ಮಂಗಳೂರು: ವ್ಯಕ್ತಿಯೊಬ್ಬ ನಾಯಿ - ಬೆಕ್ಕುಗಳಿಗೆ ವಿಷಪ್ರಾಶನ ಮಾಡಿ ಸಾಯಿಸುತ್ತಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಲಾಗಿದೆ.
ಮಂಗಳೂರಿನ ವೆಲೆನ್ಸಿಯಾ ನಿವಾಸಿ ಮನೋಹರ್ ಪ್ಯಾಸ್ ಈ ಕೃತ್ಯ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಇವರ ನೆರೆಮನೆಯ ಮೆಲ್ವಿನ್ ಪಿಂಟೋ ಎಂಬುವರು ಠಾಣೆಗೆ ದೂರು ನೀಡಿದ್ದಾರೆ.
ಮನೋಹರ್ ಪ್ಯಾಸ್ ಕಳೆದ 3- 4 ವರ್ಷಗಳಿಂದ ನಾಯಿ - ಬೆಕ್ಕುಗಳಿಗೆ ವಿಷ ಹಾಕಿ ಕೊಲ್ಲುವುದರಲ್ಲಿ ನಿರತನಾಗಿದ್ದಾನೆ. ಈತನಿಂದ ಪ್ರಾಣಿ ಮತ್ತು ಮನುಷ್ಯರಿಗೆ ಸಮಸ್ಯೆಯಾಗಿದೆ. ವಾರದ ಹಿಂದೆಯೂ ನಾಯಿ - ಬೆಕ್ಕುಗಳನ್ನು ವಿಷ ನೀಡಿ ಕೊಂದಿದ್ದಾನೆ. ಇದೇ ರೀತಿ ನನ್ನ ನಾಯಿಯೂ ವಿಷ ಸೇವಿಸಿ ಪ್ರಾಣ ಬಿಟ್ಟಿದೆ. ಹೀಗಾಗಿ ಈತನ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಮೆಲ್ವಿನ್ ಪಿಂಟೋ ಎಂಬುವವರು ದೂರು ನೀಡಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾರ್ಮಿಕರ ಪ್ರತಿಭಟನೆಗೆ ಮಣಿದ ಆ್ಯಪಲ್ ಬಿಡಿಭಾಗಗಳ ತಯಾರಿಕಾ ಕಂಪನಿ.. ಪೊಂಗಲ್ ಬಳಿಕ ಫಾಕ್ಸ್ಕಾನ್ ಪುನಾರಂಭ