಂದು ವಲಯದಿಂದ ಮತ್ತೊಂದು ವಲಯಕ್ಕೆ ಪ್ರಭಾವ ಬೀರುವಂತಹ ಬಜೆಟ್ ಆಗಿದೆ ಎಂದು ಆರ್ಥಿಕ ತಜ್ಞ, ಕೆನರಾ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್ ಹೇಳಿದರು.
ಕೃಷಿಯಲ್ಲಿ ರಾಗಿ ಮತ್ತಿತರ ಸಾವಯವ ಆಹಾರ ಸಾಮಾಗ್ರಿಗಳಿಗೆ ಆದ್ಯತೆ ನೀಡಲಾಗಿದೆ. ಅದರ ಪ್ರಭಾವ ಜನರ ಆರೋಗ್ಯದ ಮೇಲೆ ಬೀರುವಂತೆ ಮಾಡಿದೆ. ಈ ಮೂಲಕ ಬಹಳ ದೂರದೃಷ್ಟಿತ್ವದಿಂದ ಕೇಂದ್ರ ಸರ್ಕಾರ ಈ ಬಜೆಟ್ ಅನ್ನು ಮಂಡನೆ ಮಾಡಿದೆ ಎಂದರು.
ಇದನ್ನೂ ಓದಿ: ಬಡವರಿಗೆ ಸೂರು.. PMAY ಅಡಿ 80 ಲಕ್ಷ ಮನೆ ನಿರ್ಮಾಣಕ್ಕಾಗಿ 48 ಲಕ್ಷ ಕೋಟಿ ರೂ. ಬಜೆಟ್ನಲ್ಲಿ ಮೀಸಲು
ತಂತ್ರಜ್ಞಾನ ಕ್ಷೇತ್ರದಲ್ಲಿ ಡ್ರೋಣ್ ಶಕ್ತಿ ಪಾಲಿಸಿ, ಕ್ರಿಪ್ಟೋ ಕರೆನ್ಸಿ ಮೇಲೆ ತೆರಿಗೆ ಹಾಕಲಾಗಿದೆ. ಸಾರಿಗೆಯಲ್ಲಿ ಭೂಸಾರಿಗೆ, ಜಲಸಾರಿಗೆ, ವಾಯು ಸಾರಿಗೆಯನ್ನು ಏಕೀಕರಣ ಮಾಡಲಾಗಿದೆ. ಅದೇ ರೀತಿ ತೆರಿಗೆಯಲ್ಲಿ ಯಾವುದೇ ವ್ಯತ್ಯಾಸಗಳಾಗಿಲ್ಲ. ಆದ್ದರಿಂದ ಈ ಬಾರಿಯ ಬಜೆಟ್ ಹೊಸ ರೂಪದ ಬಜೆಟ್ ಆಗಿದೆ ಎಂದು ಹಮೀದ್ ಹೇಳಿದರು.
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ